- Advertisement -
ಬೀದರ – ಸದ್ಯ ಮುಷ್ಕರದಲ್ಲಿರುವ ಸಾರಿಗೆ ನೌಕರರ ಪತ್ನಿಯರು ಹಾಗೂ ಮಕ್ಕಳು ಬೀದರ್ ಕೇಂದ್ರ ಬಸ್ ನಿಲ್ದಾಣದ ಬಳಿ ತಟ್ಟೆ ಲೋಟ ಹಿಡಿದು ಪ್ರತಿಭಟನೆ ನಡೆಸಿದರು.
ನಮ್ಮ ಯಜಮಾನರು ಕರ್ತವ್ಯಕ್ಕೆ ಹೋದರೆ ೨೪ ಗಂಟೆಯ ತನಕ, ೩೬ ಗಂಟೆಯತನಕ ಮನೆಗೆ ಬರುವುದಿಲ್ಲ. ನಮಗೂ ಮಕ್ಕಳು ಮರಿಗಳಿದ್ದಾರೆ. ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡುವವರು ಲಕ್ಷಗಟ್ಟಲೆ ಸಂಬಳ ತಗೊಳ್ಳಬೇಕಾದರೆ ಇವರಿಗೇಕೆ ಹೆಚ್ಚು ಮಾಡುವುದಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
- Advertisement -
ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಘೋಷಣೆ ಕೂಗಿದ ಸಾರಿಗೆ ನೌಕರರ ಕುಟುಂಬಸ್ಥರು ನಾಳೆ ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು ಹಾಗೂ ಮಕ್ಕಳು ಸೇರಿ ವಿವಿಧ ವೃತದಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡುವ ಚಳವಳಿ ಮಾಡುವುದಾಗಿ ಹೇಳಿಕೊಂಡರು.