ಬೀದರ ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ನಿರ್ವಹಿಸಬೇಕಾದ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೀದರ ಜಿಲ್ಲಾಡಳಿತವು ಜಿಲ್ಲಾ ಕೋವಿಡ್ ವಾರ್ ರೂಮ ಕಾರ್ಯವನ್ನು ಬಲಪಡಿಸಿದೆ.
ಮೂರು ಅಧಿಕಾರಿಗಳ ತಂಡಗಳಿಂದ ಬೀದರ ಕೋವಿಡ್ ವಾರ್ ರೂಮ್ 24*7 ಕಾರ್ಯನಿರ್ವಹಣೆ ಮಾಡಲಿದೆ. ದೂರವಾಣಿ ಮೂಲಕ ಸಾರ್ವಜನಿಕರಿಗೆ ಕೋವಿಡ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಕೋವಿಡ್ ವಾರ್ ರೂಂ ದೂರವಾಣಿ, ಸಹಾಯವಾಣಿ: 08482-224316, 224317, 224318, 224319.
ಬೀದರ ಜಿಲ್ಲೆಯಲ್ಲಿ ಕೋವಿಡ್‌ಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಸಂಗ್ರಹಣೆ, ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳಲ್ಲಿ ಹಾಸಿಗೆಗಳ ಲಭ್ಯತೆ ಮಾಹಿತಿ ಮತ್ತು ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಲಭ್ಯತೆಯ ಮಾಹಿತಿ ನೀಡಲಾಗುತ್ತದೆ.
ಸಿಸಿ ಕ್ಯಾಮರಾಗಳ ನಿರಂತರ ವೀಕ್ಷಣೆ
ಬ್ರಿಮ್ಸ ಆಸ್ಪತ್ರೆಯಲ್ಲಿ ಎಲ್ಲಾ ವಾರ್ಡಗಳಲ್ಲಿ 28 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು ಅವುಗಳ ವಿಡಿಯೋ ವೀಕ್ಷಣೆಗಾಗಿ ಅಧಿಕಾರಿಗಳನ್ನು ನೇಮಿಸಿ ನಿರಂತರವಾಗಿ ವೀಕ್ಷಣೆ ಮಾಡಲಾಗುತ್ತಿದೆ.
ಸಿಸಿ ಕ್ಯಾಮರಾಗಳ ಮೂಲಕ ಏನಾದರು ನೂನ್ಯತೆ ಅಥವಾ ಇನ್ನೇನಾದರು ವಿಷಯಗಳ ಗಮನಕ್ಕೆ ಬಂದ ತಕ್ಷಣ ಕೂಡಲೇ ವಾರ್ ರೂಮನಿಂದ ಸಂಬಂಧಪಟ್ಟವರಿಗೆ ಕ್ರಮಕ್ಕಾಗಿ ಮಾಹಿತಿಯನ್ನು ರವಾನೆ ಮಾಡಲಾಗುತ್ತಿದೆ.
50 ಜನ ಅಧಿಕಾರಿಗಳ ನಿಯೋಜನೆ
ಅಂತೆಯೇ ಬೀದರ ಜಿಲ್ಲೆಯಲ್ಲಿ ಕರೋನಾ ಚಿಕಿತ್ಸೆಗಾಗಿ ಉಪಯೋಗಿಸುತ್ತಿರುವ ಸರ್ಕಾರಿ, ಅರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಮ್ಡಿಸಿವರ್ ಇಂಜೇಕ್ಷನ್ ಉಪಯೋಗ ಹಾಗೂ ಆಮ್ಲಜನಕ ಉಪಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನಿಗದಿತ ಅನುಬಂಧದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು.
ಈ ಮಾಹಿತಿಯನ್ನು ಪ್ರತಿ ದಿವಸ ಬೆಳಗ್ಗೆ 11 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ವರದಿಯನ್ನು ಕೋವಿಡ್ ವಾರ್ ರೂಮ್ ಗೆ ಸಲ್ಲಿಸುವ ಕಾರ್ಯನಿರ್ವಹಣೆಗಾಗಿ ಒಟ್ಟು 50 ಜನ ಅಧಿಕಾರಿಗಳನ್ನು ನಿಯೋಜಿಸಿ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳಿಗೆ ನಿರ್ದೇಶನ ಏನು
ಈ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಂಚಿಕೆ ಮಾಡಿರುವ ಆಸ್ಪತ್ರೆಗಳಲ್ಲಿ ರೇಮ್ಡಿಸಿವರ್ ಇಂಜೆಕ್ಷನ್ ಉಪಯೋಗ ಹಾಗೂ ಆಮ್ಲಜನಕದ ಉಪಯೋಗದ ಕುರಿತು ವರದಿ ಸಲ್ಲಿಸಬೇಕು. ಹಾಗೂ ಯಾವುದಾದರೂ ಅಹಿತಕರ ಘಟನೆ ಕಂಡುಬಂದಲ್ಲಿ ತಕ್ಷಣವೇ ಕೋವಿಡ್ ವಾರ್ ರೂಮ್‌ಗೆ ವರದಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಏಪ್ರಿಲ್ 4ರಿಂದಲೇ ವರದಿ
ಜಿಲ್ಲಾ ಕೋವಿಡ್ ವಾರ್ ರೂಮ್ ಬಲಪಡಿಸಲು ನಿಯೋಜನೆಗೊಂಡ ಅಧಿಕಾರಿಗಳು ಏಪ್ರೀಲ್ 30ರಿಂದೇ ವರದಿ ಮಾಡಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ತಮಗೆ ನಿಗದಿಪಡಿಸಿದ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಬೇಕು. ಕರ್ತವ್ಯ ನಿರ್ವಹಿಸಲು ನಿರಾಕರಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಒಂದು ಆಸ್ಪತ್ರೆಗೆ ಇಬ್ಬರು ಅಧಿಕಾರಿಗಳು
ಬೀದರ ಜಿಲ್ಲೆಯ ಎಂಟು ತಾಲೂಕುಗಳ ಸರ್ಕಾರಿ ಹಾಗೂ ಅರೇ ಸರ್ಕಾರಿ ಆಸ್ಪತ್ರೆಗಳಿಗೆ ತಲಾ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.
ಯಾವ ಯಾವ ಆಸ್ಪತ್ರೆಗಳು
ಬೀದರ ಜಿಲ್ಲೆಯ ಎಂಟು ತಾಲೂಕುಗಳ ಸರ್ಕಾರಿ ಹಾಗೂ ಅರೇ ಸರ್ಕಾರಿ ಆಸ್ಪತ್ರೆಗಳು ಬೀದರ ತಾಲೂಕಿನ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರೀಮ್ಸ್), 100 ಹಾಸಿಗೆಗಳ ಆಸ್ಪತ್ರೆ ಬೀದರ, ಕಸ್ತೂರಿ ಆಸ್ಪತ್ರೆ ಬೀದರ, ಗುದಗೆ ಆಸ್ಪತ್ರೆ ಬೀದರ, ಉದಯ ಆಸ್ಪತ್ರೆ ಬೀದರ, ಶ್ರೀ ಆಸ್ಪತ್ರೆ ಬೀದರ, ಬಿ.ಬಿ.ಎಸ್.ಆಸ್ಪತ್ರೆ ಬೀದರ, ಪ್ರಯಾವಿ (ಜೀವನ ರಕ್ಷಾ) ಆಸ್ಪತ್ರೆ ಬೀದರ, ಗುರುನಾನಕ ಆಸ್ಪತ್ರೆ ಬೀದರ, ಆನಂದ ಕ್ರೀಟಿಕೇರ್ ಆಸ್ಪತ್ರೆ ಬೀದರ, ಯುನೈಟೇಡ್ ಆಸ್ಪತ್ರೆ ಬೀದರ, ಸುರಕ್ಷಾ ಆಸ್ಪತ್ರೆ ಬೀದರ ಹುಮನಾಬಾದ್ ತಾಲೂಕಿನ ಸರ್ಕಾರಿ ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮನ್ನಾಎಖೇಳ್ಳಿ, ಸಮುದಾಯ ಆಸ್ಪತ್ರೆ, ಹಳ್ಳಿಖೇಡ, ಚಿಟಗುಪ್ಪ ತಾಲೂಕಿನ ಸಮುದಾಯ ಆಸ್ಪತ್ರೆ ಚಿಟಗುಪ್ಪಾ, ಭಾಲ್ಕಿ ತಾಲೂಕಿನ ಸರ್ಕಾರಿ ಆಸ್ಪತ್ರೆ, ಸಮುದಾಯ ಆಸ್ಪತ್ರೆ ನಿಟ್ಟೂರ (ಬಿ), ಔರಾದ್ ತಾಲೂಕಿನ ಸರ್ಕಾರಿ ಆಸ್ಪತ್ರೆ ಔರಾದ (ಬಿ), ಸಮುದಾಯ ಆಸ್ಪತ್ರೆ ಸಂತಪೂರ, ಕಮಲನಗರ ತಾಲೂಕಿನ ಸಮುದಾಯ ಆಸ್ಪತ್ರೆ ಕಮಲನಗರ, ಬಸವಕಲ್ಯಾಣ ತಾಲೂಕಿನ ಸರ್ಕಾರಿ ಆಸ್ಪತ್ರೆ, ಸಮುದಾಯ ಆಸ್ಪತ್ರೆ ರಾಜೇಶ್ವರ ಮತ್ತು ಪಾಟೀಲ್ ಆಸ್ಪತ್ರೆ, ಹುಲಸೂರು ತಾಲೂಕಿನ ಸಮುದಾಯ ಆಸ್ಪತ್ರೆ.
ಕರೋನಾ ಸ್ಪೋಟ ತಡೆಯಲು ಕ್ರಮ
ಜಿಲ್ಲೆಯಲ್ಲಿ ಕರೋನಾ ವೈರಸ್ (ಕೋವಿಡ್-19) ಎರಡನೇ ಅಲೆಯಿಂದಾಗಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ವೈರಾಣು ಕಾಯಿಲೆಯು ಸ್ಪೋಟಕ ಮತ್ತು ಹೆಚ್ಚು ಹರಡುವುದನ್ನು ತಡೆಗಟ್ಟುವ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಬೀದರ ಜಿಲ್ಲಾ ಕೋವಿಡ್ ವಾರ್ ರೂಮ್‌ನ್ನು ಆರಂಭಿಸಿ, ಅದನ್ನು ಬಲಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ