ಬೀದರ – ಬೀದರ ಜಿಲ್ಲೆಯ 4 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಸುಮಾರು 15.5 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಮಾಗರವಾಡಿ ಗಲ್ಲಿಯ ಮನೆಯಲ್ಲಿ ಅಕ್ರಮವಾಗಿ ಇಟ್ಟು ಮಾರಾಟ ಮಾಡುತ್ತಿದ್ದ ಮಾದಕ ದ್ರವ್ಯ ಹಾಗೂ ನಶೆ ಗುಳಿಗೆ, ಎಸ್ಕಫ್ ಸಿರಪ್ 36 ಬಾಟಲ್ಸ ಸೆನ್ಕೋಫ್ ಸಿರಪ್ 28 ಬಾಟಲ್ ಹಾಗೂ ನೈಟ್ರಾಜೆಪಮ್ ಟ್ಯಾಬ್ಲೆಟ್ 15 ಬಾಕ್ಸ 1.48 ಲಕ್ಷದ ಮಾಧಕ ದ್ರವ್ಯ ಗುಳಿಗೆ ಜಪ್ತಿ ಮಾಡಿದ್ದಾರೆ
ಸುಮಾರು ರೂ. 15.5 ಲಕ್ಷ ಬೆಲೆ ಬಾಳುವ ಸ್ವತ್ತು ವಶಪಡಿಸಿಕೊಂಡು ಈ ಸಂಬಂಧ 9 ಆರೋಪಿಗಳ ಬಂಧನ ಮಾಡಿದ್ದಾರೆ.
ಕಳ್ಳತನವಾಗಿದ್ದ ಬಂಗಾರ, ಬೆಳ್ಳಿ, ದ್ವಿಚಕ್ರ ವಾಹನಗಳು, ಸೇರಿ ವಿವಿಧ ಸ್ವತ್ತು ಜಪ್ತಿ…..29 ಗ್ರಾಂ ಬಂಗಾರ, 4 ತೊಲ ಬೆಳ್ಳಿ, 13 ದ್ವಿಚಕ್ರ ವಾಹನಗಳು, 25 ಸಾವಿರ ನಗದು ಹಣ ಕಳ್ಳ ರಿಂದ ಜಪ್ತಿ ಮಾಡಿದ ಪೋಲಿಸರು…..
ಬೀದರ ಮಾರ್ಕೆಟ್ ಠಾಣೆ, ಚಿಟ್ಟಗುಪ್ಪಾ ಪೋಲಿಸ್ ಠಾಣೆ, ಬೇಮಳಖೇಡ ಪೋಲಿಸ್ ಠಾಣೆ. ಬೀದರ ಸಬ ಅರ್ಬನ ಪೋಲಿಸ್ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 05 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ವಿವಿಧ ಪ್ರಕರಣದಲ್ಲಿ ಭಾಗಿಯಾದ 9ಜನ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ