ಬಸ್ ನಲ್ಲಿ ಸಾಗಿಸುತ್ತಿದ್ದ ಗಾಂಜಾ ಜಪ್ತಿ ಮಾಡಿದ ಬೀದರ್ ಪೊಲೀಸರು

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಅಬಕಾರಿ ಇಲಾಖೆ ಮಿಂಚಿನ ಕಾರ್ಯಚರಣೆ ಮಾಡಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗಾಂಜಾ ಜಪ್ತಿ ಮಾಡಿದ್ದಾರೆ.

ಖದೀಮರು ಎಷ್ಟೇ ಜಾಲಾಕಿತನದಿಂದ ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ಅಪರಾಧ ಕೃತ್ಯ ಮಾಡಿದರೂ ಪೊಲೀಸರ ಕಣ್ಣು ತಪ್ಪಿಸಲಾಗದು ಎಂಬುದಕ್ಕೆ ಇದೊಂದು ಉದಾಹರಣೆ. ಬೀದರ್ ಅಬಕಾರಿ ಇಲಾಖೆ ಖದೀಮರಿಗೆ ಎಚ್ಚರಿಕೆ ಕೊಟ್ಟಿದ್ದು ಯಾವುದೇ ತಂತ್ರವನ್ನು ಬಳಸಿಕೊಂಡು ಗಾಂಜಾ ಸರಬರಾಜು ಮಾಡಲು ಪ್ರಯತ್ನ ಮಾಡಿದರೂ ಪೊಲೀಸ್ ಇಲಾಖೆಯ ಕೈಗೆ ಸಿಕ್ಕಿ ಹಾಕಿಕೊಳ್ಳವುದು ಗ್ಯಾರಂಟಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಅಬಕಾರಿ ಖಚಿತ ಮಾಹಿತಿ ಮೇರೆಗೆ ಮಧ್ಯಾಹ್ನದ ಸಮಯದಲ್ಲಿ, ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಬೀದರ್ ವಲಯದ ಮರಕುಂದಾ ಗ್ರಾಮದ ವ್ಯಾಪ್ತಿಯಲ್ಲಿ NH-65 ರಲ್ಲಿ ಸಂಚರಿಸುತ್ತಿದ್ದ ಈ ಕ ರ ಸಾ ಸಂಸ್ಥೆಯ ಬಸ್ ವನ್ನು ತಡೆದು ಶೋಧನೆಯನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಅಕ್ರಮವಾಗಿ ರೂ. 1,60,000/- ಮೌಲ್ಯದ ಬೆಲೆಬಾಳುವ 16 ಕೆ.ಜಿ (08 Packets ಗಳಲ್ಲಿ) ಒಣ ಗಾಂಜಾ ಹೊಂದಿ, ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ ಆರೋಪಿತ ವ್ಯಕ್ತಿಯಾದ ಅನ್ವರ್ ಅಬ್ದುಲ್ ರೆಹಮಾನ್ ಶೇಕ್ ತಂದೆ ಅಬ್ದುಲ್ ರೆಹಮಾನ್ ಲಿಯಾಕತ್ ಹುಸೈನ್ ಶೇಕ್, ಠಾಣೆ, ಮುಂಬೈ ನಿವಾಸಿ ಇತನನ್ನು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಇವರ ಸಮಕ್ಷಮದಲ್ಲಿ ದಸ್ತಗಿರಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ವಿಧಾನಗಳನ್ನು ಇವರ ಸಮಕ್ಷಮದಲ್ಲಿ ಕೈಗೊಳ್ಳಲಾಯಿತು.

ಬೀದರ್ ವಲಯದ ಅಬಕಾರಿ ಉಪನಿರೀಕ್ಷಕರು ಪ್ರಕರಣವನ್ನು ದಾಖಲಿಸಿರುತ್ತಾರೆ. ದಾಳಿಯ ನೇತೃತ್ವ ವನ್ನು ಆನಂದ್ ಉಕ್ಕಲಿ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಇವರು ವಹಿಸಿದ್ದರು, ದಾಳಿಯಲ್ಲಿ ರವೀಂದ್ರ ಪಾಟೀಲ್ ಅಬಕಾರಿ ನಿರೀಕ್ಷಕ ಸುರೇಶ್ ಶಂಕರ್, ಶ್ರೀಮತಿ ಕೌಶಲ್ಯ , ದಿಲೀಪ್ ಠಾಕೂರ್ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಗಳಾದ ಅಪ್ಪರೆಡಿ ಭಾಗವಹಿಸಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group