ಬೀದರ್ ಪೊಲೀಸರ ಭರ್ಜರಿ ಬೇಟೆ: ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ, 456 ಕೆಜಿ ಗಾಂಜಾ ವಶ

Must Read

ಬೀದರ: ಬೀದರ್ ಜಿಲ್ಲೆ ಹುಮನಾಬಾದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೀದರ ಪೊಲೀಸರು ದಾಳಿ ನಡೆಸಿದರು.

ಬರೋಬ್ಬರಿ 456 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತೆಲಂಗಾಣದ ವಿಶಾಖಪಟ್ಟಣಂದಿಂದ ಮಹಾರಾಷ್ಟ್ರದ ಸೋಲಾಪೂರಕ್ಕೆ ಮೂರು ಕಾರುಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಪಡೆದ ಬೀದರ ಸೇನ್ ಪೊಲೀಸ ಅಧಿಕಾರಿ, ಬೀದರ ಜಿಲ್ಲಾ ಎಸ್.ಪಿ ಡಿ.ಎಲ್ ನಾಗೇಶ ಅವರ ಮಾರ್ಗದರ್ಶನದಲ್ಲಿ ಹುಮನಾಬಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‌ಐ ರವಿಕುಮಾರ ನಾಯ್ಕೋಡಿ ಅವರ ಸಹಯೋಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಿ 456 ಕೆಜಿ ಗಾಂಜಾ 22.80 ಲಕ್ಷ ಮೌಲ್ಯ. 9 ಲಕ್ಷದ ಮೂರು ಕಾರುಗಳು, 10,250 ನಗದು ಹಣ ಜಪ್ತಿ ಮಾಡಿದ್ದಾರೆ.

ಘಟನೆಯ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group