spot_img
spot_img

Bidar: ಮಾದಕ ವಸ್ತು ಕಳ್ಳ ಸಾಗಾಣಿಕೆ ತಡೆದ ಪೊಲೀಸರು

Must Read

spot_img
- Advertisement -

ಬೀದರ: ಜಿಲ್ಲೆಯಲ್ಲಿ ಮೊದಲ ಬಾರಿ ಎಂಬಂತೆ ಗಡಿ ಜಿಲ್ಲೆ ಬೀದರ್ ಪೋಲಿಸರು ಭರ್ಜರಿ ಬೇಟೆಯಾಡಿದ್ದು  pub ನಲ್ಲಿ ಉಪಯೋಗಿಸುವ ಸುಮಾರು 49.90 ಲಕ್ಷ ಮೌಲ್ಯದ (Psychotropic Substance MD Methamphetamine) ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಒಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ  ಮಧ್ಯೆ ಯಲ್ಲಿ ಇರುವ ಗಡಿ ಜಿಲ್ಲೆ  ಬೀದರ್ ಕಾಳ ಸಂತೆಕೋರರಿಗೆ ಮಾದಕ ವಸ್ತು ಸಾಗಾಟಗಾರರಿಗೆ ಅನುಕೂಲಕರ ಸ್ಥಳವಾಗಿ ಪರಿಣಮಿಸಿದ್ದು, ಮುಂಬೈಯಿಂದ ಹೈದರಾಬಾದ್ ಕ್ಕೆ  ಮಾದಕ ದ್ರವ್ಯ ಸೇವನೆ ವಸ್ತು ಸಾಗಾಟನೆ ಮಾಡುತ್ತಿರುವ ಬಗ್ಗೆ ಬೀದರ್ ಜಿಲ್ಲೆ ಪೊಲೀಸ್ ಗೆ ಮಾಹಿತಿ ಲಭ್ಯವಾದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಪುಲ್ ಅಲರ್ಟ್ ಆಗಿ ಕಾರ್ಯಾಚರಣೆಗೆ ಒಂದು ತಂಡವನ್ನು ಇಳಿಸಲಾಗಿತ್ತು ಎಂದು ಜಿಲ್ಲಾ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ

- Advertisement -

ಸಂಕ್ಷಿಪ್ತ ವರದಿ:

ಪಬ್ ಗಳಲ್ಲಿ ಬಳಸುವ ನಶೆಯ 55ಲಕ್ಷ ರೂ ಮೌಲ್ಯದ psychotropic substance powder ಪತ್ತೆ ಮಾಡಿದ ಜಿಲ್ಲಾ ಪೊಲೀಸ್ ಭರ್ಜರಿ ಕಾರ್ಯಚರಣೆ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈನಿಂದ ಹೈದರಾಬಾದ್‌ಗೆ ಅಕ್ರಮವಾಗಿ ಸಾಗಿಸುತ್ತಿದ್ದ 499 ಗ್ರಾಂ ‘ಸೈಕೋಟ್ರೋಪಿಕ್‌ ಸಬ್‌ಟ್ಯಾನ್ಸ್‌ ಎಂ.ಡಿ. ಮೆಥಂಫೆಟಮೈನ್‌’ ಹೆಸರಿನ ಮಾದಕ ವಸ್ತುವನ್ನು ಹುಮನಾಬಾದ್‌ ಬಳಿ ವಶಪಡಿಸಿಕೊಳ್ಳಲಾಗಿದೆ.

ಮುಂಬೈ ಹೈದ್ರಾಬಾದ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 65ರ ಹುಮನಾಬಾದ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹುಮನಾಬಾದ್ ಪೊಲೀಸರು. ಕಾರ್ ತಡೆದು ಪರಿಶೀಲನೆ ವೇಳೆ ಹೈದ್ರಾಬಾದ್ ಪಬ್ ಗಳಿಗೆ ಸಾಗಿಸುತ್ತಿದ್ದ 499ಗ್ರಾಮ ನಶೆಯ ಪೌಡರ್ ಹಾಗೂ ಒಂದು ಸಣ್ಣ ತೂಕದ ಯಂತ್ರ ವಶಪಡಿಸಿ ಕೊಂಡಿದ್ದರು.

- Advertisement -

ಬೀದರ್ ಜಿಲ್ಲೆಯಲ್ಲಿ ಕಳೆದ 15ವರ್ಷದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಪತ್ತೆ ಯಾದ ಡ್ರಗ್ಸ್  ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚನ್ನಬಸವಣ್ಣ ಲಂಗೋಟೆಯವರು ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ, ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡುವಂತಹ ಟೆಕ್ಕಿಗಳ ಮೇಲೆ ಕಾರ್ಯಾಚರಣೆ ಮಾಡಲು ರಚಿಸಿದ “Anti Narcotics squad” ಇಂದು ಮುಂಬೈಯಿಂದ ಹೈದ್ರಾಬಾದಕ್ಕೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಡ್ರಗ್ಸ್ ಅನ್ನು  ಶಿವಾಂಶು ರಜಪೂತ್, ಎ.ಎಸ್ಪಿ ರವರ ತಂಡವು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ ಇದು ಬೀದರ ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣವಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಿ ಶ್ಲಾಘಿಸಲಾಯಿತು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group