ಬೀದರ: ಬೀದರ ಅರಣ್ಯ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಭರ್ಜರಿ ಬೇಟೆಯಾಡಿದ್ದು ಶ್ರೀಗಂಧ ಮರ ಕಳವು ಮಾಡಿದ್ದ ೮ ಜನರನ್ನು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ನಡೆದಿದೆ ಘಟನೆ ನಡೆದಿದ್ದು ಬೀದರ್ ಜಿಲ್ಲಾ ಪೋಲಿಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಹುಮನಾಬಾದ್ ತಾಲೂಕಿನ ಕನಕಟ್ಟಾ ಗ್ರಾಮದ ದ್ರಾಕ್ಷಿ ತೋಟದ ಜಮೀನೊಂದರಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಕತ್ತರಿಸುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ೩೯.೨೮ ಕೆಜಿ. ಶ್ರೀಗಂಧ ಕಟ್ಟಿಗೆ ತುಂಡು ಸೇರಿದಂತೆ ೯ ಮೊಬೈಲ್, ೨ ಕೊಡಲಿ, ೨ ದ್ವಿಚಕ್ರ ವಾಹನ ಜಪ್ತಿ ಮಾಡಿ ಒಟ್ಟು ೪.೫೨ ಲಕ್ಷ ಮೌಲ್ಯದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ
ಪ್ರಕರಣ ಪತ್ತೆಯಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಪ್ರಶಂಸಿಸಿ ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಅವರು ನಗದು ಬಹುಮಾನ ಘೋಷಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ