ಬೀದರ – ಗಡಿ ಜಿಲ್ಲೆ ಬಿಸಿಲಿನ ನಾಡು ಎಂದು ಕರೆಯಲ್ಪಡುವ ಬೀದರ ಇವಾಗ ಮೈಕೊರೆಯುವ ಚಳಿಗೆ ಥಂಡಾ ಹೊಡೆದು ಜನರು ಮನೆ ಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ವಿಪರೀತ ಚಳಿಗೆ ನಗರದ ವಾಕಿಂಗ್ ಸ್ಪಾಟ್‌ಗಳು ಖಾಲಿ ಖಾಲಿ ಎನ್ನಿಸತೊಡಗಿವೆ. ಬೆಳಿಗ್ಗೆ 7 ಗಂಟೆಯಾದರೂ ಮನೆಯಿಂದ ಹೊರ ಬರಲು ಜನ ಹಿಂದೇಟು ಹಾಕುತ್ತಿದ್ದು
ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪುಗಳ ಮೊರೆ ಹೋಗಿದ್ದಾರೆ
ಟೊಪ್ಪಿ, ಸ್ವೆಟ್ಟರ್, ಗ್ಲೌಸ್ ಧರಿಸಿಯೇ ಮನೆಯಿಂದ ಹೊರ ಬರುತ್ತಿದ್ದಾರೆ ಬೀದರ್‌ನಲ್ಲಿ ಕನಿಷ್ಠ 7.9 ತಾಪಮಾನ ದಾಖಲಾಗಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.
ಡಿ.17ರವರೆಗೂ ಇದೇ ರೀತಿಯ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ. ಜನವರಿ ತಿಂಗಳಲ್ಲಿ ಇನ್ನಷ್ಟು ಚಳಿ, 5 ಡಿಗ್ರಿ ವರೆಗೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

