ಬೀದರ ವಿಧಾನ ಸಭಾ ಚುನಾವಣಾ ಅಖಾಡ

0
438

ಕಾಂಗ್ರೆಸ್ ಪಕ್ಷದ ಮೊದಲನೇ ಪಟ್ಟಿ ಬಿಡುಗಡೆ 

ಬೀದರ: ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಬೀದರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.

ಭಾಲ್ಕಿ ಕ್ಷೇತ್ರದಿಂದ ಈಶ್ವರ ಖಂಡ್ರೆ, ಬೀದರ್ ಉತ್ತರ ಕ್ಷೇತ್ರದಿಂದ ರಹೀಮ ಖಾನ್, ಬೀದರ್ ದಕ್ಷಿಣ ಕ್ಷೇತ್ರದಿಂದ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಹುಮನಬಾದ ಕ್ಷೇತ್ರದಿಂದ ರಾಜಶೇಖರ ಪಾಟೀಲ ಹೀಗೆ ಕಾಂಗ್ರೆಸ್ ಪಕ್ಷ ಹಾಲಿ ಶಾಸಕರಿಗೆ ಟಿಕೆಟ್ ಅಂತಿಮ ಗೊಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

ಆದರೆ ಎರಡು ಕ್ಷೇತ್ರಗಳಲ್ಲಿ ಗೊಂದಲ ಇರುವ ಕಾರಣಕ್ಕೆ ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿ ಯಲ್ಲಿ ಬಿಡುಗಡೆ ಸಾಧ್ಯತೆ ಇದೆ.

ಬಸವಕಲ್ಯಾಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ ಪುತ್ರ ಅಜಯ್ ಸಿಂಗ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಬಸವಕಲ್ಯಾಣ ನಲ್ಲಿ ಒಳಗಿನವರು ಹಾಗೂ ಹೊರಗಿನ ನವರ ಎಂಬ ಒಂದೇ ಕಾರಣಕ್ಕೆ ಆ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಇನ್ನು ಔರಾದ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಡಾ.ಭೀಮಸೇನ ರಾವ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ಎರಡು ಕ್ಷೇತ್ರದಿಂದ ಅಭ್ಯರ್ಥಿಗಳ ಆಯ್ಕೆ ಮಾಡುವುದು ಒಂದು ತಲೆ ನೋವು ಎಂದು ಪರಿಗಣಿಸಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ