Homeಸುದ್ದಿಗಳುಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಗೆ ₹3.5 ಕೋಟಿ ಲಾಭ - ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ...

ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಗೆ ₹3.5 ಕೋಟಿ ಲಾಭ – ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮಾಹಿತಿ

ಬಾಗಲಕೋಟೆ : ಜಿಲ್ಲೆಯ ಬೀಳಗಿ: ಪಟ್ಟಣ ಸಹಕಾರಿ ಬ್ಯಾಂಕ್ ಪ್ರಸಕ್ತ ಮಾರ್ಚ್ ಕೊನೆಯಲ್ಲಿ ₹3.5 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಜಿಲ್ಲೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ 28ನೇ ವರ್ಷದ ವಾರ್ಷಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ಸದ್ಯ ಬ್ಯಾಂಕ್ 16,306 ಸದಸ್ಯರನ್ನು ಹೊಂದಿದ್ದು ₹21.07 ಕೋಟಿ ಶೇರು ಬಂಡವಾಳ, ₹757.13 ಕೋಟಿ ಠೇವುಗಳು, ₹881.84 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ₹474.44 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲ ನೀಡಿದೆ’ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 18 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಉತ್ತಮ ಲಾಭದೊಂದಿಗೆ ಪ್ರಗತಿಯಲ್ಲಿವೆ’ ಎಂದರು.

ಬ್ಯಾಂಕಿನ ಸಲಹೆಗಾರ ಆಯ್.ವಿ.ಬಸರಕೋಡ ಬ್ಯಾಂಕಿನ ಪ್ರಗತಿ ಕುರಿತು ಮತ್ತು ಪ್ರಧಾನ ವ್ಯವಸ್ಥಾಪಕ ಜಿ.ಎಸ್.ಬನ್ನಟ್ಟಿ ಅಢಾವೆ ಪತ್ರಿಕೆ ಮತ್ತು ವಾರ್ಷಿಕ ವರದಿಯನ್ನು ಓದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇತ್ತೀಚೆಗೆ ಬಸವಶ್ರೀ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಪಾಟೀಲ ಅವರನ್ನು ಹಾಗೂ ಬ್ಯಾಂಕಿನ ಉತ್ತಮ ಗ್ರಾಹಕರನ್ನು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಿರ್ದೇಶಕ ಮಂಡಳಿಯ ಸದಸ್ಯರು ಗೌರವಿಸಿದರು.

ಉಪಾಧ್ಯಕ್ಷ ಎಸ್. ಆರ್. ಮೇಲ್ನಾಡ
ನಿರ್ದೇಶಕರಾದ ಎಚ್.ಎ.ಕೊಪ್ಪಳ, ಕೆ. ಎಸ್. ಪತ್ರಿ , ಶ್ರೀಮತಿ ವಿ.ಪಿ.ಆಯಾಚಿತ, ಪಿ. ಬಿ.ಗುರಾಣಿ, ಎ.ಎಚ್. ಬೀಳಗಿ, ಜಿ. ಎಸ್‌. ಕೆರೂರ, ಬಿ.ಎಸ್.ಮೊಖಾಶಿ, ಎಮ್.ಎನ್.ಪಾಟೀಲ, ಎಂ.ಎಲ್. ಕೆಂಪಲಿಂಗಣ್ಣವರ, ಡಿ.ಬಿ. ಮಮದಾಪುರ, ರಾಜಣ್ಣ ಬಾರಕೇರ, ಎಸ್. ಕೆ. ಯಡಹಳ್ಳಿ ಎಸ್.ಎ.ನೀರಲಗಿ, ಬಿ.ಎನ್.ನಾಗನಗೌಡ್ರ, ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ ಇದ್ದರು. ಗುರುರಾಜ ಲೂತಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group