- Advertisement -
ಮುನವಳ್ಳಿ: ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಪಟ್ಟಾಧಿಕಾರ ಸ್ವೀಕರಿಸಿ ಶ್ರೀ ಮ. ನಿ. ಪ್ರ. ಸ್ವ. ಸದಾಶಿವ ಮಹಾಸ್ವಾಮಿಗಳಾದ (ಅನ್ನದಾನಿ ದೇವರು) ನಂತರ ಮೌನಾನುಷ್ಠಾನ ಮುಗಿಸಿಕೊಂಡು ಮುನವಳ್ಳಿ ಶ್ರೀ ಸೋಮಶೇಖರ ಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ದರ್ಶನಾಶೀರ್ವಾದಕ್ಕೆ ಮೊಟ್ಟ ಮೊದಲ ಬಾರಿಗೆ ಮುನವಳ್ಳಿ ಬಂದು ದೇವಾಲಯಕ್ಕೆ ಆಗಮಿಸಿ ಶ್ರೀ ಪಂಚಲಿಂಗೇಶ್ವರ ದರ್ಶನ ಪಡೆದು ಶ್ರೀ ಮಠಕ್ಕೆ ತೆರಳಿದರು.
ಚೀಕಲಪರ್ವಿ ಪೂಜ್ಯರು ಮುನವಳ್ಳಿಯ ಶ್ರೀ ಮಠದಲ್ಲಿದ್ದು, ಗುರುವಿನ ಸೇವೆ ಮಾಡಿ,ಶ್ರೀ ಮುರುಘೇಂದ್ರ ಪೂಜ್ಯರ ಕರುಣೆಯ ಕಂದರಾಗಿ,ಹೆಚ್ಚಿನ ವ್ಯಾಸಂಗವನ್ನು ಸುತ್ತೂರಿನ ಮಠದಲ್ಲಿ ಪೂರೈಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಲ್ಲಿ ಸ್ನಾತಕೋತ್ತರ ಪದವಿ (ಎಂ.ಎ ತತ್ವ ಶಾಸ್ತ್ರ)ಯಲ್ಲಿ ಎರಡು ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿರುವರು.ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ಜೊತೆಗೆ ಕನ್ನಡ ಸಾಹಿತ್ಯ ದಲ್ಲಿ ಕವನಗಳನ್ನು ರಚಿಸುವ ಮೂಲಕ ಸಹೃದಯ ಕವಿಗಳಾಗಿರುವರು.