ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನರ್ಸರಿ ಪುಟಾಣಿಗಳಿಂದ ನೀಲಿ ವರ್ಣದ ದಿನ ಹಾಗೂ ಮಳೆಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಒಂದು ಕಿರು ನಾಟಕವನ್ನು ಪ್ರದರ್ಶಿಸುವ ಮೂಲಕ ಕಂದಮ್ಮಗಳು ಕಾಡು ನಾಶವಾದರೆ ಮಳೆ ಬರುವುದಿಲ್ಲ, ನಾವು ಮರಗಳನ್ನು ಬೆಳೆಸಿದರೆ ಮಾತ್ರ ಮಳೆ ಬರುತ್ತದೆ, ಗಿಡ, ಮರ ಬೆಳೆಸಿ ನಾಡು ಉಳಿಸಿ ಎಂಬ ಶೀರ್ಷಿಕೆ ಗೀತೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು.
ಈ ಆಚರಣೆಯಲ್ಲಿ ಆಡಳಿತಾಧಿಕಾರಿ ಶ್ರೀಮತಿ ಕಾಂತಿನಾಯಕ, ಮುಖ್ಯೋಪಾಧ್ಯಾಯ ಮೊಹಮ್ಮದ ಫಾರೂಕ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

