ಮೂಡಲಗಿ – ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಬರಹಗಾರರು (ಬಾಂಡ್ ರೈಟರ‍್ಸ ) ಒಕ್ಕೂಟದ ಆದೇಶ ಮೇರೆಗೆ ಪಟ್ಟಣದ ಉಪನೋಂದಣಿ ಕಛೇರಿ ಆವರಣದಲ್ಲಿ ಲೇಖನಿ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ೨ನೇ ದಿನದಲ್ಲಿ ಮುಂದುವರೆದಿದೆ.
ಮುಷ್ಕರದಿಂದ ಸಾರ್ವಜನಿಕರಿಗೆ ಹಾಗೂ ಬ್ಯಾಂಕ್ ವ್ಯವಹಾರಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಜಮೀನು ಖರೀದಿದಾರರಿಗೆ, ಮಾರ್ಟಗೇಜ ಮಾಡಿಸುವವರಿಗೆ, ಇನ್ನಿತರ ನೋಂದಣಿ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದ್ದು, ಆದಷ್ಟು ಬೇಗ ಇವರ ಬೇಡಿಕೆಗಳನ್ನು ಸರಕಾರ ಪೂರೈಸಿ ಸಾರ್ವಜನಿಕರಿಗೆ ಅನೂಕುಲ ಮಾಡಿಕೊಡಬೇಕು ಎನ್ನುವದು ಸಾರ್ವಜನಿಕರ ಆಗ್ರಹವಾಗಿದೆ.
ಪತ್ರ ಬರಹಗಾರಾದ (ಬಾಂಡ್ ರೈಟರ‍್ಸ ) ಪಿ.ಬಿ.ಹಿರೇಮಠ, ಆರ್.ಎಮ್.ಕುಲಕರ್ಣಿ, ಎಲ್.ಸಿ.ಗಾಡವಿ, ಕೆ.ಎಸ್.ಹುಬಳಿ, ಎಮ್.ಎನ್.ಶಿರಸಂಗಿ, ರಾಜು ಅಥಣಿ, ಎಸ್.ಬಿ.ಸಿದ್ದುಮಾಳಿ, ಎಸ್.ಎನ್.ಗೋಟಡಕಿ, ಎ.ಎಮ್.ಥರಥರಿ, ಆರ್.ಎಮ್.ಮಂಗಸೂಳಿ, ವಿ.ಎಸ್.ಶಿರಸಂಗಿ, ಜೆ.ಬಿ.ಗೋಕಾಕ, ಪರಶುರಾಮ ಮಡಿವಾಳರ, ಅಭಿನವ ಚಿಂಚಲಿ, ಶಿವಾನಂದ ಸಸಾಲಟ್ಟಿ, ಶಿವಾನಂದ ಸಣ್ಣಕ್ಕಿ, ಬಸವರಾಜ ಮುಧೋಳ, ಮಹಾದೇವ ನವನಿ, ಬಸವರಾಜ ಅಳಗೋಡಿ, ಸಂಜು ಅಂಗಡಿ, ಗುರುಸಿದ್ದ ತುಪ್ಪದ, ಸಂಜಯ ಪಾರ್ಶಿ, ಕುಮಾರ ಜಂಗನವರ, ದರ್ಶನ ಹಟ್ಟಿ, ರಮೇಶ ಸನ್ನಮಾನಿ, ರವಿ ಶಾಬನ್ನವರ, ಈರಪ್ಪ ಪಾರ್ಶಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

