ಧರಣೇಂದ್ರಕುಮಾರ್ ಗೆ ಪುಸ್ತಕ ಪರಿಚಾರಕ ಪ್ರಶಸ್ತಿ

Must Read

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕೊಡಮಾಡುವ ” ಪುಸ್ತಕ ಪರಿಚಾರಕ ಪ್ರಶಸ್ತಿ -೨೦೨೫ ” ಪ್ರಶಸ್ತಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ ದ್ವಿತೀಯ ದರ್ಜೆ ಸಹಾಯಕ ಧರಣೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಇವರು 2003 ನವಂಬರ್ ನಿಂದ ಪುಸ್ತಕ ಓದು ಪ್ರಾರಂಭವಾಗಿ ನಿರಂತರ 2025 ರಲ್ಲಿ ಇದೀಗ 1127ನೇ ಕೃತಿಯ ಓದಿನಲ್ಲಿ ತೊಡಗಿಕೊಂಡಿರುತ್ತಾರೆ. ಪುಸ್ತಕ ಪ್ರೀತಿಯ ಅನಂತ ಪಯಣ ನನ್ನ ಬದುಕಿನ ಮಾರ್ಗಸೂಚಿಯಾಗಿದೆ ಎಂದು ಬಾವಿಸುವೆ ಎಂಬುವುದನ್ನು ಅರಿತು 2002 ರಿಂದ 2010 ಸ.ಪ್ರೌ.ಶಾಲೆ ಬೆಟ್ಟಗೆರೆಯಲ್ಲಿ ಮೂಡಿಗೆರೆ ತಾ/ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿದ್ದು, 2011 ರಿಂದ ಸ.ಪ.ಪೂ.ಕಾಲೇಜು, ಸಾಣೂರು ಕಾರ್ಕಳ ತಾ/ ಉಡುಪಿ ಜಿಲ್ಲೆಯಲ್ಲಿ ದ್ವಿ.ದ.ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಾರೆ.

2013 ಕಾರ್ಕಳ ತಾ/ (ಬೆಳ್ಮಣ್) ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ
2014ರಲ್ಲಿ ಚಿಕ್ಕಮಗಳೂರು(ಬೀರೂರು) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗಿ
2017ರಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ (ಗೊಮ್ಮಟಬೆಟ್ಟ) ಕಾರ್ಕಳ ಕವಿಗೋಷ್ಠಿಯಲ್ಲಿ ಭಾಗಿ.
2018ರಲ್ಲಿ ಉಡುಪಿ ಜಿಲ್ಲಾ (ಬೈಂದೂರು)ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ
2021ರಲ್ಲಿ ನನ್ನೂರಾದ ಅಜ್ಜಂಪುರದಲ್ಲಿ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group