ಸಿಂದಗಿ: ಸ್ಥಳಿಯ ವಿದ್ಯಾಚೇತನ ಪ್ರಕಾಶನದ ರಜತ ವರ್ಷ 2021-22ರ ನಿಮಿತ್ತ ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಪುಸ್ತಕ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುಸ್ತಕ ಸಂಸೃತಿಕ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಂ. ಪಡಶೆಟ್ಟಿ ಆಗಮಿಸುವರು. ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ. ಪೂಜಾರ ವಿರಚಿತ ಯಾರು ಜಾಣರು ಮಕ್ಕಳ ಕಥಾ ಸಂಕಲನ ಪುಸ್ತಕ ಲೋಕಾರ್ಪಣೆಗೊಳ್ಳುವುದು. Wಳಗೂಳದ ಕೆಬಿಎಸ್ ಮುಖ್ಯಗುರು ಎಸ್.ಎಸ್. ಸಾತಿಹಾಳ ಪುಸ್ತಕ ಪರಿಚಯಿಸುವರು. ಪಿಯುಸಿ ವಿದ್ಯಾರ್ಥಿಗಳಾದ ರವಿ ರೆಬಿನಾಳ, ಶಿವಲೀಲಾ ಬಿರಾದಾರ ಅವರು ಕಥಾಸಂಕಲನದಲ್ಲಿನ ಕಥೆಗಳ ಕುರಿತು ಮಾತಮನಾಡುವರು. ಪ್ರಕಾಶಕ, ಮಕ್ಕಳ ಸಾಹಿತಿ ಹ.ಮ. ಪೂಜಾರ ಉಪಸ್ಥಿತಿಯಿರುವರು ಎಂದು ವಿದ್ಯಾಚೇತನ ಪ್ರಕಾಶನದ ಪ್ರಕಟಣೆ ತಿಳಿಸಿದೆ.