Homeಸುದ್ದಿಗಳುಚಿಂತಕರ ಚಾವಡಿ ಬೆಳಗಾವಿ ವತಿಯಿಂದ 'ಪುಸ್ತಕ ಬಿಡುಗಡೆ 'ಮತ್ತು 'ಚಿಂತನ' ಕಾರ್ಯಕ್ರಮ

ಚಿಂತಕರ ಚಾವಡಿ ಬೆಳಗಾವಿ ವತಿಯಿಂದ ‘ಪುಸ್ತಕ ಬಿಡುಗಡೆ ‘ಮತ್ತು ‘ಚಿಂತನ’ ಕಾರ್ಯಕ್ರಮ

ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ‘ಚಿಂತನ ಚಾವಡಿ ಬೆಳಗಾವಿ’ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮಗಳ ಸರಣಿಯಲ್ಲಿ ಪುಸ್ತಕ ಬಿಡುಗಡೆ ಮತ್ತು ಚಿಂತನ ಕಾರ್ಯಕ್ರಮ ಇದೇ ಶುಕ್ರವಾರ ದಿ. 21 ರಂದು ಬೆಳಗಾವಿ ಆಂಜನೇಯ ನಗರದ ಮುತಾಲಿಕ್ ದೇಸಾಯಿಯವರ ಸಭಾಗೃಹದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಮತ್ತು ತನ್ಮಯ ಪ್ರಕಾಶನ ಬೆಳಗಾವಿಯ ಅಧ್ಯಕ್ಷರಾದ ಅಶೋಕ ಉಳ್ಳೆಗಡ್ಡಿ, ಇತ್ತೀಚಿನ ದಿನಗಳಲ್ಲಿ ನಾವು ನಮ್ಮಲ್ಲಿಯೇ ಸುತ್ತಮುತ್ತಲಿರುವ ಸಾಧಕರನ್ನು ಮರೆಯುತ್ತಿದ್ದೇವೆ. ಆ ನಿಟ್ಟಿನಲ್ಲಿ ಅವರ ಸೇವೆ ಗೌಪ್ಯವಾಗಿಯೇ ಉಳಿಯುತ್ತಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಕಾರ್ಯ ನಿರ್ವಹಿಸಿರುವವರನ್ನು ನಾವು ನೆನೆಯಬೇಕು ಮತ್ತು ಸಮಾಜದಲ್ಲಿ ಚಿಂತನಶೀಲ ವಿಚಾರಗಳು ಮೇಲಿಂದ ಮೇಲೆ ಅನುಭವಿಗಳಿಂದ ಬಿತ್ತರಿಸುತ್ತಾ ಸಾಗಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗಂದಿಗವಾಡ ರಾಜಗುರು ಸಂಸ್ಥಾನ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಮಾತನಾಡಿ ಸಮಾಜದ ಅಹಿತಕರ ನಡಾವಳಿಗಳನ್ನು ತಿದ್ದಲು ಮತ್ತು ಸಾಮಾಜಿಕವಾಗಿ ಚಿಂತನಶೀಲ ವಿಷಯಗಳು ನಿರಂತರವಾಗಿ ಕಾಯ್ದುಕೊಂಡು ಬರಬೇಕಾದರೆ ಸಾಹಿತ್ಯಿಕ ಮತ್ತು ಚಿಂತನಶೀಲ ಗೋಷ್ಠಿಗಳು ನಡೆಯುತ್ತಾ ಇರಬೇಕು. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತ ಸಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಕ ಎಂ.ವೈ ಮೆಣಸಿನಕಾಯಿ ಅವರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಪುಸ್ತಕದ ಪರಿಚಯ ಉಪನ್ಯಾಸಕರಾದ ಚಂದ್ರಶೇಖರ್ ಕಾಂಬೋಜಿ ಅವರು ಮಾಡಿದರು ಮತ್ತು ನ್ಯಾಯವಾದಿ ಮತ್ತು ಸಾಹಿತಿ ಸುನಿಲ್ ಸಾಣಿಕೊಪ್ಪ ರವರು ರಚಿಸಿದ ‘ಬಯಲು ಗೀತ’ ಕವನಸಂಕಲನದ ಪರಿಚಯವನ್ನು ಸಾಹಿತಿ ಶಿವಾನಂದ ತಲ್ಲೂರ ರವರು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಕೃತಿ ರಚಿಸಿದ ಎಂ. ವೈ. ಮೆಣಸಿನಕಾಯಿ, ಸುನೀಲ ಸಾಣಿಕೊಪ್ಪ, ರಾಷ್ಟ್ರ ಪ್ರಶಸ್ತಿ ವಿಜೇತರ ಶಿಕ್ಷಕರಾದ ಎಸ್ ಆರ್,ಪಾಟೀಲ, ಎಸ್ ಎಸ್ ಹಿರೇಮಠ, ಎ. ಎ.ಸನದಿ, ಮುತಾಲಿಕ್ ದೇಸಾಯಿ,ಆರ್ ಎಸ್ ಚಾಪಗಾವಿ, ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾವತಿ ಸೋನೋಳ್ಳಿ, ಡಾ. ಜಯವಂತ ಧನವಂತ, ಅಕ್ಕಮಹಾದೇವಿ ತೆಗ್ಗಿ, ಡಾ. ಆನಂದ ಬೆಳಗಾವಿ ಸೇರಿದಂತೆ ಸಾಹಿತ್ಯಾಸಕ್ತರು ಮತ್ತು ಚಿಂತನ ಚಾವಡಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಅರ್ಪಿತ ಜೋಶಿ ಪ್ರಾರ್ಥಿಸಿದರು. ಬಸವರಾಜ ಸುಣಗಾರ ಸ್ವಾಗತಿಸಿದರು. ಸ. ರಾ. ಸುಳಕೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ ಎಂ ಬೂದಿಹಾಳ ವಂದಿಸಿದರು. ವೀರಭದ್ರ ಅಂಗಡಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group