Homeಸುದ್ದಿಗಳುಸ್ವಾತಂತ್ರೋತ್ಸವ ನಿಮಿತ್ತ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪದಗ್ರಹಣ ಸಮಾರಂಭ

ಸ್ವಾತಂತ್ರೋತ್ಸವ ನಿಮಿತ್ತ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪದಗ್ರಹಣ ಸಮಾರಂಭ

ಬೆಳಗಾವಿ : ನಗರದ ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ಸ್ವಾತಂತ್ರ್ಯೋತ್ಸವದ ನಿಮಿತ್ತ ಸಾಹಿತಿ ಸ.ರಾ.ಸುಳಕೂಡೆ ಅವರ “ಸಂವರಣೆ” ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರವಿವಾರ ಆಗಸ್ಟ್ 10ರಂದು ಮುಂಜಾನೆ 10:30 ಕ್ಕೆ ರಾಮತೀರ್ಥ ನಗರದ ಉದಯ ಶಾಲೆ ಹತ್ತಿರದ ಹಾರೂಗೊಪ್ಪ ಸಭಾಭವನದಲ್ಲಿ ಜರುಗಲಿದೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿ ನಿ. ಪ್ರಾಧ್ಯಾಪಕ ಡಾ. ನಾಯಕ್, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಶಿಕಲಾ ಪಾವಸೆ ವಹಿಸುವರು. ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಬಿ.ಎಸ್. ಗಂಗನಹಳ್ಳಿ ಪುಸ್ತಕ ಬಿಡುಗಡೆಗೊಳಿಸುವರು.

ಫ್ರೊ.ಬಸವರಾಜ ಕುಪ್ಪಸಗೌಡ್ರ ಕೃತಿ ಪರಿಚಯಿಸುವರು. ಎಂದು ಕಾರ್ಯದರ್ಶಿ ಆರ್‌. ಬಿ. ಬನಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group