ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ, 16 ಜೂನ್ 2024ರಂದು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿಯ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಡಾ. ಸುನೀಲ ಪರೀಟ ಅವರ ಸ್ವರಚಿತ ಮಕ್ಕಳ ಕವನ ಸಂಗ್ರಹ ‘ಓ ನನ್ನ ಕಂದ’ ಹಾಗೂ ‘ನಮ್ಮ ಅನ್ನದಾತ’ ಎಂಬ ಸಂಪಾದಿತ ಕೃತಿಗಳನ್ನು ಲೋಕಾರ್ಪಣೆ ಮಾಡುವವರಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಹೊನ್ನಾಳಿಯ ಹಿರಿಯ ಸಾಹಿತಿಗಳು ಪ್ರೊ. ಯು. ಎನ್. ಸಂಗನಾಳಮಠ ವಹಿಸಲಿದ್ದಾರೆ. ಕೃತಿಗಳ ಕುರಿತು ಡಾ. ನಿರ್ಮಲಾ ಬಟ್ಟಲ ಹಾಗೂ ಡಾ. ಅ.ಬ. ಇಟಗಿ ಅವರು ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರು ಪ್ರೊ. ಎಸ್.ಎಂ. ಗಂಗಾಧರಯ್ಯ, ಪ್ರಕಾಶಕರಾದ ಡಾ. ಶಿವು ನಂದಗಾವ, ಬೆಳಗಾವಿಯ ಹಿರಿಯ ಸಾಹಿತಿಗಳು ಸ. ರಾ. ಸುಳಕೂಡೆ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಉಪಸ್ಥಿತರಿರುವರು.
‘ನಮ್ಮ ಅನ್ನದಾತ’ ಕವನ ಸಂಕಲನದಲ್ಲಿಯ ರಾಜ್ಯದ ಮೂಲೆ ಮೂಲೆಯಿಂದ ನೂರಾರು ಕವಿಗಳು ಸಾಹಿತಿಗಳು ಆಗಮಿಸುವರು. ಕಾರ್ಯಕ್ರಮವು ಮುಂಜಾನೆ ಸರಿಯಾಗಿ 10:30ಕ್ಕೆ ಆರಂಭಗೊಳ್ಳುವುದು.