ಸಿಂದಗಿ- ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ವಿಜಯಪುರ ಹಾಗೂ ಕಲಕೇರಿಯ ಎ.ಕೆ.ಸಿರಸಗಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ಪದವಿ
ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕುಸ್ತಿ
ಸ್ಪರ್ಧೆಯಲ್ಲಿ ಸಿಂದಗಿಯ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಗೈದಿದ್ದಾರೆ.
೭೯ ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಯಲ್ಲಾಲಿಂಗ ಪೂಜಾರಿ, ೬೮ ಕೆಜಿ ವಿಭಾಗದ ಕುಸ್ತಿಯಲ್ಲಿ ಜ್ಯೋತಿ ನಾಯಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೭೭ ಕೆಜಿಯ ಗ್ರೀಕೋ ರೋಮನ ಕುಸ್ತಿಯಲ್ಲಿ ವಿನಯ ವಿಶ್ವಕರ್ಮ ದ್ವಿತೀಯ ಸ್ಥಾನ, ೬೦
ಕೆಜಿಯ ಫ್ರೀ ಸ್ಟೈಲ್ ವಿಭಾಗದಲ್ಲಿ ಅರ್ಪಿತಾ ಅಂಕಲಗಿ, ೬೩ ಕೆಜಿಯ ವಿಭಾಗದಲ್ಲಿ ಅಮೋಗಿ ಇಬ್ರಾಹಿಂಪೂರ ದ್ವಿತೀಯ, ೪೦ ಕೆಜಿ ವಿಭಾಗದ ಬೆಲ್ಟ್ ಕುಸ್ತಿ ಯಲ್ಲಿ ಯಶೋಧಾ ಗುಡಿಮನಿ ದ್ವಿತೀಯ ಸ್ಥಾನ, ೫೦ ಕೆಜಿ ವಿಭಾಗದಲ್ಲಿ
ಪೂಜಾ ಜಾಧವ ತೃತೀಯ ಸ್ಥಾನ, ೬೦ ಕೆಜಿ ವಿಭಾಗದಲ್ಲಿ ಸಂಪತ್ ಬಿರಾದಾರ ತೃತೀಯ ಸ್ಥಾನ ಬಂದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾದ ಅಶೋಕ ಮನಗೂಳಿ ಮತ್ತು ನಿರ್ದೇಶಕ ಮಂಡಳಿ ಮತ್ತು ಕಾಲೇಜಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ದೈಹಿಕ ಉಪನ್ಯಾಸಕ ಸತೀಶ ಬಸರಕೋಡ, ಉಪನ್ಯಾಸಕರಾದ ಎಸ್.ಎ.ಪಾಟೀಲ, ಬಿ.ಎಸ್.ಬಿರಾದಾರ, ಎಫ್.ಎ.ಹಾಲಪ್ಪನವರ,
ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಮುಕ್ಕಾಯಕ್ಕ ಕತ್ತಿ, ಎ.ಆರ್.ಸಿಂದಗಿಕರ, ಡಾ.ಶಾಂತುಲಾಲ ಚವ್ಹಾಣ, ಎ.ಬಿ.ಪಾಟೀಲ, ಸಿದ್ದಲಿಂಗ ಕಿಣಗಿ, ಸುರೇಶ ಮಂಗೋಡಿ, ಗಂಗಾರಾಮ ಪವಾರ ಸನ್ಮಾನಿಸಿ ಗೌರವಿಸಿದ್ದಾರೆ.