ಮೂಡಲಗಿ: ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ನಾಮದೇವ ಶಿಂಪಿ ಸಮಾಜದ ವಧು-ವರರ ಹಿತಕ್ಕಾಗಿ ಶೀಘ್ರದಲ್ಲಿಯೇ ಉತ್ತರ ಕರ್ನಾಟಕದ ಭಾಗದಲ್ಲಿ ರಾಜ್ಯ ಮಟ್ಟದ ವಧು-ವರರ ಸಮಾವೇಶವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ನಾಮದೇವ ಸಿಂಪಿ ಸಮಾಜ ವಧು-ವರರ ವೇದಿಕೆಯ ರಾಜ್ಯಾಧ್ಯಕ್ಷ ಸತೀಶಕುಮಾರ ಪಿಸೆ ಹೇಳಿದರು.
ಅವರು ಗುರುವಾರದಂದು ಪಟ್ಟಣದಲ್ಲಿ ಜರುಗಿದ ನಾಮದೇವ ಶಿಂಪಿ ಸಮಾಜದ ಸಭೆಯಲ್ಲಿ ಮಾತನಾಡಿ, ವೇದಿಕೆಯು ಈಗಾಗಲೆ ಸುಮಾರು 1500 ಸದಸ್ಯರು ಹೊಂದಿರುವ ನಾಮದೇವ ಶಿಂಪಿ ಸಮಾಜದ ಭಾಂಧವರು ಯುವ ಸಮುದಾಯದ ಕಲ್ಯಾಣ ಕಾರ್ಯಕ್ಕಾಗಿ ವೇದಿಕೆಯಲ್ಲಿ ಸದಸ್ಯತ್ವ ಪಡೆದು ತಮ್ಮ ತಮ್ಮ ಮಕ್ಕಳ ಕಲ್ಯಾಣ ಕಾರ್ಯಕ್ಕೆ ವಧು-ವರರಿಗೆ ಸಂಪರ್ಕಕೊಂಡಿಯಾಗುವುದಕ್ಕೆ ಸಹಕರಿಸಬೇಕು ಎಂದರು.
ವಧು-ವರರಿಗೆ ಸಂಪರ್ಕ ಕಲ್ಪಿಸಲು ವೇದಿಕೆಯ ಪಾತ್ರ ಬಹಳ ಮುಖ್ಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 50 ಜೋಡಿಗಳಿಗೆ ಕಲ್ಯಾಣ ಕಾರ್ಯ ಮಾಡಿದ್ದು ನಾಮದೇವ ಸಿಂಪಿ ಸಮಾಜ ಭಾಂದವರು ವೇದಿಕೆಯ ವಿಚಾರವನ್ನು ರಾಜ್ಯಾಂದ್ಯಂತ ಪಸರಿಸಿ ವಧು-ವರರ ಸಮಾವೇಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾನಂದ ಅತಡ್ಕರ ಮಾತನಾಡಿ, ನಾಮದೇವ ಶಿಂಪಿ ಸಮಾಜದ ಬಾಂಧವರು ವಧು-ವರರ ಏಜೆಂಟರಿಂದ ಭಾರಿ ಪ್ರಮಾಣದಲ್ಲಿ ಮೋಸವಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳುವದಕ್ಕೆ ಸಮಾಜ ಭಾಂದವರು ಸ್ಪಂದಿಸಬೇಕೆಂದರು.
ಮಹಾಲಿಂಗಪೂರ ಸಮಾಜದ ಮುಖಂಡ ಹಾಗೂ ಉದ್ಯಮಿ ಬಾಲಕೃಷ್ಣ ಮಾಳೋದೆ ಮಾತನಾಡಿ, ವಧು-ವರರ ಸಮಾವೇಶವನ್ನು ಉತ್ತರ ಕರ್ನಾಕ ಭಾಗದಲ್ಲಿ ಹಮ್ಮಿಕೊಳ್ಳುವುದಾರೆ ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರದಲ್ಲಿ ಹಮ್ಮಿಕೊಂಡರೆ ಎಲ್ಲ ರೀತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಗಾಗಿ ಭರವಸೆ ನೀಡಿದರು.
ವೇದಿಕೆಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಬೊಂಗಾಳೆ ಮಾತನಾಡಿ, ಯಾವುದೇ ಒಂದು ಕೆಲಸಕ್ಕೆ ಒಗ್ಗಟ್ಟು ಬಹಳ ಮುಖ್ಯ, ನಾಮದೇವ ಸಿಂಪಿ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದ ಇಂದು ಎಷ್ಟು ಯುವಕ-ಯುವತಿಯರ ಸುಮಾರು 30-35 ಕ್ಕಿಂತ ಹೆಚ್ಚು ವಯಸ್ಸಾದರು ಕಲ್ಯಾಣ ಕಾರ್ಯ ನಡೆಯುವುದಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದರು.
ಈ ಸಮಯದಲ್ಲಿ ವೇದಿಕೆಯ ಸಹ ಕಾರ್ಯದರ್ಶಿ ಮಂಜುನಾಥ ರೇಳೆಕರ, ಮೂಡಲಗಿ ನಾಮದೇವ ಸಿಂಪಿ ಸಮಾಜ ಸಂಘದ ಅಧ್ಯಕ್ಷ ಶ್ರೀರಂಗ ಮಂದ್ರೋಳಿ, ಉಪಾಧ್ಯಕ್ಷ ಗಂಗಾರಾಮ ರೇಳೆಕರ, ಮುಖಂಡರಾದ ಜಗದೀಶ ಮಂದ್ರೋಳಿ, ಪಾಂಡು ಮಹೇಂದ್ರಕರ, ಪಾಂಡುರಂಗ ಮಂದ್ರೋಳಿ, ಸಚೀನ ಅಂಬೇಕರ, ಗಜಾನನ ರೇಳೆಕರ, ಚಂದ್ರಕಾಂತ ಕಾಕಡೆ, ಶಂಕರ ಕೊಂಕಣಿ, ಪ್ರಕಾಶ ಮಂದ್ರೋಳಿ, ಅಶೋಕ ಇತಾಪಿ, ಶ್ರೀಪಂತ ಹಾವಳ, ನಾರಾಯಣ ರೇಳೆಕರ ಮತ್ತಿತರರು ಇದ್ದರು.