ಸವದತ್ತಿ: ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಓದು ಬಹುಮುಖ್ಯವಾಗಿದೆ. ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳಿಗೆ ಮತ್ತು ಹೆತ್ತವರಿಗೆ ಕೀರ್ತಿ ತರುವಂತಹ ಕಾರ್ಯಮಾಡಿರೆಂದು ಪ್ರಧಾನ ಗುರುಗಳಾದ ಎಸ್.ಬಿ.ಜಂಬಗಿ ಹೇಳಿದರು.
ಮದ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಶಿಕ್ಷಕ ಜಿ.ಎ.ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ರಂಗಪೂರ ಶಾಲೆಯ ಪ್ರಧಾನಗುರುಗಳಾದ ಎಮ್.ಎಸ್.ಹರಿಜನ ಮತ್ತು ಮಬನೂರ ಜಾಕವೆಲ್ ಶಾಲೆಯ ಪ್ರಧಾನ ಗುರುಗಳಾದ ಎಸ್.ಎಮ್.ಸಂಗೊಳ್ಳಿ ಅತಿಥಿ ಸ್ಥಾನ ವಹಿಸಿ ಮಾತನಾಡಿದರು. ಶ್ರೀ ಸಿದ್ದೇಶ್ವರ ಸೇವಾ ಸಮಿತಿಯವರು ಕಲ್ಮೇಶ್ವರ ಜಾತ್ರೆಯ ನಿಮಿತ್ತ ಹಮ್ಮಿಕೊಂಡ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸಮಿತಿ ಸದಸ್ಯ ಆನಂದ.ಬಿಲಕಂಚಿ ಬಹುಮಾನ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀರಂಗಪೂರ ಶಾಲೆಯ ಶಿಕ್ಷಕರಾದ ಎಸ್.ಹೆಚ್.ಪಚ್ಚಿನವರ, ವಿ.ಪಿ.ಸೊನೊನೆ, ಬಿ.ಜಿ.ದೇವಡಿ ಮದ್ಲೂರ ಶಾಲೆಯ ಶಿಕ್ಷಕರಾದ ಎಮ್.ಎ.ಹುದ್ಲಿ, ಎಸ್.ಎನ್.ಗೊಂಧಳಿ, ಎಸ್.ಆಯ್.ಹಂಚಿನಮನಿ ಅತಿಥಿ ಶಿಕ್ಷಕರಾದ ಎಸ್.ಜಿ.ಸುಣಗಾರ, ಎಸ್.ಪಿ.ಪೂಜೇರ ನಿವೃತ್ತ ದೈಹಿಕ ಶಿಕ್ಷಕ ಎನ್.ಎ.ಹೊಟ್ಟಿನವರ ಗ್ರಾಮದ ಗಣ್ಯರಾದ ಎಫ್.ಎಸ್.ಹೊಟ್ಟಿನ್ನವರ,ನಿಂಗಪ್ಪ ಹೊಟ್ಟಿನವರ ಉಪಸ್ಥಿತರಿದ್ದರು.
ಮಕ್ಕಳು ಗೋಡೆ ಗಡಿಯಾರ ಹಾಗೂ ಪೋಟೋವನ್ನು ಶಾಲೆಗೆ ಕಾಣಿಕೆ ನೀಡಿದರು.ಕೊನೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಿಕ್ಷಕರಾದ ಬಿ.ಎನ್.ಅಂಗಡಿ ನಿರೂಪಿಸಿದರು. ಎ.ಜಿ.ಕಮತಗಿ ಸ್ವಾಗತಿಸಿದರು.