Homeಸುದ್ದಿಗಳುಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ

ಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ

spot_img

ಮೂಡಲಗಿ : ಏಷಿಯನ್ ಟೇಕ್ವಾಂಡೋ ಕಂಚಿನ ಚಿನ್ನದ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗ

ಮೂಡಲಗಿ – ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ರಡರಟ್ಟಿ ಅವರನ್ನು ಗುರುವಾರ ಮೂಡಲಗಿ ಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಮಲೇಶಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪಾ ರಡರಟ್ಟಿ ಗುರುವಾರ ಸಂಜೆ ತವರೂರಿಗೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ , ಸನ್ಮಾನಗಳು ಜರುಗಿದವು.

ಮೂಡಲಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪಟ್ಟಣದ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಸನ್ಮಾನಿಸಿ ಬರಮಾಡಿಕೊಂಡರು . ಸಂಸ್ಥೆಯಿಂದ ತೆರೆದ ಜೀಪನಲ್ಲಿ ಮೆರವಣಿಗೆ ಜರುಗಿತು.

ಝಾಂಜ ಪಥಕ್, ವಿವಿಧ ವಾದ್ಯ ಮೇಳದೊಂದಿಗೆ ಮಂಜುನಾಥ ಸೈನಿಕ ತರಬೇತಿ ಪ್ರಶಿಕ್ಷಣಾರ್ಥಿಗಳ ಉದ್ದನೆಯ ಸಾಲು , ನೂರಾರು ಸಂಖ್ಯೆಯ ಮಹಿಳೆಯರು, ದಾರಿಯುದ್ದಕ್ಕೂ ಪಟಾಕಿ, ಬಾಣ ಬಿರುಸುಗಳು ಮೆರವಣಿಗೆಗೆ ಮೆರುಗು ನೀಡಿದವು . ದಾರಿಯುದ್ದಕ್ಕೂ ಲಕ್ಷ್ಮೀ ಸಾಧನೆಗೆ ಜೈಕಾರ ಹಾಕಿದರು.

RELATED ARTICLES

Most Popular

error: Content is protected !!
Join WhatsApp Group