ಬೈಲಹೊಂಗಲ- 2025-26 ನೇ ಸಾಲಿನ 14 ವರ್ಷದ ಒಳಗಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ 4*100 ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕರ ವಿಭಾಗದಲ್ಲಿ ಭಾಸ್ಕರ ಹುದ್ದಾರ 100 ಮೀ ಓಟ ಪ್ರಥಮ, ಬಸವರಾಜ ಕುರಿ 200 ಮೀ ಓಟ ಪ್ರಥಮ, ಎತ್ತರ ಜಿಗಿತ ಪ್ರಥಮ, ಸಂತೋಷ ಬೋಬಡೆ 400 ಮೀ ಓಟ ಪ್ರಥಮ, 80 ಮೀ ಅಡೆತಡೆ ಓಟ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಅಪೂರ್ವ ಕುಲಕರ್ಣಿ 100 ಮೀ ಓಟ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ಎಮ್.ಎನ್.ಕಾಳೆ, ವೀರೇಂದ್ರ ಪಾಟೀಲ, ಸಂತೋಷ ಸಾಳುಂಕೆ, ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.