ಬೈಲಹೊಂಗಲ: 2023-24 ನೇ ಸಾಲಿನ ಬೆಳವಡಿ ಪೂರ್ವ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕರ ವಿಭಾಗದಲ್ಲಿ ಮೌನೇಶ ಗರಗದ (400 ಮೀ ಓಟ ಪ್ರಥಮ, 200 ಮೀ ಓಟ ಪ್ರಥಮ), ಅಭಿಲಾಷ ಹೊಂಗಲ (800 ಮೀ ಓಟ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಹರ್ಡಲ್ಸ್ ಪ್ರಥಮ), ಸಿದ್ದು ಕುರಿ (3000 ಮೀ ಓಟ ಪ್ರಥಮ), ಶಶಿಕುಮಾರ ಸೊಗಲದ (ನಡಿಗೆ ಪ್ರಥಮ), ಗೂಳಪ್ಪ ಕುರಿ (ನಡಿಗೆ ದ್ವಿತೀಯ) ಪ್ರವೀಣ ಜೋಗಿಗುಡ್ಡ (3000 ಮೀ ದ್ವಿತೀಯ),ವಿನೋದ ಏಣಗಿ (1500 ಮೀ ಓಟ ಪ್ರಥಮ), ಬಾಲಕಿಯರ ವಿಭಾಗದಲ್ಲಿ ಅಮೂಲ್ಯಾ ಸೂರ್ಯವಂಶಿ (ತ್ರಿವಿಧ ಜಿಗಿತ ಪ್ರಥಮ), ಸುಶ್ಮಿತಾ ಸೊಗಲದ (3000ಮೀ ದ್ವಿತೀಯ), ವನಜಾ ಬಡಿಗೇರ (800 ಮೀ ದ್ವಿತೀಯ), ಮಂಜುಳಾ ನಿಂಬಾಳಕರ (1500ಮೀ ಓಟ ದ್ವಿತೀಯ), ನಿರ್ಮಲಾ ಸೊಗಲದ (ಹರ್ಡಲ್ಸ್ ದ್ವಿತೀಯ) ಸ್ಥಾನಗಳನ್ನು ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ 10 ನೆಯ ತರಗತಿಯ ವಿದ್ಯಾರ್ಥಿಯಾದ ಅಭಿಲಾಷ ಹೊಂಗಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್.ನರಿ, ಎಸ್.ಬಿ.ಭಜಂತ್ರಿ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ಎಸ್.ವಿ.ಬಳಿಗಾರ, ವಿ.ಬಿ.ಪಾಟೀಲ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.