Homeಸುದ್ದಿಗಳುರೈತರಿಗೆ ಬಂಪರ ಕೊಡುಗೆ- ಸಂಸದ ಈರಣ್ಣ ಕಡಾಡಿ ಹರ್ಷ

ರೈತರಿಗೆ ಬಂಪರ ಕೊಡುಗೆ- ಸಂಸದ ಈರಣ್ಣ ಕಡಾಡಿ ಹರ್ಷ

ಮೂಡಲಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಬಜೆಟ್ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರುವ ಸಮಚಿತ್ತದ ಸಮತೊಲನದ ಬಜೆಟ್ ಅನ್ನು ರೈತಾಪಿ ವರ್ಗಕ್ಕೆ ಅರ್ಪಿಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶೂನ್ಯ ಬಡ್ಡಿದರದಲ್ಲಿ ರೂ 5 ಲಕ್ಷ ಸಾಲ ಸೌಲಭ್ಯ ನೀಡುವ ಮೂಲಕ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ,ಮಹಿಳೆಯರಿಗೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ  ನೀಡಲಾಗಿದೆ ಎಂದು  ಬಜೆಟ್ ಕುರಿತು ಹರ್ಷ ವಕ್ತಪಡಿಸಿದರು. 

ಈ ವರ್ಷದ ಒಟ್ಟು ಬಜೆಟ್ ಗಾತ್ರ 3.1 ಲಕ್ಷ ಕೋಟಿ ರೂ, ಕೃಷಿ ಕ್ಷೇತ್ರಕ್ಕೆ 39,031 ಕೋಟಿ ಅನುದಾನ ನೀಡಲಾಗಿದೆ. ಕಿಸಾನ್ ಕ್ರೆಡಿಟ್‌ ಕಾರ್ಡ ಹೊಂದಿರುವ 50 ಲಕ್ಷ ರೈತರಿಗೆ ಭೂ ಸಿರಿ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಹೆಚ್ಚುವರಿಯಾಗಿ ರೂ 10 ಸಾವಿರ ಸಹಾಯ ಧನ, ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ಜೀವನ ಜೋತಿ ಯೋಜನೆ ಜಾರಿಗೆ ಇದಕ್ಕಾಗಿ ರೂ 181 ಕೋಟಿ ಅನುದಾನ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ,ಮೀನುಗಾರರು,ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ,ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ ರೂ 500 ಸಹಾಯ ಧನವನ್ನು ಡಿ.ಬಿ.ಟಿ ಮೂಲಕ ನೀಡಲಿದೆ ಎಂದರು. 

ಹಾಲು ಉತ್ಪಾದಕರಿಗೆ ರೂ 1067 ಕೋಟಿ,ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೆರ್ ಗೆ ರೂ 10 ಸಾವಿರ ಪ್ರೋತ್ಸಾಹ ಧನ,ಅಡಿಕೆ ಬೆಳೆ ರೋಗ ನಿರ್ವಹಣೆ,ತಂತ್ರಜ್ಞಾನ ಅಭಿವೃದ್ದಿಗೆ ರೂ 10 ಲಕ್ಷ ಕೋಟಿ ಅನುದಾನ ಘೋಷಣೆ,ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂಗಳ ನೆರವು ಯೋಜನೆ ಆರಂಭಿಸಲಾಗುವುದು.ರೇಷ್ಮೆ ಬೆಳೆಯಲು 10 ಸಾವಿರ ಹೆಕ್ಟೇರ್ ವಿಸ್ತರಣೆಗೆ ಕ್ರಮ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರಾವರಿ ಯೋಜನೆಗಳಿಗೆ ರೂ. 22,854 ಕೋಟಿ ಹೆಚ್ಚಿನ ಅನುದಾನ, ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ರೂ. 49,031 ಕೋಟಿ ಮೀಸಲು ಹೀಗೆ ಹಲವಾರು ಯೋಜನೆಗಳಿಗೆ ಅನುದಾನ ನೀಡಿದ್ದಾರೆ ಎಂದರು.

ಕಿತ್ತೂರ ಭಾಗದ ಅಭಿವೃದ್ದಿಗೆ ಕಿತ್ತೂರ ಕರ್ನಾಟಕ ಮಂಡಳಿ, ಧಾರವಾಡ – ಬೆಳಗಾವಿ ನೂತನ ರೈಲು ಮಾರ್ಗ ತ್ವರಿತಗತಿಯಲ್ಲಿ ಸಾಗಲು ಭೂ ಸ್ವಾಧೀನಕ್ಕೆ ರೂ 150 ಕೋಟಿ ಅನುದಾನ,ಬೆಳಗಾವಿಯ ಕಣಗಲಾ ಗ್ರಾಮದಲ್ಲಿ ಕೈಗಾರಿಕಾ ಹಬ್ಬ ಸ್ಥಾಪನೆಗೆ ಕ್ರಮ,ಕಳಸಾ ಬಂಡೂರಿ ಯೋಜನೆಗೆ ರೂ 80 ಕೋಟಿ ಅನುದಾನ ನೀಡಿದ್ದಾರೆಂದರು ಈ ಬಜೆಟ್‍ನ್ನು ಈರಣ್ಣ ಕಡಾಡಿ ಶ್ಲಾಘಿಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group