ಬಸ್ ನಿಲ್ದಾಣ ಫಲಕ ಕಣ್ಮರೆ; ಪ್ರಯಾಣಿಕರು ಪರದಾಡುವ ಸ್ಥಳವೇ ನಾಗರ ಬಾವಿ ಬಸ್ ನಿಲ್ದಾಣ !

0
591

ಬೆಂಗಳೂರು – ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣದ ನಾಮಫಲಕಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಗಣ್ಯರೊಬ್ಬರ ಜನುಮ ದಿನದ ಶುಭಾಶಯ ಕೋರುವ ಬ್ಯಾನರ್, ಫ್ಲೆಕ್ಸ್‌, ಪೋಸ್ಟರ್ಸ್, ಬಂಟಿಂಗ್ಸ್ ಅಳವಡಿಸುವ ಮೂಲಕ ನಾಗರಬಾವಿ ರಸ್ತೆಯಲ್ಲಿ ಹೊಸದಾಗಿ ಸಾಗುವ ನಾಗರಿಕರು ಬಸ್ ನಿಲ್ದಾಣ ಕ್ಕೆ ತಡಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅದಕ್ಕೆ ತಾವೇನೋ ಕಮ್ಮಿ ಇಲ್ಲ ಎನ್ನುವಂತೆ ನಗರದ ಆರಕ್ಷಕ ಪಡೆಯ ಎರಡು ಬ್ಯಾರಿಕೇಡ್ ರಸ್ತೆ ಯ ಮೇಲೆ ಅನಾಥವಾಗಿ ನಿಂತಿದ್ದರೆ ಅಲ್ಲಿಯೇ ಪಕ್ಕ ದಲ್ಲಿ ಶವದ ರೀತಿಯಲ್ಲಿ ಇನ್ನೊಂದು ಬ್ಯಾರಿಕೇಡ್ ಮಲಗಿದೆ. ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುವ ಜನರ ಪರದಾಟ ಒಂದೆಡೆ ಆದರೆ ಮತ್ತೊಂದೆಡೆ ಬಸ್ ಹತ್ತುವವರು ನಿಲ್ಲಲು ಜಾಗ ವಿಲ್ಲದೆ ಸರ್ಕಸ್ ಮಾಡುತ್ತಾ ಇರುವ ದೃಶ್ಯ ಪ್ರತಿ ನಿತ್ಯ ನೋಡಲು ಸಿಗುವ ತಾಣವೇ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣ !!

ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣ ದಲ್ಲಿ ನಿಮಗೆ ಉಚಿತವಾಗಿ ಕಸ – ಕಡ್ಡಿಗಳು ಹಾಗು ನೀರು ಕುಡಿದು ಎಸೆದ ಪ್ಲಾಸ್ಟಿಕ್ ಬಾಟಲಿಗಳು ಹಾಗು ಒಡೆದು ಎಸೆದ ದೊಡ್ಡ ದೊಡ್ಡ ಗಾತ್ರದ ಸಿಮೆಂಟ್ ನ ತುಂಡು ಅವೆಲ್ಲರ ನಡುವೆ ದಟ್ಟಣೆಯ ವಾಹನ ಸಂಚಾರ ಇರುವ ನಗರದ ಪ್ರಮುಖ ರಸ್ತೆ ಕಂಡುಬರುತ್ತದೆ ! ಆದರೆ ಬಿ ಬಿ,ಎಂ,ಪಿ ಮಾತ್ರ ಸಮಸ್ಯೆಯ ಆಗರವಾದ ನಾಗರಬಾವಿ ಯ ಬಸ್ ನಿಲ್ದಾಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವ ಪ್ರಮುಖ ಅಂಶ ಎಂದರೆ ತಪ್ಪಾಗಲಾರದು.

ಇದೆಲ್ಲದರ ನಡುವೆ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌, ಪೋಸ್ಟರ್ಸ್‌, ಬಂಟಿಂಗ್ಸ್‌ ಅಳವಡಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್‌, ಪೋಸ್ಟರ್ಸ್, ಬಂಟಿಂಗ್ಸ್ ಅಳವಡಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್‌ ದಾಖಲಿಸಲು ಎಲ್ಲಾ ವಲಯದ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ಪಾಲಿಕೆಯ ಎಲ್ಲಾ 8 ವಲಯಗಳಲ್ಲಿಯೂ ಮುಖ್ಯ ಇಂಜಿನಿಯರ್‌ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್ಸ್, ಫ್ಲೆಕ್ಸ್ , ಪೋಸ್ಟರ್ಸ್, ಬಂಟಿಂಗ್ಸ್‌ಗಳ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ.

ನಗರದಲ್ಲಿ ಇನ್ನು ಮುಂದೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ಕಂಡುಬಂದಲ್ಲಿ, ಕೂಡಲೇ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ಜಾರಿಯಲ್ಲಿರುವ ಬಿ.ಬಿ.ಎಂ.ಪಿ ಹೊರಾಂಗಣ ಜಾಹೀರಾತು ಮತ್ತು ಬೈಲಾದಂತೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ , ಆದಾಗ್ಯೂ , ಎಲ್ ಇಡಿ ಜಾಹೀರಾತು ಪ್ರದರ್ಶನ , ಫ್ಲೆಕ್ಸ್ , ಬ್ಯಾನರ್ , ಬಂಟಿಂಗ್ಸ್ , ಭಿತ್ತಿಪತ್ರ , ಬಾವುಟ ಗಳನ್ನು ಅಳವಡಿಸುವುದು ಮುಂದುವರೆದಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು , ನಗರದ ಸೌಂದರ್ಯವೂ ಹಾಳಾಗುತ್ತಿದೆ.

ಸೈಕಲ್ ವಾಣಿಜ್ಯ ಜಾಹೀರಾತು, ವಾಹನಗಳ ಮೇಲೆ ವಾಣಿಜ್ಯ ಜಾಹೀರಾತು ಪ್ರದರ್ಶನ , ಎಲ್ಇಡಿ ಜಾಹೀರಾತು ಅಂಗಡಿ – ಮುಂಗಟ್ಟುಗಳಲ್ಲಿ ಜಾಹೀರಾತು ಹಾಗೂ ಪ್ರಕಟಣೆಗಳನ್ನು ಅಳವಡಿಸುವುದು ಬಿಬಿಎಂಪಿ ಕಾಯಿದೆ– 2020 ಹಾಗೂ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ ) ಕಾಯಿದೆ 1981 ರ ಕಲಂ (3) ರಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ . ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಜಾಹೀರಾತು ಪ್ರದರ್ಶಿಸುವ ಏಜೆನ್ಸಿಗಳು , ಫ್ಲೆಕ್ಸ್ , ಬ್ಯಾನರ್ ಗಳಲ್ಲಿ ಭಾವಚಿತ್ರ ಹಾಕಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಶಾಸಕರೆ, ಮತದಾರರು ಬೇಕಲ್ಲವೇ ನಿಮಗೆ ?

ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ಕಡೆ ನೋಡಿ ಕ್ಷೇತ್ರದ ಶಾಸಕರೇ‌… ಸಮಸ್ಯೆಗಳ ಆಗರವಾಗಿರುವ ಕ್ಷೇತ್ರದ ಸಮಸ್ಯೆ ಬಗೆಹರಿಸಿ … ಹೆಚ್ಚಿನ ವಾಹನ ದಟ್ಟಣೆಯಿರುವ ಈ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗುವಂತಹ ಕ್ರಮ ತೆಗೆದುಕೊಳ್ಳಿ … ಏಕೆಂದರೆ ಈ ಬಸ್ ನಿಲ್ದಾಣ ದಲ್ಲಿ ಬಸ್ ಹತ್ತಲು ಹಾಗು ಇಳಿಯಲು ಹೆಚ್ಚು ಕಾಲೇಜು ವಿದ್ಯಾರ್ಥಿ ಗಳು ಹಾಗು ಶಾಲಾ ಮಕ್ಕಳು ಬಸ್ ಕಾಯುತ್ತಾ ನಿಂತಿರುತ್ತಾರೆ. ಭವ್ಯ ಭಾರತದ ಮುಂದಿನ ಪ್ರಜೆಗಳು ಅವರು ಹಾಗು ನಿಮ್ಮ ಮುಂದಿನ ಚುನಾವಣೆಗೆ ಮತ ಹಾಕಲು ಮತದಾರರು ಬೇಕಲ್ಲವೇ ನಿಮ್ಮಗೆ ಅದಕ್ಕೆ !

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಸಲಹೆ ಸೂಚನೆ ನೀಡಿದ್ದರೂ ಸಹ ನಗರದ ತುಂಬಾ ನಿಮಗೆ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್‌, ಪೋಸ್ಟರ್ಸ್, ಬಂಟಿಂಗ್ಸ್ ಗಳು ನೋಡಿ ಆನಂದಿಸಲು ಲಭ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದು ಜನುಮ ದಿನ ಶುಭಾಶಯ ಕೋರುವ ಹಾಗು ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಇನ್ನೂ ಅನೇಕ ಅನೇಕ ಅನಧಿಕೃತ ಬ್ಯಾನರ್, ಫ್ಲೆಕ್ಸ್‌, ಪೋಸ್ಟರ್ಸ್, ಬಂಟಿಂಗ್ಸ್ ಗಳು. ಇನ್ನಾದರೂ ಈ ಸಮಸ್ಯೆ ಗೆ ಬಿ.ಬಿ.ಎಂ.ಪಿ ಹಾಗು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಮನಸ್ಸು ಮಾಡುವುದೇ ಎಂದು ಕಾದು ನೋಡಬೇಕಿದೆ !!


ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ