ಬೀದರ – ಕೇಂದ್ರ ಬಸ್ ನಿಲ್ದಾಣ ಎದುರುಗಡೆಯ ಅಂಗಡಿಗೆ ಒಳಗೆ ನುಗ್ಗಿದ ಪೂಜಾ ಟ್ರಾವೆಲ್ಸ್ ಬಸ್ಸು. ತಪ್ಪಿದ ಭಾರಿ ಅನಾಹುತ ಬೆಳಿಗ್ಗೆ ಬೆಳಿಗ್ಗೆ ಏಕಾಏಕಿ ಅಂಗಡಿಯ ಒಳಗೆ ಬಸ್ ನುಗ್ಗಿತು. ಕೊನೆಯ ಕ್ಷಣದಲ್ಲಿ ಅಂಗಡಿಯಿಂದ ಹೊರಗಡೆ ಬಂದ ಪ್ರಾಣ ಉಳಿಸಿಕೊಂಡ ಮಾಲೀಕ. ಅಂಗಡಿಯಲ್ಲದೆ ಬಳಿ ಇದ್ದ ವಿದ್ಯುತ್ ಕಂಬಕ್ಕೂ ಬಸ್ ಹಾನಿ ಮಾಡಿತು. ವಿದ್ಯುತ್ ತಂತಿಗಳು ಕೆಳಗೆ ಬಿದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಲಿಲ್ಲ.
ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.