ಕಸಾಪ ಸಮ್ಮೇಳನ; ಬಸವರಾಜ ಹಡಪದ ಅವರ “ಕಣ್ಣಿನಾಚೆಯ ಕಡಲು” ಕವನ ಸಂಕಲನ ಬಿಡುಗಡೆ

0
326

ಬಸವನಬಾಗೇವಾಡಿ: ಮನಗೂಳಿ ಪಟ್ಟಣದಲ್ಲಿ ಡಿಸೆಂಬರ್ ೨೫-೨೦೨೨ ರಂದು ಜರುಗುವ ಬಸವನಬಾಗೇವಾಡಿ ತಾಲೂಕಾ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ರಾಣಿ ಚೆನ್ನಮ್ಮ ವಿವಿ ಸಂಶೋಧನಾರ್ಥಿ ಬಸವರಾಜ ಹಡಪದ ಅವರ ಕವನ ಸಂಕಲನ “ಕಣ್ಣಿನಾಚೆಯ ಕಡಲು”ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ಸಾಹಿತ್ಯ ವಲಯದಲ್ಲಿ ಸಂತಸ ತಂದಿದೆ.

ಅಂದು ಸಂಜೆ ೭.೩೦ ರ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯವನ್ನು ಹುಣಶ್ಯಾಳ ಪಿಬಿ ಗ್ರಾಮದ ಪೂಜ್ಯದ್ವಯರಾದ ಶಿವಪುತ್ರಪ್ಪ ಶರಣರು(ಸಿದ್ಧಾರೂಢ ಆಶ್ರಮ) ಮತ್ತು ಆನಂದ ದೇವರು(ಶಕ್ತಿಪೀಠ) ವಹಿಸುವರು.

ಉದ್ಘಾಟನೆಯನ್ನು  ಬಿ ಎಂ ಪಾಟೀಲ( ಜಿಲ್ಲಾಧ್ಯಕ್ಷರು ಕಸಾಪ ವಿಜಯಪುರ) ನೆರವೇರಿಸುವರು.

ಅಧ್ಯಕ್ಷತೆ ಸಿದ್ಧರಾಮ ಈ ಬಿರಾದಾರ (ಸಾಹಿತಿಗಳು,ಮನಗೂಳಿ), ಕೃತಿ ಪರಿಚಯ ಡಾ|| ಸುಜಾತಾ ಚಲವಾದಿ (ಅಧ್ಯಾಪಕರು, ಎಸ್ ಕೆ ಪದವಿ ಮಹಾವಿದ್ಯಾಲಯ, ತಾಳಿಕೋಟಿ) ನಡೆಸುವರು.

ಮುಖ್ಯ ಅತಿಥಿಗಳಾಗಿ ಲ. ರು ಗೊಳಸಂಗಿ (ಮಹಾಕವಿಗಳು, ಬಸವನಬಾಗೇವಾಡಿ), ವಿವೇಕಾನಂದ ಕಲ್ಯಾಣಶೆಟ್ಟಿ (ಮಾ ಅಧ್ಯಕ್ಷರು ಕಸಾಪ ಬಸವನಬಾಗೇವಾಡಿ), ಶಾಂತು ಬೈಚಬಾಳ(ಮಾ ಗ್ರಾ ಪಂ ಅಧ್ಯಕ್ಷರು,ಮಸಬಿನಾಳ), ಶ್ರೀಮತಿ ಲಕ್ಷ್ಮೀ0ಬಾಯಿ ಸಿ ಖೇಡದ(ನಾಗವಾಡ) ಇವರು ಆಗಮಿಸುವರೆಂದು ಪ್ರಕಟಣೆಯಲ್ಲಿ ತಿಳಿದುಬಂದಿದೆ.