ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರಿಂದ “ಪ್ರಾಮಿಸ್” ಚಿತ್ರದ ಪೋಸ್ಟರ್ ಬಿಡುಗಡೆ

0
444

ವಿಜಯಪುರ: ಜಿಲ್ಲೆಯ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಹೊಸ ಚಿತ್ರ ಪ್ರಾಮಿಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಶನಿವಾರ ಸುಕ್ಷೇತ್ರ ಇಂಚಗೇರಿ ಮಠದ ಪೀಠಾಧ್ಯಕ್ಷ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ನಟ ವಿಶ್ವಪ್ರಕಾಶ ಟಿ ಮಲಗೊಂಡ ಅತ್ಯುತ್ತಮ ಚಿತ್ರ ನಟ ಹಾಗೂ ಅಭಿನಯದಲ್ಲಿಯೂ ತುಂಬಾ ಸುಂದರವಾಗಿ ನಟಿಸುತ್ತಾನೆ. ಹಿಂದೂ ಧಾರ್ಮಿಕ ಹೊಸ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ಪ್ರಾಮಿಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದೆನೆ. ಪ್ರಾಮಿಸ್ ಚಿತ್ರದ ಪೋಸ್ಟರ್ ನೋಡಿದರೆ ಇದೊಂದು ವಿಭಿನ್ನವಾದ ಕಥೆಯೊಂದಿಗೆ ಇಂದಿನ ವಿದ್ಯುನ್ಮಾನ ಕುರಿತು  ಲವ್ ಸ್ಟೋರಿ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ.

ಚಿತ್ರ ನಟ ವಿಶ್ವಪ್ರಕಾಶ ಮಲಗೊಂಡ ಕ್ರಾಂತಿಯೋಗಿ ಮಹಾದೇವರು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಅದೂ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿತ್ತು. ಚಿತ್ರದ ನಿರ್ಮಾಪಕರಾದ ಮಾದೇವಿ ಟಿ ಮಲಗೊಂಡ ಹಾಗೂ ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ ಅವರಿಗೆ, ನಿರ್ದೇಶಕರಿಗೆ ತಂಡದವರೆಲ್ಲರಿಗೆ ಒಳ್ಳೆಯದಾಗಲಿ, ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲರೂ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೆನೆ ಎಂದರು.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ನಟ ವಿಶ್ವಪ್ರಕಾಶ ಮಲಗೊಂಡ, ಮುಕುಂದ ರೇವಣಸಿದ್ಧ ಮುರುಗೋಡ, ಆಸಿಫ್ ಗುಂದಗಿ, ಆಕಾಶ ಮೋಕಾಶಿ, ನಿರಂಜನ ಹಿರೇಮಠ, ರಾಜು ಈಸರಗೊಂಡ, ಭಾಸ್ಕರ್ ಪೂಜಾರಿ, ಮಾಧವಾನಂದ ಅರಳಿ ಸೇರಿದಂತೆ ಇನ್ನಿತರರು ಇದ್ದರು.

ನಟ ವಿಶ್ವಪ್ರಕಾಶ ಮಲಗೊಂಡ ಈ ಹಿಂದೆ ಲಕ್ಕಿ ಎಸ್ ವಿ ನಿರ್ದೇಶನದ ಲೈಫ್ ಇಸ್ ಶಾರ್ಟ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ನಂತರ ಮತ್ತೆ ಅದೇ ಜೋಡಿ ಈಗ ಪ್ರಾಮಿಸ್ ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

ಪ್ರಾಮಿಸ್ ಚಿತ್ರವೂ ಮಲಗೊಂಡ ಫೀಲಂ ಎಂಟ್ರಟೈನ್ ಮೆಂಟ್ಸ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ, ಲಕ್ಕಿ ಎಸ್ ವಿ ನಿರ್ದೇಶನದಲ್ಲಿ, ರವಿ ಕುಂಟೋಜಿ ಛಾಯಾಗ್ರಹಣ, ಸಹಕಾರ ನಿರ್ದೇಶಕ ಪವನ್ ಕುಮಾರ್ ಬೂದಿಹಾಳ, ಸಹ ನಿರ್ದೇಶಕ ಮಲ್ಲು ಎನ್ ವಿ, ಪ್ರೊಡಕ್ಷನ್ಸ್ ಹೆಡ್ ರಂಜೀತ್ ಕಾರ್ಕಾಳ, ಪೋಸ್ಟರ್ ಡಿಸೈನ್ ಸುಭಾಷ್ ಅರಸ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ಹಾಗೂ ಡಾ ವಿರೇಶ್ ಹಂಡಗಿ, ಹರೀಶ್ ಅರಸು, ಉಮೇಶ್ ಕೆ ಎನ್, ಸೇರಿದಂತೆ ಇನ್ನಿತರರು ತಂಡದಲ್ಲಿದ್ದಾರೆ.