ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಮತ್ತು ಲಕ್ಷ್ಮೀನಗರದ ಗಣೇಶ ಉತ್ಸವ ಸಮಿತಿಯವರು ಚಾರ್ಟರ್ಡ ಅಕೌಂಟಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಧರ್ಮಾಜಿ ಶಿವರುದ್ರಪ್ಪ ಪೋಳ ಮತ್ತು ಪಟಗುಂದಿಯ ಸಂತೋಷ ರಾಜು ಹೊಸಮನಿ ಅವರನ್ನು ಸನ್ಮಾನಿಸಿ ಗೌರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಶ್ರದ್ಧೆ ಮತ್ತು ಪರಿಶ್ರಮದಿಂದ ಸಾಧನೆ ಮಾಡಿದರೆ ಯಶಸ್ಸು ಕಂಡಿತ ದೊರೆಯುತ್ತದೆ. ಧರ್ಮಾಜಿ ಪೋಳ ಮತ್ತು ಪಟಗುಂದಿ ಗ್ರಾಮದ ಸಂತೋಷ ಹೊಸಮನಿ ಅವರ ಕಠಿಣ ಪರಿಶ್ರಮದ ಫಲವಾಗಿ ಸಿಎ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಗೆ ಸಾಕಷ್ಟು ಅವಕಾಶಗಳಿದ್ದು ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ಪಡೆದು ಅಂಥ ಪರೀಕ್ಷೆಗಳನ್ನು ಎದುರಿಸಬೇಕು ಎಂದರು.
ಲಕ್ಷ್ಮೀನಗರದ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಗುಡಗುಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ನಿಜವಾದ ಪ್ರತಿಭೆಗಳಿದ್ದು, ಅಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಪ್ರೋತ್ಸಾಹ ನೀಡುವುದು ಅವಶ್ಯವಿದೆ ಎಂದರು.
ನಿವೃತ್ತ ಶಿಕ್ಷಕ ಬಿ.ಎ. ಝರಾಳೆ ವಿದ್ಯಾರ್ಥಿಗಳ ಸಾಧನೆಯ ಕುರಿತು ಮಾತನಾಡಿದರು.
ಅತಿಥಿಗಳಾಗಿ ಜಂಬು ಹೊಸಮನಿ, ಅಣ್ಣಪ್ಪ ಹೊಸಮನಿ, ಬಿ.ಎ. ಝರಾಳೆ, ಮನೋಹರ ಮೂಡಲಗಿ, ಕೆಂಪಣ್ಣ ಮಾವನೂರ, ಸುಧೀರ ಗೋಡಿಗೌಡರ, ಗಾಡವಿ ಭಾಗವಹಿಸಿದ್ದರು.
ಸತ್ಯ ಸಾಯಿ ಸಮಿತಿ ಸಂಚಾಲಕ ಹಣಮಂತ ಸೊರಗಾಂವಿ, ಶಿವರುದ್ರಪ್ಪ ಮಿಲ್ಲಾನಟ್ಟಿ, ಕೆ.ಎ. ಕೊತ್ತಲ, ರವಿ ನಂದಗಾಂವಿ, ಭೀಮಶಿ ನಾಯ್ಕ, ರವಿ ಬಟಗುರ್ಕಿ, ಶಿಕ್ಷಕ ಪಂಚಗಾಂವಿ, ಡಿ.ಬಿ. ಮುತ್ನಾಳ, ಪ್ರೇಮಾ ಸೊರಗಾಂವಿ, ಭಾರತಿ ಮಿಲ್ಲಾನಟ್ಟಿ, ಸಿ.ಎಂ. ಹಂಜಿ, ಕೆ.ಬಿ. ನಾವಳ್ಳಿ, ಆರ್.ಎಂ. ಕಾಂಬಳೆ, ಗುರಲಿಂಗಪ್ಪ ಶೀಲವಂತ ಇದ್ದರು.