ಸಿಂದಗಿ: ಹಿಂದೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಪುನಃ ಪ್ರಾರಂಭ ಮಾಡುವುದಲ್ಲದೆ ಕಾಂಗ್ರೆಸ ಗ್ಯಾರಂಟಿ ಗೃಹಲಕ್ಷ್ಮಿ, ಗೃಹಜ್ಯೋತಿ, ಮನೆ ನಿರ್ವಹಣೆಗೆ ಕಾಂಗ್ರೆಸ ಪರಿಹಾರ ಬಾಂಡಗಳು, ಹಾಗೂ ಕುಟುಂಬದ ಪ್ರತಿ ಸದಸ್ಯರಿಗೆ 10 ಕಿಲೊ ಅನ್ನ ಬಾಗ್ಯ ಯೋಜನೆ ಮೂಲಕ ಹಂಚಲಾಗುವದು ಎಂದು ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಹೇಳಿದರು.
ತಾಲೂಕಿನ ಗೋಲಗೇರಿ, ಯಂಕಂಚಿ, ಮಾಡಬಾಳ, ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ ಗ್ಯಾರಂಟಿ ಬಾಂಡಗಳ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿ, ಕಾಂಗ್ರೆಸ ಪಕ್ಷ ಅಧಿಕಾರದಲ್ಲಿದಾಗ ಬಡವರು, ಯುವಕರು, ರೈತರು, ಕಾರ್ಮಿಕರು, ವಯಸ್ಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 5 ವರ್ಷ ಸಂಪೂರ್ಣವಾಗಿ ಯಾವುದೆ ಸಮಸ್ಯೆಗಳಿಲ್ಲದೆ ಅಧಿಕಾರ ನಡೆಸಿದರು.
ಅದರಂತೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬಂದರೆ ಈಗಿನ ಸರ್ಕಾರ ಕೊಡುವ 5 ಕಿಲೊ ಅಕ್ಕಿ ಬದಲು 10 ಕಿಲೊ ಕೊಡಲಾಗುವದು, ಹಾಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ರೂ ಕೊಡಲಾಗುವದು, ಗೃಹಜ್ಯೋತಿ ಯೊಜನೆ ಅಡಿಯಲ್ಲಿ ಬಡವರಿಗಾಗಿ ಉಚಿತ ವಿದ್ಯುತ ನೀಡಲಾಗುವದು, ಹಾಗೂ ಗ್ಯಾಸ ಬೆಲೆ ಇಳಿಕೆ ಮಾಡಲಾಗುವದು ಈ ಎಲ್ಲಾ ಯೋಜನೆಗಳನ್ನೊಳಗೊಂಡ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರ ಸಹಿಯನ್ನು ಹೊಂದಿದ ಬಾಂಡಗಳನ್ನು ತಮಗೆ ನಿಡುತ್ತಿದ್ದೇವೆ ಇದನ್ನು ತಾವೆಲ್ಲರೂ ತಿಳಿದುಕೊಂಡು ಸದೃಢ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಕಾಂಗ್ರೆಸ್ ಗೆ ವೋಟ್ ಮಾಡಿ ಕಾಂಗ್ರೆಸ ಗೆಲ್ಲಿಸಿ ಈ ಯೋಜನೆಗಳ ಉಪಯೋಗಗಳನ್ನು ತಾವೆಲ್ಲರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.