spot_img
spot_img

ಪಕ್ಷಗಳ ಪ್ರತಿಕ್ರಿಯೆ ಹೀಗಿರಬಹುದೇ ?

Must Read

- Advertisement -

ದಿ.೧೩-೦೫-೨೦೨೩ ರ ಮಧ್ಯಾಹ್ನದ ವೇಳೆಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಮೂರೂ ಪಕ್ಷಗಳ ಪ್ರತಿಕ್ರಿಯೆಗಳು ಹೇಗಿರಬಹುದು?

(ನಮಗೆ ವಾಟ್ಸಪ್ ನಿಂದ ಬಂದಿದ್ದು)

ಹೀಗಿರಬಹುದೇ! (ಒಂದು ಊಹೆ, ಇದು ಶೇ. ೯೦ ನಿಜವೂ ಇರಬಹುದು !)

- Advertisement -

ಕಾಂಗ್ರೆಸ್ ಗೆದ್ದರೆ:

  • ಮತದಾರ ಬಿ.ಜೆ.ಪಿ.ಯನ್ನು ತಿರಸ್ಕರಿಸಿದ್ದಾನೆ.
  • ಇನ್ಮುಂದೆ ಕಾಂಗ್ರೆಸದ್ದೇ ಹವಾ.
  • ೪೦% ಬಿಜೆಪಿ ಸರ್ಕಾರವನ್ನು ಮತದಾರ ಮುಲಾಜಿಲ್ಲದೆ ಸೋಲಿ‌ಸಿದ್ದಾರೆ.
  • ಮೋದಿ, ಶಾ ಯಾರ್ಯಾರೋ ಬಂದ್ರು ಏನೂ ಮಾಡ್ಲಿಕ್ಕೆ ಆಗ್ಲಿಲ್ಲ.
  • ಇದು ಪ್ರಜಾಪ್ರಭುತ್ವದ ಗೆಲುವು.
  • ಜಾತಿವಾದಿಗಳಿಗೆ ಸೋಲಾಗಿದೆ.
  • ಈ ಸೋಲಿನ ಜವಾಬ್ದಾರಿ ಹೊತ್ತು ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.

ಸೋತರೆ!

  • ಚುನಾವಣೆ ಅಕ್ರಮದಿಂದ ಗೆದ್ದಿದ್ದಾರೆ
  • ಇಡೀ ಕೇಂದ್ರ ಸರ್ಕಾರದ ಮಂತ್ರಿಗಳ ಹಿಂಡೇ ಬಂದು ಬೀಡುಬಿಟ್ಟಿತ್ತು.
  • ಮತದಾರರಿಗೆ ಹಣದ ಆಮಿಷ ತೋರಿಸಿ ಗೆಲುವು ಸಾಧಿಸಿದ್ದಾರೆ.
  • ಮತಯಂತ್ರಗಳ ಮೋಸದಿಂದ ಗೆಲುವು ಪಡೆದಿದ್ದಾರೆ.
  • ಬಿಜೆಪಿ, ಜೆಡಿಎಸ್ ಒಳ ಒಪ್ಪಂದದ ಮೂಲಕ ನಮ್ಮನ್ನು ಸೋಲಿಸಿದ್ದಾರೆ.
  • ಇಡೀ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡು ಜಯಪಡೆದಿದ್ದಾರೆ.

ಬಿಜೆಪಿ ಗೆದ್ದರೆ:

  • ಇದು ನಿಜವಾಗಿ ಪ್ರಜಾಪ್ರಭುತ್ವದ ಗೆಲುವು.
  • ೪೦ ಪರ್ಸೆಂಟ್ ಸರ್ಕಾರ ಎಂದು ಬೊಬ್ಬೆ    ಹೊಡೆಯುತ್ತಿದ್ದವರಿಗೆ ಈಗ ಸರಿಯಾದ ಉತ್ತರ ಸಿಕ್ಕಿದೆ.
  • ನಮ್ಮ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಜನರೇ ನಮ್ಮನ್ನು ಆಯ್ಕೆ ಮಾಡಿದ್ದಾರೆ.
  • ವಂಶ ಪಾರಂಪರ್ಯ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ.
  • ಇದು ಮೋದಿಜಿಯವರ ಪ್ರಾಮಾಣಿಕತೆ, ಆಡಳಿತಕ್ಕೆ ಸಂದ ಜಯವಾಗಿದೆ.
  • ವಿರೋಧ ಪಕ್ಷದವರ ಪೊಳ್ಳು ಗ್ಯಾರಂಟಿಗಳನ್ನು ಮತದಾರ ನಂಬಿಲ್ಲ.

ಸೋತರೆ:

  • ನಾವು ಜನರ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ
  • ನಮ್ಮವರೇ ವಿರೋಧ ಪಕ್ಷದ ಜೊತೆ ಸೇರಿಕೊಂಡು ಮೋಸ ಮಾಡಿದರು.
  • ಆ ಗ್ಯಾರಂಟಿ ಈ ಗ್ಯಾರಂಟಿ ಎಂದು ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸಿದರು.
  • ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಹಾಕಿದರು.

ಜೆಡಿಎಸ್ ಪೂರ್ಣ ಬಹುಮತದಿಂದ ಗೆದ್ದರೆ:

  • ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ.
  • ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ಸಾಬೀತಾಗಿದೆ.
  • ನಮ್ಮ ಪಕ್ಷದ ಪಂಚರತ್ನ ಯೋಜನೆಗೆ ಮೆಚ್ಚಿ ಜನ ಆಶೀರ್ವದಿಸಿದ್ದಾರೆ.
  • ಕುಟುಂಬ ರಾಜಕಾರಣ ಎನ್ನುವವರು ಈಗೇನು ಹೇಳುತ್ತಾರೆ?

ಅತಂತ್ರ ಫಲಿತಾಂಶ ಬಂದರೆ…

  • ನಾವು ಮೊದಲಿನಿಂದಲೂ ಹೇಳುತ್ತಿದ್ದೆವು, ಯಾರೇನೇ ಹೇಳಿದ್ರು ನಾವೇ ಕಿಂಗ್ ಮೇಕರ್ ಅಂತ
  • ಈ ಹಿಂದೆ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿ, ಸಾಕಷ್ಟು ನೋವು ಅನುಭವಿಸಿದ್ದೇವೆ.
  • ಈಗ ಮತ್ತೆ ಚುನಾವಣೆಗೆ ಹೋಗಿ ಜನತೆಗೆ ಹೊರೆ ಆಗುವುದು ಬೇಡ ಎಂದು ಮೈತ್ರಿ ಮಾಡಿಕೊಳ್ಳುವ ವಿಚಾರವಿದೆ.
  • ಯಾವುದಕ್ಕೂ ದೊಡ್ಡ ಗೌಡರ ತೀರ್ಮಾನವೇ ಅಂತಿಮ.
  • ಜಾತಿವಾದಿಗಳನ್ನು ದೂರವಿಡಲು ಜಾತ್ಯತೀತ ಪಕ್ಷಗಳು ಒಂದಾಗಬೇಕಿದೆ.
  • ಮೈತ್ರಿಗೆ ಯಾವುದೇ ಪಕ್ಷ ಬಂದರೂ, ಮುಖ್ಯ ಮಂತ್ರಿ, ಹಾಗೂ ಪ್ರಮುಖ ಖಾತೆಗಳನ್ನು ನಮ್ಮ ಪಕ್ಷಕ್ಕೆ ಕೊಡಬೇಕು
  • ಸಾಮೂಹಿಕ ಪಕ್ಷಾಂತರ ಮಾಡಬಾರದುನಮ್ಮ ಪಂಚರತ್ನ ಯೋಜನೆಗೆ ಚಾಲನೆ ನೀಡಲು ತಂಟೆ ತಕರಾರು ಮಾಡಬಾರದು.
  • ಹೀಗೆ ಇನ್ನೂ ಅನೇಕ ಇರಬಹುದು.
  • ಇದು  ಹೀಗಾಗ ಬಹುದೇ ಎಂಬ ಊಹೆ  ಅಷ್ಟೇ,ನಾಳೆ ಹೇಗಾದರೂ ಆಗಬಹುದು.

ಶಾಂತಾನಂದ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group