ಹಳ್ಳೂರ – ಸಮೀರವಾಡಿ ಗೋದಾವರಿ ಬಯೋರಿಫೈನರೀಜ್ ಲಿಮಿಟೆಡ್, ಸಕ್ಕರೆ ಕಾರ್ಖಾನೆಯ ಪ್ರಸಕ್ತ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಗುರುವಾರದಂದು ಶುಭ ಮುಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು, ನಂತರ ಕೇನ್ ಕ್ಯಾರಿಯರ್ ದಲ್ಲಿ ಕಬ್ಬು ಹಾಕಿ ರೈತ ಬಾಂಧವರು, ಆಡಳಿತ ಮಂಡಳಿಯ ಯವರು ಚಾಲನೆ ನೀಡಿದರು.
ಕಾರ್ಖಾನೆಯ ನಿರ್ದೇಶಕರಾದ ಬಿ ಆರ್ ಬಕ್ಷಿ ಮಾತನಾಡಿ ರೈತ ಬಾಂಧವರು ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಒಳ್ಳೆಯ ಗುಣಮಟ್ಟದ ಕಬ್ಬು ಕಾರ್ಖಾನೆಗೆ ಪೂರೈಸಿಸುತ್ತಿರಿ ಎಂಬ ನಂಬಿಕೆ ಇದೆ.ಇದು ರೈತರ ವಿಶ್ವಾಸವುಳ್ಳ ರೈತರ ಕಾರ್ಖಾನೆ ಇದಾಗಿದ್ದು ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು ಈ ಹಂಗಾಮಿಗೆ ಕಳೆದ ವರ್ಷಗಿಂತ ಈ ವರ್ಷ ಹೆಚ್ಚು ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಸರಕಾರದ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ಬೆಲೆ 3300/- ನೀಡುತ್ತೇವೆ ಎಂದು ಹೇಳಿದರು. ರೈತರು ಬೆಳೆದ ಕಬ್ಬಿಗೆ ಯಾವುದೆ ರೀತಿಯ ಲಗಾನಿ ಇನ್ನಿತರ ತೊಂದರೆ ಆಗದಂತೆ ಸಿಬ್ಬಂದಿಗಳು ಜಾಗೃತ ವಹಿಸಬೇಕೆಂದು ಹೇಳಿದರು.
2025-26 ನೇ ಹಂಗಾಮಿನಲ್ಲಿ ನಿವೃತ್ತಿ ಆಗುತ್ತಿರುವ ಕಾರ್ಮಿಕರಿಗೆ ಸನ್ಮಾನ ನೆರವೇರಿಸಿದರು. ಈ ಸಮಯದಲ್ಲಿ ಕಾರ್ಖಾನೆಯ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ, ಇಂಜಿನಿಯರ ಜಿ ಎಂ ವಿ ಕೆ ಕಿಲಾರಿ, ಕೇನ ಜಿ ಎಂ ವಿ ಎಸ್ ಕಣಬೂರ, ಡಿ ಜಿ ಎಂ ಅಮಿತ್ ತ್ರಿಪಾಠಿ, ಎ ಜಿ ಎಂ ಪಿ ಎ ಮತ್ತು ಐ ಆರ್ ಎಂ ರಾಮಚಂದ್ರ, ವಿ ಪಿ ಕಣವಿ, ಎಂ ಕೆ ಚೌಸ್, ಆನಂದ ಕೊಟಬಾಗಿ, ಆರ್ ಬಾಗೋಜಿ, ಪ್ರಕಾಶಚಂದ್ರ ನಾಯ್ಕರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಎಲ್ ಟಿ ಹುಚ್ಚರಡ್ಡಿ, ಬಿ ಜಿ ಹೊಸೂರ, ಮಜದೂರ ಯುನಿಯನ್ ಅಧ್ಯಕ್ಷ ರವಿ ಕುರಬರ, ಸಂಗನಗೌಡ ಬಿ ಪಾಟಿಲ, ಬಸು ಮೇಲಪ್ಪಗೊಳ, ತಮ್ಮಣ್ಣ ನಾಯಿಕ, ಶಿವನಗೌಡ ಪಾಟೀಲ, ಗ್ರಾಂ ಪ ಅ ಮಹಾಲಿಂಗ ಸನದಿ, ವಿ ಪಿ ಕಣವಿ, ಕೆ ವಿ ಗೌಡರ,ಮನೋಹರ ಬಡಿವಾಳ, ಭೀಮಶಿ ಮಗದುಮ, ಲಕ್ಷ್ಮಣ ಕತ್ತಿ, ಶಿವನಗೌಡ ಪಾಟೀಲ, ಕೃಷ್ಣ ಗೋಡಿಗೌಡರ, ಮನೋಹರ ಬಡಿವಾಳ, ಮುರಿಗೆಪ್ಪ ಮಾಲಗಾರ, ವಿ ಆರ್ ಕಣಕರಡ್ಡಿ, ಲಕ್ಷ್ಮಣ ಕೂಡಲಗಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಮಹಿಳಾ ಮಂಡಳ ಹಾಗೂ, ಮಜದೂರ ಯೂನಿಯನ್ ಪದಾಧಿಕಾರಿಗಳು,ಕಾರ್ಮಿಕ ಬಾಂಧವರಿದ್ದರು. ಹೋಮ ಹವನ ಪೂಜಾ ಕಾರ್ಯಕ್ರಮದಲ್ಲಿ ದಂಪತಿಗಳು ಭಾಗಿಯಾಗಿದ್ದರು.

