ಕವನ

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿ ನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿ ನಮ್ಮವರು ತಮ್ಮವರೆಂಬ ಸೌಜನ್ಯದ ಜ್ಯೋತಿ ಸ್ಮರಿಸಿ ದೀಪದಿಂದ ದೀಪವ ಹಚ್ಚಿ ದೀಪಾವಳಿಯ ಸಂಭ್ರಮಿಸಿಕತ್ತಲೆಯ ಮಧ್ಯದಲಿ ಭವಿಷ್ಯದ ದೀಪವ ಕಾಣಿಸಿ ಸೋಲುಗಳ ನಡುವೆ ಗೆಲುವಿನ...

ಕವನ : ವಿಶ್ವವೇ ಲಿಂಗ

ವಿಶ್ವವೇ ಲಿಂಗಭೂಮಿ ತಿರುಗುತ್ತಿದೆ ನಾವು ಎದ್ದಿರಲಿ ಬಿದ್ದಿರಲಿ ಬದುಕಿರಲಿ ರಜೆ ತೆಗೆದುಕೊಂಡಿಲ್ಲ ಅದೆಷ್ಟೋ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿವೆ ಇಲ್ಲಿ ಗುಡಿಯಲ್ಲಿ ನವಗ್ರಹ ಪೂಜೆ ಚಂದ್ರ ಗುರು ಶುಕ್ರ ಶನಿ ರಾಹು ಕೇತುವಿನ ನಿತ್ಯ ಕಾಟ ಪೂಜೆ ಹವನ ಹೋಮ ನಿಂತಿಲ್ಲ ಅಂದೇ ಬಸವಣ್ಣ ಹೇಳಿದ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ವಿಶ್ವವೇ ಲಿಂಗ ಅದನ್ನರಿಯದ ನಾವು ನೀವು ಮಂಗ ! ______________________ ಅಶ್ವಿನಿ ಬಸವರಾಜ ಪಾಟೀಲ

ಕವನ : ರೈತನ ಬವಣೆ

ರೈತನ ಬವಣೆ ಹುಲುಸಾಗಿ ಬೆಳೆದು ಕಬ್ಬು ಲೋಕಕೆ ನೀಡುವನು ಸಿಹಿ ಕಾರ್ಖಾನೆ ಮಾಲೀಕನ ಹಿಗ್ಗು ರೈತನ ಬದುಕು ಮಾತ್ರ ಕಹಿ ।।ಅನ್ನ ಧಾನ್ಯವ ಬೆಳೆದು ತುಂಬುವನು ಲೋಕದ ಹೊಟ್ಟೆ ಬೆಳೆದ ಬೆಳೆಗೆ ಬೆಲೆ ಇಲ್ಲ ನೋಡಲ್ಲಿ ಮಲಗಿಹನು ಖಾಲಿ ಹೊಟ್ಟೆ ।।ಮಳೆಗಾಗಿ ಆಕಾಶದೆಡೆಗೆ ಕಣ್ಣು ವರುಣನ ಕೃಪೆ ಅತಿಯಾಯ್ತು ಬೆಳೆದು ನಿಂತ ಬೆಳೆ ನೋಡಲ್ಲಿ ನೀರು ಪಾಲಾಗಿ ಹೋಯಿತು ।।ಅತಿಯಾಸೆ ಇಲ್ವೇ ಇಲ್ಲ ಹೊಟ್ಟೆಪಾಡಿಗಾಗಿ ದುಡಿವನು ಕೈಗೆ ಬಂದ ತುತ್ತು ಕೈತಪ್ಪಿತ್ತು ನೋಡಲ್ಲಿ...

ಕವನ : ಅಗ್ರಹಾರದ ಬಸವಣ್ಣ !

ಅಗ್ರಹಾರದ ಬಸವಣ್ಣ! ಇರಬೇಕಿತ್ತು ಬಸವಣ್ಣ ಅಂಗದ ಮೇಲೆ ಲಿಂಗವ ತೊರೆದು ಅಗ್ರಹಾರದಲ್ಲಿ ಜಂಗಮನಾಗಿ , ಉಳಿಬೇಕಿತ್ತು ಬಸವಣ್ಣ ಕರಿ ಅಂಗವನ್ನು ಪೂಜಿಸದೆ ಬಿಳಿ ದಾರವನ್ನು ತೊಟ್ಟ ಬ್ರಾಹ್ಮಣನಾಗಿ.ಸಂಗಮದ ಮಡಿಲಲ್ಲಿ ಅಂಗಕ್ಕೆ ಲಿಂಗವ ಕೊಟ್ಟು ಜಾತಿಯಲ್ಲಿ ನೊಂದ ದೇಹದ ಬೆವರಿನ ಹನಿಗೆ ಕೊರಳಿಗೆ ಮಡಿಕೆಯ ಕಟ್ಟದೆ , ಆತ್ಮದ ಲಿಂಗವ ಕಟ್ಟಿ , ಕುಲದ ಸಂಧಿಯಲ್ಲಿ ಬಂಧಿಯಾಗಿದ್ದ ಮೌಢ್ಯತೆಯನ್ನು ಹಾಗೆ ಬಿಡಬೇಕಿತ್ತು ಅಗ್ರಹಾರದ ಬ್ರಾಹ್ಮಣನಾಗಿ.ಇರಬೇಕಿತ್ತು ಬಸವಣ್ಣ ನೀನು ನಿನಗಾಗಿ ಅವರಿವರ ಮತಿಯನ್ನು ತೊರೆದು ಅಗ್ರಹಾರದ ಮಂತ್ರಗಳಲ್ಲಿ ಮೆರೆದು ಪೂಜಿಸಬೇಕಿತ್ತು ಬಸವಣ್ಣ ಹರನಲ್ಲದ...

ಎರಡು ಕವನಗಳು

 ಸೂತ್ರದಾರಕಂಡ ಕನಸುಗಳು ಕರಗುವ ಮುನ್ನ ಅಪ್ಪಿಕೋ ಪ್ರೀತಿಯ ಒಲವ ದಾರಿಯ ನಡೆ ನಿನ್ನ ಬದುಕುಬಾನಿನಂಗಳ ತುಂಬ ಮಿನುಗುತಿವೆ ಚುಕ್ಕೆಗಳು ಬೆಳದಿಂಗಳ ಬೆಳಗಿನಲಿ ಧರೆಗಿಳಿದು ಬಂದ ಚೆಲುವೆ ನೀನುಸಾವು ನೋವನು ಮೆಟ್ಟಿ ಗಟ್ಟಿಗೊಂಡಿದೆ ಜೀವ ನಿಜ ನೆಲೆಯ ಸ್ಪೂರ್ತಿ ನೆಮ್ಮದಿಯ ಬಾಳು ನಿನ್ನ ಒಲವುಹೋಗುವುದು ಬಲು ದೂರ ನಡೆದು ಮರೆಯುವ ಭಾರ ಬೆಸೆದು ಬಿಡು ಪ್ರೇಮ ದಾರ ಸೋಲೋ ಗೆಲುವು ಕಷ್ಟ ನಷ್ಟ ನಗುವ ಮೇಲೆ ಸೂತ್ರಧಾರ   ಕಟ್ಟಿಹೆವು ಕೋಟೆ ಎಲ್ಲದೆಲ್ಲವ ಬಿಟ್ಟು ನಿನ್ನೆಡೆಗೆ ನಾ ಬಂದೆ ಸ್ನೇಹ ಪ್ರೀತಿಯ ಬಾಳು ನಿನ್ನ ಒಲವುಹಲವು...

ಕವನ : ನೀನಿದ್ದರೆ

ನೀನಿದ್ದರೆನೀನಿದ್ದರೆ ನನ್ನ ಜೊತೆಗೆ ಬರಡು ಬಂಜರು ಪ್ರೇಮ ಕಾಶ್ಮೀರಗಿಳಿ ಕೋಗಿಲೆಗಳ ಸುಮಧುರ ಗಾನ ನಲಿವ ನವಿಲಿನ ಬಯಲು ನರ್ತನಉಕ್ಕಿ ಹರಿಯುವ ಸಿಹಿ ಒಡಲ ಪ್ರೀತಿ ಬರೆಯುವೆ ಪ್ರೇಮ ಕವನ ಕಾವ್ಯಸುಂದರನೀನು ಇಲ್ಲದಿದ್ದರೆ ವಿರಹ ವೇದನೆ ಕೂಗುವುದು ನನ್ನ ಬಂಡಾಯದ ಕಹಳೆ _____________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕವನ : ವೈವಿಧ್ಯಮಯ ಪ್ರಕೃತಿ

ವೈವಿಧ್ಯಮಯ ಪ್ರಕೃತಿ!ಬಗೆ ಬಗೆಯ ಬಣ್ಣದಲಿ ಸಿಂಗಾರಗೊಂಡಂತೆ ಹಕ್ಕಿಗಳ ಜೋಡಿ ಇಲ್ಲಿ ಯಾವುದೋ ಸಂಭ್ರಮಕೆ ಸಿದ್ದವಾಗಿಹ ತೆರದಿ ಕಾತರತೆ ಕಣ್ಗಳಲ್ಲಿಬಣ್ಣದ ಕೊಡೆಯನ್ನು ಹಿಡಿದು ನಿಂತಿದೆ ಮರ ತಾನೂ ಪುಳಕದಲಿ ಭಾಗಿಯಾಗಿ ವರ್ಣ ವೈಭವವನ್ನು ಮುಟ್ಟಿ ಮುದಗೊಳ್ಳುವಂತಿದೆ ತಂಗಾಳಿ ಮೆಲ್ಲ ಸಾಗಿಪ್ರಕೃತಿಯಲಿ ಎಷ್ಟೊಂದು ವೈವಿಧ್ಯತೆಯಿಹುದು ಒಳಗಣ್ಣು ತೆರೆದು ನೋಡೆ ಸವಿದ ಹೃನ್ಮನಗಳಲಿ ಉಲ್ಲಾಸ ಉಕ್ಕುವುದು ಕುಸಿದು ಬಿಗುಮಾನದ ಗೋಡೆ*ವಿಶ್ವನಾಥ ಕುಲಾಲ್ ಮಿತ್ತೂರು*

ಕವನ : ಭೀಕರ ಭೂಕಂಪ

ಭೀಕರ ಭೂಕಂಪಏನು ದೈವವಿದು ನಾವು ಬೆರೆತುಕೊಂಡು ಹಲವು ದಶಕ ಬದುಕು ಸಾಗಿಸುತ್ತಿರುವಾಗ ಇಬ್ಬಾಗಿಸುವ ವಿಧಿಯೊಂದು ಧಿಡೀರನೇ ಬಂದು ನಿಲ್ಲಬೇಕೆ ? ಬಾಳ ಪಯಣದಲಿ ಎಂದೂ ಕಂಡರಿಯದ ಭೀಕರ ಭೂಕಂಪ ! ಭೂಮಿ ಬಿರಿಯಿತು ಮೋಡ ನೆಲ ಕಚ್ಚಿತು ಕೆಂಡದ ಮಳೆ ಮೌನದಲಿ ಸೂರ್ಯ ಕಣ್ಣು ಮುಚ್ಚಿದ ದಿಕ್ಕೆಟ್ಟು ನಿಂತೆವು ಗೂಡು ತೊರೆದು ಸಿಹಿ ಸಂಸಾರದ ಜೋಡು ಹಕ್ಕಿ ಪುಟ್ಟ ಮರಿ ಅಗಲಿದವು ಸಾವು ನೋವಿನಲ್ಲಿ ಅಳಿದುಳಿದವರು ಸುಧಾರಿಸುವುದು ಬಹು ದೀರ್ಘದ ಶೋಕ ಕಾವ್ಯ ಶಿವಶಂಕರನಿಗೆ ಭಾವ ನಮನ ಬದುಕು ನೂಕುವುದು ಅವನ ನೆನಪಿನಲಿ ಅವನ ನೆನಹಿನಲಿ_________________________ಡಾ.ದಾಕ್ಷಾಯಿಣಿ ಮಂಡಿ

ಕವನ : ಅಜರಾಮರ ಮಹರ್ಷಿವರೇಣ್ಯರು

ಅಜರಾಮರ ಮಹರ್ಷಿವರೇಣ್ಯರುಡಕಾಯಿತ ದರೋಡೆಕೋರ ರತ್ನಾಕರರು ಅಗ್ನಿಶರ್ಮ ನಾಮಧಾರಿಯಿವರು//ಪ//ಕು(ಪ್ರ)ಖ್ಯಾತ ಕಟುಕರ ಸಹವಾಸಪ್ರಿಯರು ನಾರದರ ಉಪದೇಶ ಪರಿಪಾಲಿಸಿಹರು ದಿವ್ಯ ರಾಮಮಂತ್ರ ಸತತ ಪಠಿಸಿಹರು ಉಗ್ರ ತಪವಗೈದು ಮಹಾಜ್ಞಾನಿಯೆನಿಸಿಹರು/1/ಸಂಸ್ಕೃತ ರಾಮಾಯಣ ಮಹಾಕಾವ್ಯ ಸ್ರಜಿಸಿಹರು ವಿಶ್ವಕವಿ ಮಹಾಕವಿ ಪಟ್ಟಗಿಟ್ಟಿಸಿಹರು ಪ್ರಪಂಚದ ಪ್ರಪ್ರಥಮ ಆದಿಕವಿಯಾಗಿಹರು ಮಹರ್ಷಿ ವಾಲ್ಮೀಕಿ ನಾಮಾಂಕಿತರು/2/ಕೆಸರಿನ ಕಮಲದಂತೆ ಕಂಗೊಳಿಸಿಹರು ನೈತಿಕ ಜೀವನ ಮೌಲ್ಯಗಳ ಧಾರೆಯೆರೆದವರು ಆದಿ ಮಹಾಕಾವ್ಯದ ನೇತಾರ ಅಜರಾಮರರು 'ಪರಿವರ್ತನೆ ಜಗದ ನಿಯಮ' ತತ್ವಬಿತ್ತಿಬೆಳೆದಿಹರು/3/ಗರ್ಭಿಣಿ ಸೀತಾಮಾತೆಯ ಮಹಾ ಪೋಷಕರು ಲವ-ಕುಶರ ಸರ್ವವಿದ್ಯಾಗುರುವರ್ಯರು ರಾಮಾಯಣ ಗಾಯನ...

ಕವನ : ಇದ್ದು ಬಿಡು

ಇದ್ದು ಬಿಡುನೀನು ಸಾಕು ನೀನೊಬ್ಬಳೇ ಸಾಕು ಎತ್ತರದ ಯಶ ವಿಂಧ್ಯ ಪರ್ವತ ಏರಲುನೀನಿದ್ದರೆ ಪಕ್ಕ ಸ್ವರ್ಗ ಸುಖ ನೀನಿರದ ವಿರಹ ನರಕ ಯಾತನೆನಿನ್ನ ಜೊತೆಗೆ ಪಯಣ ಹೂವು ಹಸಿರು ಕಾನನ ನೀನಿರದ ಹೆಜ್ಜೆ ಬರಡು ಮರ ಭೂಮಿನಿನ್ನ ಸ್ನೇಹ ಪ್ರೀತಿ ಒಲವು ಬಾಳ ರೀತಿ ನಿನ್ನ ನೆನಪಿನ ಕ್ಷಣ ನನ್ನ ಜೀವದ ಸ್ಪೂರ್ತಿಇದ್ದು ಬಿಡು ಹೀಗೆ ನನ್ನಲ್ಲಿ ನನ್ನೊಳಗೆ ಸದ್ದಿಲ್ಲದೆ ಮೌನದಲಿ ಕವನ ಕಾವ್ಯ ಭಾವವಾಗಿ______________________ ಡಾ.ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...
- Advertisement -spot_img
error: Content is protected !!
Join WhatsApp Group