ಕವನ

ಕವನ : ಪ್ರೀತಿ ಮತ್ತು ನೆರಳು

ಪ್ರೀತಿ ಮತ್ತು ನೆರಳು ನನ್ನ ನಿನ್ನ ಸ್ನೇಹ ಭಾವ ಅರಳಿ ನಗುವ ಸೂಸಲಿ ಮುನಿಸು ಕರಗಿ ಕನಸು ಮೂಡಿ ಮನಸು ಮನಸು ಬೆರೆಯಲಿ ನಿನ್ನ ಪ್ರೀತಿ ನೆರಳಲಿ...ಕವಿದ ಇರುಳ ಕೊರಳ ಬಗೆದು ಬೆಳಕು ಇಣುಕಿ ಚುಕ್ಕಿ ತೆರಳಿ ಹಕ್ಕಿಗೊರಳು ಹಾಡಲಿ ಭುವನ ಬೆಳಗಿ ನಲಿಯಲಿ ನಿನ್ನ ಪ್ರೀತಿ ನೆರಳಲಿ.....ಶರಧಿ ಎದೆಗೆ ಒರಗಿ ನಗುವ ನದಿಯ ಹೃದಯ ಮಿಡಿತ ಮಧುರ.. ತೀರದಲ್ಲಿ ಅಲೆಯ ನಾದ ಅನವರತ ಮಿಡಿಯಲಿ ನಿನ್ನ ಪ್ರೀತಿ...

ಕವನ : ಮಂಗಣ್ಣಗಳು

ಮಕ್ಕಳಿಗಾಗಿ ಒಂದು ಕವಿತೆ ಮಂಗಣ್ಣಗಳು ಬೆಳಗಿನ ಹೊತ್ತಿಗೆ ಬೇಗನೆ ಎದ್ದು ಹಾದಿ ಬೀದಿಯಲಿ ತಿರುಗುವವುಗಿಡಗಳ ಹತ್ತಿ ಚಿಗುರೆಲೆ ಕಿತ್ತು ಖುಷಿಯಲಿ ತಿನ್ನುತ ಕುಣಿಯುವವು ಟೊಂಗೆ ಟೊಂಗೆಗೆ ಹಾರುತ ಜಿಗಿಯುತ ಹಣ್ಣು ಕಾಯಿಗಳ ಹರಿಯುವವು ಕಿಸಿ ಕಿಸಿ ಎಂದು ಹಲ್ಲನು ಕಿರಿಯುತ ಮಕ್ಕಳ ಮನವನು ಸೆಳೆಯುವವು ಪ್ರತಿ ವಾರವೂ ತಪ್ಪದೆ ಸಮಯಕೆ ನಮ್ಮ ಮನೆಗೆ ಅವು ಬರುತಿಹವು ನಾನು ತಿನಿಸುವ ಸೇಂಗಾ ಕಾಳನು ಖುಷಿಯಲಿ ತಿಂದು ನಲಿಯುವವು... ಆರ್. ಎಸ್. ಚಾಪಗಾವಿ ಬೆಳಗಾವಿ 8317404648

ಕವನ : ವಿಜಯದಶಮಿ

ವಿಜಯದಶಮಿ ನವರಾತ್ರಿ ಇಂದು ಸಮಾಪ್ತಿಗೊಂಡು ಬಂದಿತು ವಿಜಯದಶಮಿ ನವಶಕ್ತಿ ರೂಪಿಣಿ ನವದುರ್ಗೆಯರ ನಮಿಸುವ ಎಲ್ಲರು ಬನ್ನಿಬನ್ನಿ ಮಹಾಕಾಳಿಯ ಭಕ್ತಿಯಿಂದಲಿ ಪೂಜಿಸಿ ಬನ್ನಿಯ ಮುಡಿವ ಹೊನ್ನ ಸಮಾನವು ಈ ದಿನ ಬನ್ನಿಯು ಹಂಚುತ ಹರುಷವ ಪಡೆವದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ ಎನ್ನುವ ಮಾತು ಸತ್ಯ ಮಿತ್ಯದ ಮೇಲೆ ಸತ್ಯದ ಗೆಲುವಿನ ಸಂಕೇತವೇ ಈ ಹಬ್ಬನಾಡಿನ ಸಮಸ್ತ ಬಾಂಧವರಿಗೆಲ್ಲ ವಿಜಯದಶಮಿ ಶುಭಾಶಯ ಬೇಡುವ ಚಾಮುಂಡೇಶ್ವರಿ ತಾಯಿಗೆ ಶಾಂತಿ ಸುಭೀಷ್ಟತೆ ಅಭಯ.ಶ್ರೀಮತಿ ಕಮಲಾಕ್ಷಿ ಕೌಜಲಗಿ ಬೆಂಗಳೂರು

ಕವನ : ಕಪ್ಪತ್ತ ಸಿರಿ

 ಕಪ್ಪತ್ತ ಸಿರಿ ಹಚ್ಚ ಹಸುರಿನ ಗಿರಿಗಳ ಸಾಲು ಮಧ್ಯೆ ಅಂಕು ಡೊಂಕಾಗಿ ಸಾಗುವ ಕವಲುದಾರಿಗಳ ಮಧ್ಯೆ ಹೋಗುವ ಇದುವೇ ಕಪ್ಪತ ಗಿರಿಯ ಸಿರಿ....ಹಸಿರಿನ ಬೆಟ್ಟ ಸುತ್ತುವರಿದು ಹೋಗುವ                   ಬೆಳ್ಳಿ ಮೋಡಗಳು ಬೆಟ್ಟಗಳ ಸಾಲಿನ ಮೇಲೆ     ಬೆಳ್ಳಿಯನ್ನೇ ನಾಚಿಸು ವಂತ ಮಂಜಿನ ಹನಿ ಇದುವೇ ಕಪ್ಪತ್ತ ಗಿರಿಯ...

ಕವನ : ಮತ್ತೆ ಬರುವ ಭಗತ್ ಸಿಂಗ್

ಮತ್ತೆ ಬರುವ ಭಗತ್ ಸಿಂಗ್ಭಗತ್ ಸಿಂಗ್ ಎಂದರೆ ಅದು ಬರಿ ವ್ಯಕ್ತಿಯ ಹೆಸರಲ್ಲ ಇತಿಹಾಸದ ಪುಟಗಳಲ್ಲಿನ ಹಸಿ ಹಸಿ ರಕ್ತದಕ್ಷರಭಗತ್ ಸಿಂಗ್ ಎಂದರೆ ಶೋಷಣೆಯ ವಿರುದ್ಧ ಸಿಡಿದ ಬೆಂಕಿಯ ಚೆಂಡು ಸಮತೆಯ ಕನಸುಸತ್ಯ ಪ್ರೇಮ ಶಾಂತಿ ನಿತ್ಯ ಅವನ ಜಪತಪ ಶಸ್ತ್ರ ನಿಶಸ್ತ್ರ ಹೋರಾಟ ಕೊನೆ ಹೇಳಿದ ಗುಲಾಮಗಿರಿಗೆಭಗತ್ ಸಿಂಗ್ ಎಂದರೆ. ಶತಮಾನಗಳ ಆಕ್ರೋಶ ವಂಚನೆಯ ಚಕ್ರವ್ಯೂಹ ಮೆಟ್ಟಿ ಭವಿಷ್ಯದ ಬದುಕು ಕಟ್ಟಿಕೊಟ್ಟವಭಗತ ಸಿಂಗ ಎಂದರೆ ಕರಾಳ ರಾತ್ರಿಯ ಕಳೆದು ಹುಣ್ಣಿಮೆಯ ಬೆಳಕು ತೋರುವ ಸಮರಸದ...

ಕವನ : ನಗಬೇಕು

ನಗಬೇಕುನಗಬೇಕು ಅಳುವ ಮರೆತು ಮುಂದೆ ಕಾದಿದೆ ಜೀವನ ಕಷ್ಟ ನಷ್ಟ ಸಾವು ನೋವು ದೈವ ವಿಧಿಸಿದ ಬಂಧನಅತ್ತು ಅತ್ತು ಬಿಕ್ಕಬೇಡ ಚಿಮ್ಮಲೊಮ್ಮೆ ಚಿಲುಮೆ ಎಲೆ ಉದುರಿದ ಕಾಂಡದಿ ಹಸಿರು ಚಿಗುರು ಚೇತನನಕ್ಕುಬಿಡು ದುಃಖ ಮರೆತು ಸೊಗಸು ಸಂತಸ ಸವಿ ಮನ ದುಗುಡ ದೂರವಾಗಿ ತೊಲಗಲಿ ಶಾಂತಿ ಪ್ರೀತಿ ಪಾವನಕಿಟಕಿಯಾಚೆ ರವಿಯ ಬೆಳಕು ಸಂಜೆ ಚಂದ್ರನ ಸ್ಪಂದನ ನಗೆಯು ಮುಖದಿ ಮಾಸದಿರಲಿ ಬಾಳು ನಿತ್ಯ ನೂತನ_________________________ ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

ಕವನ : ಮೌನವ ತಬ್ಬಿಕೋ

 ಮೌನವ ತಬ್ಬಿಕೋ ಮೌನದೊಡವೆಯಲಿ ಸಿಂಗರಿಸಿಬಿಡು ಧ್ಯಾನದ ಹೊನಲಲಿ ತೇಲಿಬಿಡು ಸುಖದ ಉತ್ತುಂಗಕ್ಕೆ ಏರಬಹುದು ಅಂತರಾಳದ ನೋವಿಗೂ ಕಸಿವಿಸಿಯಾದೀತು.ಜಗದ ಜಂಜಡದ ನಡುವೆ ಮೋಹದ ಬಲೆ ಸೆಳೆತಕ್ಕೆ ವ್ಯಾಮೋಹದ ಹಂಗು ತೊರೆಯಲು ಅಹಂಭಾವ ಗೋಡೆ ಕಳಚೀತು.ಮಾತಿನ ಭರಾಟೆಗೆ ಬೇಸತ್ತು ಗತ್ತಿನ ನಡೆಯ ಮೂರ್ತರೂಪಕೆ ಮುತ್ತಿರುವ ಬಯಕೆ ಹತ್ತಿಕ್ಕಲು ಮೌನವೆಂಬುದು ಅಗಮ್ಯ ಚೇತನವಾದೀತು.ಕರಾಳ ಮುಖ ತಿಳಿಗೊಳಿಸಿ ನಿರಾಳ ಬದುಕಿನ ಅರ್ಥಕಲ್ಪಿಸಿ ಸರಳ ಜೀವನಕೆ ಅಡಿಪಾಯ ಹಾಕಲು ಮಾತಿನ ವಿರಾಮ ಬಲ ನೀಡಿತು.ಅಪ್ಪಿಕೋ ಮೌನ ಧ್ಯಾನವ ತಪ್ಪಿ ನಡೆಯದಂತೆ ತಡೆಯಲು ಬಂದುದ...

ಕವನ : ನವ ದುರ್ಗಾ ಸ್ವರೂಪಿಣಿ

 ನವ ದುರ್ಗಾ ಸ್ವರೂಪಿಣಿ ನವ ದುರ್ಗಾ ಅವತಾರ ತಾಳಿ ಕೂದಲು ಕೆದರಿ ಕುಣಿವಳು ಕಾಳಿ ಅಸುರರ ಸಂಹರಿಸಲು ನವಶಕ್ತಿಧಾರಿಣಿ ದೇವಾನು ದೇವತೆಗಳ ಸ್ವರೂಪಿಣಿಶುಂಭ ನಿಶುಂಭ ಸಂಹರಿಸಲು ಚಂಡ ಮುಂಡರ ಅಹಂಕಾರ ಅಳಿಸಲು ಭಂಡಾಸುರನ ವಧೆ ಮಾಡಲು ರಕ್ತ ಬೀಜಾಸುರನ ರಕ್ತ ಕುಡಿಯಲು ಕಾಳಿ ದುರ್ಗಾವತಾರ ತಾಳಿ, ನಾಲಿಗೆ ಚಾಚಿದಳು ಮಹಿಷಾಸುರ ಮರ್ದಿನಿ ಇವಳುಸಪ್ತಸತಿ ಪಾರಾಯಣದ ಶ್ರೀದೇವಿ ಲಲಿತಾ ತ್ರಿಪುರ ಸುಂದರಿ ದೇವಿ ಖಡ್ಗಮಾಲ ಸ್ತೋತ್ರ ಪಠಿಸಲು ಲಲಿತಾ ಸಹಸ್ರನಾಮ ಓದಲು ಭಕ್ತರಿಗೆ ಮೋಕ್ಷ...

ಕವನ : ಮುಂಗಾರಿನ ಮುಗುಳು

ಮುಂಗಾರಿನ ಮುಗುಳು ನೋಡಿರೈ ದಿಗಂತದಾಚೆ ಮಳೆಹನಿ ರತಿರೂಪದೆ ಬೀಸಿ ಕರೆದಂತೆ ಕೈಚಾಚಿ ಎನ್ನ ಕವಿಮನಸು ಕರಗುತಿದೆಕಳ್ಳಾಟವಿದೆ ಬಾನಂಚಲಿ ಮತಿಗೆಟ್ಟ ದಿನಕರನಾವಳಿ ಕೊಟ್ಟು ಹೊಂಬಣ್ಣ ಹನಿಗೆ ಇಟ್ಟ ಕವಿಯ ಚಿತ್ತ ತಪಾಸಿಗೆಬಿಸಿಲ್ಗೋಲು ಮೂಡಿದರೆ ಮೈಮನವೆ ಹಗುರಾದಂತೆ ನನ್ನೆದೆಯ ಇಂಗಿತಕೆ ಹೊಸ ಜೀವ ಬಂದಂತೆಮುಂಗಾರಿನ ಮುಗುಳುನಗೆಯ ಬಲೆಗೆ ಬಿದ್ದಿದೆ ಕವಿಹೃದಯ ಅರಿವಾಗದನುಭೋಗ ದಾಳಿಗೆ ಸಿಲುಕಿ ಸಿಹಿ ಸಂಕಟವೆನಗೆಹೇಗೆಂದು ವಿವರಿಸಲಿ ಯಾರಲ್ಲಿ ಬಣ್ಣಿಸಲಿ ಮನ್ಮಥನ ಮುಗುಳುಗಣೆ ಹಿತಭಾವ ವಿಶ್ಲೇಷಣೆನಿಲ್ಲದಿರೆ ಮಳೆಗಾನ ನಿಶ್ಶಬ್ದ ಬೇಡಿಕೆ ಕಳೆಯೆ ದುಖ-ದುಮ್ಮಾನ ಕವಿಯ ಒಡಂಬಡಿಕೆಡಾ.ಭವ್ಯ ಅಶೋಕ ಸಂಪಗಾರ

ಕವನ : ಕನಸು ಕಾಣು

ಕನಸು ಕಾಣು ಕಾಣಬೇಕಿದೆ ಕನಸು ಇರಲಿ ಒಂದಿಷ್ಟು ಆಸೆ ನಲಿವ ರಂಗು ತುಂಬಲು ಬದುಕಿಗೆ ಅರ್ಥ ಬರಲು.ಹಕ್ಕಿಯಂತೆ ಹಾರಲು ದುಂಬಿಯಂತೆ ಹೀರಲು ಕೋಗಿಲೆಯ ಧ್ವನಿಯಾಗಲು ರಾಗ ತಾಳ ಸೇರಲು.ಕನಸು ಹೊತ್ತು ದಿಟ್ಟ ಹೆಜ್ಜೆ ಇಟ್ಟು ಭಾವ ಸುಧೆಯ ಹರಿಸಿ ನೋವ ಸಹಿಸಿ ನುಗ್ಗಲು.ನನಸಾಗುವ ಹವಣಿಕೆಯಲಿ ಆತುರದ ಉನ್ಮಾದ ಏಕೆ ಸಮರ ಸಾರುವೇ ಏಕೆ ಅನವರತ ಕಾಯಕ ನಿಷ್ಠೆ ಸಾಕು.ಕನಸು ಕಂಗಳ ತುಂಬಲಿ ಹುರುಪು ಉತ್ಸಾಹ ಬೀರಲಿ ಇರಿಸು ಮುರಿಸು ಆಗದಂತೆ ನೀತಿ ನೇಮ ಮುರಿಯದಿರಲಿ ಸಾಕು.ಕನಸು ಕಟ್ಟಬೇಕಿದೆ ಮನಸು...
- Advertisement -spot_img

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...
- Advertisement -spot_img
error: Content is protected !!
Join WhatsApp Group