ಕವನ
ನಡೆದ ಹಾದಿಯ ನಿಶಾನೆಯಿಡಿದು
***** *******
ನಾಲ್ದಿಕ್ಕುಗಳು
ಧರೆ ಮೇಲೆ ಸಮವು
ಕತ್ತಲ್ಬೆಳಕುಅಮೃತ ಸುಖ
ಉಂಡ ತರದ ತೆರೆ
ವೈರತ್ವದ ಗೆರೆಯುಒಡಹುಟ್ಟಿದ
ದಾಯಾದಿ ಕದನಕೆ
ಕಾಲು ಕೆರೆದುನೆಲ ಮುಗಿಲ
ಭೂತ ವೃತ್ತ ಚಿತ್ತವೆ
ಕತ್ತಲದ ಕಣ್ಣುನಡೆದ ಹಾದಿಗೆ
ನಿಶಾನೆಯ ಹೊದಿಕೆ
ಕರ್ಕಶ ಕೇಕೆಕರಿ ಕಂಬಳಿಯಂತೆ
ಚಿತ್ರ ವಿಚಿತ್ರ ದನಿ
ಮುಸುಕ ಹಾಸಿತುಪ್ರಳಯ ಮೆಟ್ಟಿ
ಹಲುಬಿತು ಮಲಿನ
ಕಪಟ ದ್ವೇಷದಿಅದೋ
ಚಿತ್ಕಳೆ ಬಂತು
ಯೋಗ ನಿದ್ರೆ ತಳೆದು
ಯೋಗಿಯಂತೆಹಿರಿತನದ
ಮಿಂಚರಿಸಿ ನರ್ತಿಸುತ
ಚಿನ್ನದ ನಗೆ ಬೀರಿತಿಳಿ ಬೆಳಗು
ಅಂಗಳಕಿಳಿಯಿತು
ಹರುಷ ಚೆಲ್ಲಿಬಿಲ್ಲು ಬಿಡಿಸಿ
ಸಂಚರಿಸಿತು ಬಾಣ
ಇಳೆ-ನಾಕಕೆಪ್ರಾಯ ಪೌರುಷ
ಕರ್ಮ ಮರ್ಮದ ಬೀಗು
ನಿತ್ಯವೂ...
ಕವನ
ದೀಪಗಳ ಹಬ್ಬ
ಮನದ ಮೂಲೆಯಲ್ಲಿ
ಕವಿದಿದೆ ಕಾರ್ಮೋಡ
ಬದುಕಲ್ಲಿ ಕವಿದಿದೆ
ಅಂಧಕಾರ....
ದೀಪಗಳ ಹಬ್ಬದ
ಬೆಳಕಿನಲ್ಲಿ ನಶಿಸಿಹೋಗಲಿ
ಜಗಕೆ ಅಂಟಿದ ಕರೋನಾ
ಎಂಬ ಪೆಡಂಭೂತ...
ದೀಪಗಳ ಹಬ್ಬದ ಬೆಳಕಿನಲ್ಲಿ
ನಾಡಿನ ಮನೆ-ಮನೆಯ
ಅಂಗಳದಲ್ಲಿ ಪ್ರಜ್ವಲಿಸಲಿ
ಹಣತೆಯ ದೀಪ
ಮನದಲ್ಲಿ ಮೂಡಲಿ
ಹರ್ಷದ ಹೊಂಬೆಳಕು
ಹಣತೆಯ ಹಚ್ಚಿ
ಬೆಳಗಿ ಮನೆಯ ದೀಪ
ಸಂಭ್ರಮದಿ
ಆಚರಿಸೋಣ
ದೀಪಾವಳಿ ಹಬ್ಬತೀರ್ಥಹಳ್ಳಿ ಅನಂತ ಕಲ್ಲಾಪುರದೀಪಾವಳಿ
ಬೆಳಗುತಿದೆ ಹಣತೆ
ದೀಪಾವಳಿ ಪರ್ವದಿ
ಮನೆ ಅಂಗಳ ಮನದಂಗಳದ
ಅಜ್ಞಾನವ ಕಳೆಯುತ
ನಿಸ್ವಾರ್ಥದ ಕಾಂತಿಯಲಿ
ವಿವೇಕದ ಪಥದಲಿ
ನಿಷ್ಕಲ್ಮಷ ಭಾವದಲಿ
ಓತಪ್ರೋತವಾಗಿ
ಬೆಳಗುತಿದೆ ಹೊನ್ನ ಹಣತೆ
ಮೇಲು ಕೀಳುಗಳ ಭೇದವಳಿಸುತ
ಎಲ್ಲರಲಿ ನಗೆ
ಮಧುರತೆಯಲಿ ಚಿಮ್ಮಿಸುತಲಿ
ಬರುತಿಹ ಉಜ್ವಲ ಭವಿತವ್ಯದಿ
ಬೆಳಗುತಿದೆ...
ಕವನ
ದೀಪಾವಳಿದೀಪದಿಂದ ದೀಪ ಹಚ್ಚಿ
ಬೆಳಕು ಪರಿಹರಿಸುವಂತೆ
ಮನುಷ್ಯರ ಮನದಿಂದ ಮನಕ್ಕೆ
ಪ್ರೀತಿ,ಸೌಹಾರ್ದತೆ,ಅನುಕಂಪ ಹಚ್ಚಿನಾನು ನನ್ನದೆಂದು ತೊರೆದು
ಹೊಸ ಬೆಳಕು ಮೂಡಲಿ
ಸಹೋದರತೆ ಸಹಬಾಳ್ವೆ ಹೊಮ್ಮಲಿ
ಬಾಳು ಸೌಹಾರ್ದತೆಯ ಪ್ರತೀಕವಾಗಲಿಅಂಧಕಾರವನ್ನು ತೊಡೆದು ಹಾಕಿ
ಜ್ಞಾನ ದೀವಿಗೆ ಹೊತ್ತಿಸಿ
ಅಂತರಂಗದ ಕಣ್ಣು ತೆರೆದು
ನಾವು ನಮ್ಮವರೆಂಬ ಭಾವ ಅರಳಿಸಿಬೇದ ಭಾವ ಕಿತ್ತೆಸೆದು
ನಿಸ್ವಾರ್ಥದ ಬದುಕು ಸಾಗಿಸಿ
ಬಾಳು ನಂದನವನದಂತೆ
ದೀಪಗಳಾಗಿ ಜಗಮಗಿಸಿ ಬೆಳಕು ಚೆಲ್ಲಲಿಚಿದಂಬರ ಬಡಿಗೇರ ಶಿಕ್ಷಕರು
ಹಣವಾಳ.
ಕವನ
ಪ್ರತೀಕ್ಷೆಯ ಲಹರಿ....ಮೀನಾಕ್ಷಿಯ ಮನದೊಳು
ಪ್ರತೀಕ್ಷೆಯ ನೆರಳು
ಸಾಗುತಿದೆ ಹಗಲಿರುಳು
ಸುಂದರ ಕನಸಿನೊಳು||
ಕಟ್ಟೆಯೊಡೆದ ಭಾವನೆಗೆ
ಚೆಡಪಡಿಸಿದಳು ಭಾಮೆಯು
ನೀಲಸೀರೆ ಧರಿಸಿ ತನುವಿಗೆ
ಸ್ವರ್ಣಹಾರ ಹಾಕಿ ಚೆಲುವೆಯು||ಮನೆದೇವರಿಗೆ ದೀಪ ಹಚ್ಚಿ
ಮನದೇವರಿಗೆ ಕಾದಳು ನೆಚ್ಚಿ
ಗಿಣಿಮೂಗಿಗೆ ನತ್ತನು ಚುಚ್ಚಿ
ಜೇನಧರಗಳಿಗೆ ಕೆಂಬಣ್ಣ ಹಚ್ಚಿ||ಪ್ರತಿನಿಮಿಷ ಮನಹರುಷ
ಹೃದಯದಲಿ ಮಹಾಪುರುಷ
ಆಶೆಕಂಗಳಲಿ ನಲ್ಲನುತ್ಸಾಹ
ನಲ್ಲೆಯಲಿಲುಲ್ಬಣಿಸಿದೆ ಮೋಹ||ಸಂಧ್ಯಾಕಾಲದಿ ಬಾಗಿಲತೆರೆದು
ನೂಪುರಸದ್ದದು ನಲ್ಲನಿಗೆ ತಲುಪಿ
ಗೋಪುರ ಗಂಟೆಯು ಮೊಳಗಿತು
ಚೆಂದದ ಚಂದ್ರಮ ಬಂದಿಹನು ||
ನೊಂದಿಹ ಮನದಿ ಪ್ರೀತಿಚಿಲುಮೆ
ತಂದಿಹ ನಲ್ಲೆಗೆ ಸವಿ ಜೇನಿನೊಲುಮೆ
ಹೂವಲಿ ಗಂಧವು ಬೆರೆತಂತೆ
ಹಾಲಲಿ...
ಕವನ
ಭಾವ ಸ್ಪಶ೯🍁🍁🍁🍁🍁ಬಸಿರಿನಲಿ ಅಮ್ಮನ ಪ್ರೀತಿಭಾವ ಸ್ಪಶ೯
ಕರುಳ ಕುಡಿ ಕಂಡಾಗ ಜಗಗೆದ್ದ ಹಷ೯!
ಮಗು ಬೆಳದಂತೆ ಬಿದಿಗೆ ಚಂದ್ರ ಚೆಲವು
ತಾಯಿಗೆ ಮಗುವೇ ಖುಷಿ ಪ್ರಪಂಚವು .ಸೃಷ್ಟಿಯ ಮಾಯಾಗಾರ
🌹🌹🌹🌹🌹🌹🌹ಆಕಾರ ಚಿಕ್ಕದು ನೋಡು ಗುಲಗಂಜಿ
ಅಳಕದೆ ಬಾಳುವುದು ಯಾರಿಗದು ಅಂಜಿಬೀಗುವುದು ಮನಸಲಿ ಒಳ ಒಳಗೆ
ಬಂಗಾರ ತೂಗುವ ತಾಕತ್ತು ತನ್ನೊಳಗೆನಮ್ಮೂರಲಿ ನಾ ನಿನ್ನ ನೋಡಿರುವೆ
ಅಕ್ಕಸಾಲಿಗ ಭೋಜಪ್ಪನ ತಕ್ಕಡಿಯೊಳಗೆಸುಂದರ ಕೆಂಪು ಬಿಳಿ ಕಪ್ಪು ಮೈಬಣ್ಣ
ಚಿಕ್ಕಗಾತ್ರದಿ...
ಕವನ
ಮುದುಡಿದ ತಾವರೆ
ಯಾರ ಆಸರೆಯು ಪಡೆಯದವಳು
ಕೋಲಿನ ಆಸರೆ ಪಡೆದು ನಡೆದಳು
ಜೀವದಾಸೆ ತೊರೆದು ಬಾಳುವವಳು
ಒಂಟಿಯಾಗಿ ರಸ್ತೆಯಲಿ ಸಾಗಿದಳು.
ಹಣ್ಣಾದ ಮುದುಕಿ ಬಾಗಿ ನಡೆದಳು
ಜೀವನದ ಕಷ್ಟಗಳು ನುಂಗಿ ಬಿಟ್ಟಳು
ಹಲವು ತಿರುವುಗಳು ಸಾಗಿ ಬಂದಳು
ನೋವಿನ ಮೊಗವು ತೋರಿಸದವಳು.
ಮುದುಡಿದ ತಾವರೆ ಮುಖದವಳು
ಬಿಳಿ ಕೂದಲು ಹರಕು ಸೀರೆಯವಳು
ಅಂಕುಡೊಂಕು ರಸ್ತೆಯಡಿ ಹೋದಳು
ಯಾರನ್ನೂ ದೂಷಿಸದ ಗುಣದವಳು.
ಜೀವನದ ಬೇಸರವ ನಡೆದು ಕಳೆವಳು
ಮುಂಜಾನೆ ಮಂಜಿನಲಿ ಸುತ್ತಾಡುವಳು
ಮೂಲೆಯಲ್ಲಿ ಕೂಡದ ಯೌವ್ವನದವಳು
ಕಾಲನ ಬರುವಿಕೆಗೆ...
ಕವನ
ಮಾಗಿದ ನೋವುಗಳು !
ಏನಿತು ವಿಚಿತ್ರವು ಜೀವನದ ಪಯಣ
ಸಾಗಿದೆ ತಿರುವುವಿನಲಿ ತೀರದ ಯಾಣ
ಹಗಲಿರುಳುನಂತೆ ಕತ್ತಲು ಬೆಳಕಿನಾಟ
ಬಾಲ್ಯ ಹರೆಯ ಮುಪ್ಪಿನ ಮುಸಿಕಿನಾಟ
ಬೆನ್ನ ಮೇಲೆ ತೀರದ ಕಹಿನೆನಪಿನ ಬುತ್ತಿ
ಸಾಗಿದೆ ಮಾಗಿದ ನೋವುಗಳ ಹೊತ್ತು
ಬಿತ್ತಿದ ಬೀಜ ಗಿಡಮರವಾಗಿ ವರವಾಗಿವೆ
ಹೆತ್ತ ಮಕ್ಕಳ ಆಸರೆಯಿಲ್ಲದೆ ಭಾರವಾಗಿದೆ
ಭಾವಬಸಿರು ಜೀವಹಸಿರು ಕೆಸರಂತಾಗಿದೆ
ದುಃಖಕೆ ಕಾಯ ಬಾಗಿದೆ ಆಶ್ರಯಕೆ ಕೋಲಿದೆ !!
ಬರಿಗಾಲು ಬಾಗಿದ ಬೆನ್ನು ಭಾವದಿ ನೋವು
ಸುತ್ತ ಹಸಿರು...
ಕವನ
“ಕಾವ್ಯ ಕಲರವ, ಗಂಗಾವತಿ” ಇವರಿಂದ ಹಮ್ಮಿಕೊಳ್ಳಲಾಗಿದ್ದ ೧೭ ನೇ ಕವಿಗೋಷ್ಠಿಯಲ್ಲಿಭಾಗವಹಿಸಿರುವ ಕವಿಗಳ ರಚನೆಗಳು
ಸಂಗಾತಿ
ಚಳಿಗಾಲದಲ್ಲಿ
ಮೈ ಕೊರೆಯುವ
ಚಳಿಗೆ
ಬಿಸಿ ನೀಡುವ
ನನ್ನ ಮುದ್ದು ಸಂಗಾತಿ
ಬೇಸಿಗೆಯಲಿ
ತಂಪಾಗಿ
ಚಳಿಗಾಲದಲಿ
ಬಿಸಿಯಾಗಿ
ಮಳೆಗಾಲದಲಿ
ಹಿತವಾಗಿ
ಮರೆಲಾರದ
ಸುಖ ನೀಡುವ
ನನ್ನ ಮುದ್ದು ಸಂಗಾತಿ
ನನಗೆ ಸಾಥಿಯಾಗಿ
ಸ್ಪರ್ಷಕೆ ಹಿತವಾಗಿ
ನೆಮ್ಮದಿಯ
ಬಿಸಿ ಅಪ್ಪುಗೆ ನೀಡುವ
ನನ್ನ ಮುದ್ದು ಸಂಗಾತಿ
ಸುಪ್ತ ಭಾವಗಳ
ಕೂಡಿಸಿ
ಸರ್ವ ಸುಯೋಗ
ಸಂಪನ್ನ ತರುವ
ಸರ್ವಋತು ಸಖ್ಯದಾರಿ
ನನ್ನ ಮುದ್ದು ಸಂಗಾತಿ
ಹಲವಾರು ಬಣ್ಣ
ನೂರಾರು ಭಾವ
ಸಾವಿರಾರು ಕನಸು
ತರುವ
ನನ್ನ ಮುದ್ದು ಸಂಗಾತಿ
ಲಕ್ಷಾಂತರ ನೆನಪು
ಕೊಟ್ಯಾನಂತರ
ಚಿತ್ತಾರ
ನವನವೀನ
ಝೇಂಕಾರ
ಮೂಡಿಸುವ
ನನ್ನ ಮುದ್ದು ಸಂಗಾತಿ
ಬಿಸಿ ಅಪ್ಪುಗೆಯಲಿ
ನನಗೆ ರಕ್ಷಾಕವಚವಾಗಿ
ಸದಾ ನನ್ನ ಜೊತೆಗೆ ಮಲಗುವ
ನನ್ನ ಮುದ್ದು ಸಂಗಾತಿ
ನೂರಾರು ರಂಗು
ರಂಗಿನ ಬಟ್ಟೆ
ತುಂಡು ತುಂಡು ಸೇರಿಸಿ
ಅಖಂಡತೆಯ...
ಕವನ
ನಲಿವ ಮನದಲಿ ಕುಣಿದು ನಿಲ್ಲಲು
ಒಲಿದ ಚೆಲುವಿನ ಮಾನಿನಿ|
ಜಲದ ಮತ್ಸ್ಯದ ತೆರದಿ ಹರಿಯುವ
ಚಲಿಸಿ ಹೋಗಿಹ ಭಾಮಿನಿ||
ಕಂಗಳಂದದಿ ಮುಗುಳು ನಗೆಯದು
ರಂಗಿನಲ್ಲಿಯೆ ಮಿನುಗುತ|
ಸಂಗ ಬಯಸುತ ಬಂದೆ ಚೆಲುವಿಗೆ
ಭೃಂಗದಂತೆಯೆ ಅರಸುತ||
ಕಡಲ ಮುತ್ತಲಿ ಹೊಳೆವ ಪ್ರೇಯಸಿ
ತಡಿಯ ಲತೆಯಲಿ ಹೊಳೆಯುವೆ|
ಒಡಲ ಪ್ರೀತಿಯ ಬಿಚ್ಚಿ ಹೇಳುವೆ
ಪಡುವ ಕಡಲಲಿ ಇಳಿಯುವೆ||
ಮೌನ ಧರಿಸದೆ ಒಲಿದು ಬಾರೆಯ
ತಾನ ತಂದನವೆನುತಲಿ|
ಗಾನ ಮೋಹನ ರಾಗ ನುಡಿಸುವ
ಜಾಣೆ ವೀಣೆಯ ನುಡಿನಲಿ||
ಗೌರವರ್ಣವು ತನುವು ತುಂಬುತ
ಶೌರ...
ಕವನ
ಗಂಡುಗಲಿ ಕುಮಾರ ರಾಮ
ಕನ್ನಡ ನಾಡಿನ,ಚಿನ್ನದ ಬೀಡಿನ
ರನ್ನದ ರಾಮನು ಗಂಡುಗಲಿ||
ಕನ್ನವ ಹಾಕುವ,ನನ್ನಿಯ ನಾಡುವ
ಕುನ್ನಿಗೆ ಸಿಂಹ ಸ್ವಪ್ನದಲಿ ||೧||
ಪರನಾರಿಯಣ್ಣ,ಶಿರಕಾಯೊವಣ್ಣ
ಪರಶಿವನಾಂಶದ ರಾಮಣ್ಣ |
ಧರಣಿಗೆ ಕುತ್ತನು,ತರುವಂತ ಶತ್ರುವಿಗೆ
ಮರಣದ ದೀಕ್ಷೆಯ ನೀಡುವನು ||೨||
ಕಂಪನ ಹುಟ್ಟಿಸೊ,ಕಂಪಿಲ ರಾಯನ
ಸಂಪಿಗೆ ಸುಂದರ ಯುವರಾಜ |
ಇಂಪಿನ ದನಿಯವ,ಕೆಂಪನೆ ಬಣ್ಣವ
ಕಂಪನು ಮೂಡಿಸೊ ರವಿತೇಜ||೩||
ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ
ಬಿತ್ತದು ಹೊಡೆತವು ರಾಮನದು |
ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು
ಬಿತ್ತದು ಮಾತೆಯ ಮನೆಯೊಳಗೆ||೪||
ಚೆಂಡನು ಬೇಡಲು,ಗಂಡ್ಹುಲಿ ಬಂದುದ
ಕಂಡಳು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



