ಕವನ
ಹನಿ ಹನಿ ಇಬ್ಬನಿ
ಸಂಸಾರ
ಸೂತ್ರಕ್ಕೆ ತಕ್ಕಂತೆ ಇದ್ದರೆ
ಎಲ್ಲಾ ಸಸಾರ
ಬಿಡಬೇಕು ಒಮ್ಮೊಮ್ಮೆ
ಇಬ್ಬರೂ ಹಟ
ಇಲ್ಲವಾದರೆ ಬಾಳು
ಸೂತ್ರ ಹರಿದ ಗಾಳಿಪಟ!!
ಸುಮಂಗಲೆ
ಮಂಗಳನ ಅಂಗಳವ
ತಲುಪಿದರೆ ಏನು?
ಮಂಗಳಸೂತ್ರದ ಬೆಲೆಯ
ಅರಿತಿಹಳು ಹೆಣ್ಣು
ಏಳು ಬೀಳುಗಳಲಿ
ಗಂಡನಿಗೆ ಸಮನಾಗಿ
ಮುದ್ದಾದ ಮಕ್ಕಳಿಗೆ
ಮೊದಲನೇ ಗುರುವಾಗಿ
ಸತಿಯಾಗಿ ಮತಿಯಾಗಿ
ಬಾಳಿದರೆ ಸಾಕಲ್ಲವೇ?
ನಮಗೇಕೆ ಬೇರೆ ಗೊಡವೆ?
ಸ(ವಿ)ರಸ
ಊಟದೊಳಗಿರಬೇಕು
ಉಪ್ಪಿನಕಾಯಿಯಂತೆ
ಉಪ್ಪಿನಕಾಯಿ ಊಟವಾದರೆ
ಪಿತ್ತ ಕೆರಳುವುದಂತೆ
ಎಲ್ಲಕ್ಕೂ ಮಿತಿಯುಂಟು
ಮೀರಿದರೆ ಕಗ್ಗಂಟು
ಸಮರಸದ ನಂಟು
ಸ್ವರ್ಗಕ್ಕದು ಮೆಟ್ಟಿಲು....
ಎಂಟೇ.... ಎಂಟು...!!
ಸತಿ ಪತಿ
ಸಂಸಾರದ ಪಥದಲ್ಲಿ
ಸತಿ ಸರಸತಿ ಆದರೆ
ಪತಿ ಪರಬ್ರಹ್ಮ
ಇಬ್ಬರಿಗೂ ಇರುವುದು
ಅವರವರದೆ ಧರ್ಮ
ನಡು ನಡುವೆ ಬರದಂತೆ
ತಡೆದರಾಯ್ತು...
ಕವನ
ಕವನ (ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಈ ಕವನ)
*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ*
ಸರಳ ವ್ಯಕ್ತಿತ್ವದ,ಸೇವಾ ತತ್ಪರ
ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ,
ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ,
ಊರು ತೊರೆದು ತೋಟ ಸೇರಿದ ಕುಟುಂಬ,
ಸುಂದರ ಹಸಿರು ಪರಿಸರದಲ್ಲಿ
ಅಪ್ಪನ ಜನನ....
ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ,
ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ,
ಹಸು ಕಟ್ಟಿ,ಸೆಗಣಿ ಬಾಚಿ,ತೋಟ ಬಳಸಿ,
ಸೈಕಲ್ಲೇರಿ ಶಾಲೆಗೆ ಹೊರಡುತ್ತಿದ್ದ ಸಮಯಪಾಲಕ,ಅಪರೂಪದ ಶಿಕ್ಷಕ ನಮ್ಮಪ್ಪ...
ಹುಟ್ಟಿದೂರಿಗೆ ಪಾಠ ಹೇಳುವ ಐನೋರಾಗಿ,
ಕರ್ತವ್ಯ ನಿರ್ವಹಿಸಿದ ಊರವರಿಗೆ
ತಿಳಿಹೇಳುವ ಮಾರ್ಗದರ್ಶಕರಾಗಿ,
ವ್ಯಾಜ್ಯಗಳ ಪರಿಹರಿಸುವ...
ಕವನ
*ಅಪ್ಪ*
ಎಷ್ಟೇ ಪ್ರಯತ್ನಿಸಿದರು
ಬರೆಯಲಾಗುತ್ತಿಲ್ಲ
ಅಪ್ಪಾ...
ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ...!!
ಹೆಗಲ ಮೇಲೆ ಹೊತ್ತು
ಜಗವತೋರಿದವನು
ಎದೆಗೆ ಅವುಚಿಕೊಂಡು
ಮುದ್ದಿಸಿದವನು ನೀನು
ಅಪ್ಪಾ.....
ನೀನ್ಯಾಕೋ
ರಾಗಕೆ ಸಿಗುತ್ತಿಲ್ಲ...!!
ಸಮಾನ ಹಕ್ಕು ಕೊಟ್ಟು
ಹೆಮ್ಮೆ ಪಟ್ಟವನು ನೀನು
ನಿಷ್ಠೆಯನು ನಿತ್ಯ ರೂಢಿಯಲಿ ತಂದವನು
ಅಪ್ಪಾ....
ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ....!!
ಮೌಲ್ಯಗಳನು ಪುಟಕ್ಕಿಟ್ಟ
ಕುಶಲಕರ್ಮಿ ನೀನು
ಪ್ರೀತಿಯ ಸಿರಿವಂತಿಕೆ
ಉಣಸಿದ ಸಾಹುಕಾರ
ಅಪ್ಪಾ....
ನೀನ್ಯಾಕೊ ಲೆಕ್ಕಕ್ಕೆ
ಸಿಗುತ್ತಿಲ್ಲ.....!!
ಸತತ ದುಡಿದ ಕಾಯಕಯೋಗಿ ನೀನು
ಜಗದ ಸುಖವನೆಲ್ಲಾ
ನನ್ನ ಬೊಗಸೆಗೆ ತಂದವ ನೀನು.....
ಅಪ್ಪಾ ನೀನ್ಯಾಕೊ ವ್ಯಾಖ್ಯಾನಕ್ಕೆ ಸಿಗುತ್ತಿಲ್ಲ...!!
*ಡಾ. ನಿರ್ಮಲಾ ಬಟ್ಟಲ**ಅಪ್ಪ*
ಅಪ್ಪ ಎಂಬ ಪದವು ಅಮೃತವು
ತಂದೆಯೆಂದರೆ ತನ್ಮಯವು//ಪ//
ಮನೆ...
ಕವನ
*ವಿಹು ಗಿಳಿ*
ತುಂಟ ನಗೆಯ ಮುದ್ದುಕಂದ
ನಿನ್ನ ಬೆಡಗು ಅಂದಚೆಂದ
ಹಾಲುಗೆನ್ನೆ ಹೊನ್ನ ತುಟಿಯ
ಸಣ್ಣ ಸಣ್ಣ ಹೆಜ್ಜೆ ನಡೆಯ
, ಹವಳ ತುಟಿಯ ತುಂಬು ಮನೆಯಾ
ಅರಳುಮರುಳ ನೋಟದಿ ಎಲ್ಲರ ಸೆಳೆಯುವಾ
ಕಾಲನೆತ್ತಿ ಬೆರಳ ಬಾಯಲ್ಲಿಟ್ಟು
ಹೊಟ್ಟೆ ಮೇಲೆ ಅಂಗಿ ತೊಟ್ಟು
ಬಂಗಾರ ಬಳೆಯ ಕೈಯಲಿಟ್ಟು
ಮುತ್ತಿನಂದದಿ ಹಾಸಿಗೆಯಲ್ಲಿ ಹೊಳೆಯುತಾ
ಹೊರಳಿ ಮರಳಿ ಅತ್ತು-ಕರೆದು
ಅಮ್ಮನೆದೆಯ ಹಾಲು ಕುಡಿದು
ಮನೆಯಲಿ ಎಲ್ಲರ ಪ್ರೀತಿ ಅಮೃತದಿ ಮಿಂದು
ಮಿನುಗುತಾರೆ
ಯಂತೆ ಹೊಳೆಯುವಾ
ನಡೆಯಲೆದರುತಾ ಹೆಜ್ಜೆಯಿಟ್ಟು
ಅಳುತ ನಗುತ್ತಾ ತಿಂಡಿ...
ಕವನ
ದ್ವಂದ್ವ
ಜೀವನವೆಂದರೆ
ಬರಿ ಸಂತಸವೇ ತುಂಬಿದ ಜೋಳಿಗೆಯಲ್ಲ....
ಕಾಣದ ಜೋಳಿಗೆಗೆ ಕೈಹಾಕಿದಾಗ ಸಿಗುವುದನು
ನೋಡಿ ನೀ ದಕ್ಕಿಸಿಕೊಳ್ಳಬೇಕು....
ನೋವು ನಿರಾಶೆಹತಾಶೆಗೆ
ಕುಗ್ಗಿದರೆ ಹಿಗ್ಗನು ಕಾಣಲು ತಾಳ್ಮೆ ಬೇಕು, ಕಾಣುವ ಛಲವು ಬೇಕು....
ಮನದಮಾತಿಗೆ ಮನಸ್ಸು ಕೊಡುವ ಒಂದು ಹೃದಯವನ್ನಾದರು
ಸಂಪಾದಿಸಬೇಕು....
ಒತ್ತಿ ಇಡುವ ಒತ್ತಡಗಳ
ಮುಟೆಯನೂ ಒಮ್ಮೆ ಯಾದರು ಹರವಿ ಹಗುರಾಗಬೇಕು....
ಅಹಂನ ಕೋಟೆಯೊಡೆದ
ಅಂಗಳದಲಿ ಅಳುವ
ಮಗುವಂತೆ ಅತ್ತು ಅತ್ತು
ಹಸನಾಗಬೇಕು.....
ಬದುಕು ಸರಿಸಿ ಸಾವು
ಕರೆಯುವಮುನ್ನ
ಕ್ಷಣವಾದರು ನಿನ್ನ ನೀ ಪ್ರೀತಿಸಬೇಕು....
ದಿನವೂ ಕಾಣುವ ಹಗಲು
ರಾತ್ರಿಯಂತೆ ಜೀವನದ...
ಕವನ
ಪ್ರಿಯದರ್ಶಿನಿಗೆ...
ಬೆಡಗು ಬೆರಗಿನ ಹಾಯ್ ಹಲೋಗಳ ಮಧ್ಯೆ
ಅಂದು ನಾ ನಿನ್ನ ಗುರುತಿಸಿದೆ
ನನಗೂ ನಿನಗೂ ಇಲ್ಲ
ಯಾವ ಜನ್ಮದ ನಂಟು
ಆದರಿದೋ ಬಿದ್ದಿದೆ
ನಮ್ಮ ಸ್ನೇಹಕ್ಕೆ ಗಂಟು
ನೀಳದ ನವಿರಾದ
ಆ ಕೇಶರಾಶಿ
ಸೆಳೆಯುತಿರೆ ನಯನಗಳು
ಸ್ನೇಹ ಸೂಸಿ
ಚೈತನ್ಯ ಪುಟಿಯುವ
ಸೌಮ್ಯ ವದನ
ಲತೆಯ ಸೊಬಗಿನ ಭಾವ
ಬಂಧುರದ ಸದನ
ಸ್ನೇಹ ಸಂಪತ್ತಿಗೆ
ನೀ ಮಾರ್ಗದರ್ಶಿ
ಅರಳಿದ ಕಣ್ಣುಗಳೇ
ಹೇಳುತಿವೆ ಸಾಕ್ಷಿ
ಮನನೋಯಿಸುವವರ
ಕಂಡು ನೀನು
ಬೇನೆ ಬೇಸರಿಕೆಗಳು
ಬಾರದೇನು?
ನಿನ್ನ ನುಡಿಯಲಿ
ಜೇನಿನಮೃತದ ಸವಿಯು
ನಿನ್ನ ಬಣ್ಣಿಸಲೆಂದೇ
ಆಗುವೆನು ಕವಿಯು
ಗೆಳತಿಯೇ ಹಾರೈಸುವೆ
ನಾನು ಇಂದು
ಸ್ನೇಹದ ಲತೆಯು ತಾ
ಪಲ್ಲವಿಸಲೆಂದು
ಶೈಲಜಾ.ಬಿ. ಬೆಳಗಾವಿಬಾಳ...
ಕವನ
"ಹಳ್ಳೀ ಸೊಬಗು-ಪಟ್ಣದ ಬೆಡಗು"
ತಿಂಗಳೂಟವ ಬಿಟ್ಟು
ತಂಗಳಿನ ಆಸೆಗೆ
ಕಂಗಳು ಕೋರೈಸಲು
ಹೊರ ಬಂದೆ ಈಚೆಗೆ
ಗಗನಚುಂಬಿತ ಮನೆಯು
ಝಗಮಗಿಸೋ ದೀಪಗಳು
ಹೊಸ ಬಗೆಯ ದಿನಚರ್ಯವು
ಹೊಸಿಲಿರದ ಹೊಸ ಮನೆಯು
ಹುಸಿ ಪ್ರೀತಿ, ಹೊಸ ನೀತಿ
ಹಿಂಡಿನಲ್ಲಿ ಉಂಡು
ಅದು ಎಷ್ಟೋ ದಿನವಾಯ್ತು
ಬಂಡು ಬಾಳಿಗೆ ಮನವು
ರೋಸಿ ಹೋಯ್ತು
ಹಸಿ ಬೆಣ್ಣೆ,ಹಸು ಗಿಣ್ಣ
ಕೆನೆಮೊಸರು ಬಿಸಿ ರೊಟ್ಟಿ
ಕಸಬೆಂಡೆ ಉಪ್ಪಿನಕಾಯಿ
ಮೆಂತ್ಯ ಮೆಣಸಿನ ಕಾಯಿ
ಹಪ್ಪಳ ಸಂಡಿಗೆ
ಶೇಂಗಾ ಹೋಳಿಗೆ ತುಪ್ಪ
ತರತರಹದ ಚಟ್ನಿಪುಡಿ
ನವಣೆಕ್ಕಿ ಹುಳಿಬಾನ
ಇವುಗಳಿಗೆ ಸಮನಲ್ಲಾ
ಪಂಚಭಕ್ಷ ಪರಮಾನ್ನ..!!
ಕೆಸರೊಳಗೆ ಕೊಸರಾಡಿ
ಕೆಸರಾಟವನು ಆಡಿ
ನದಿ...
ಕವನ
ಕಣ್ಣಿಗೆ ಕಾಣದ ಜೀವಿಯೊಂದು ಭೂಮಿಗೆ ಅವತರಿಸಿ ಬಂದಿದೆ ಎಷ್ಟು ವರ್ಷದ ಅದರ ತಪಸ್ಸಿನ ಫಲವೇನು ಗಟ್ಟಿ ಮೆಟ್ಟು ಮಾಡಿದೆಕೊರೋನಾ ಎಂಬ ಹೆಸರಿನಿಂದ ನರ್ತನವ ನಡೆಸಿದೆ ಮಾನವ ಶಕ್ತಿಯನ್ನು ಮೀರಿ ಅಟ್ಟಹಾಸ ಮೆರೆದಿದೆ ಜಗದ ತುಂಬ ತಲ್ಲಣವಗೊಳಿಸಿದೆಅಲ್ಲೋಲ ಕಲ್ಲೋಲ ಮಾಡುತ್ತಾ ದೇಶದಿಂದ ದೇಶಕ್ಕೆ ಹಬ್ಬುತ್ತ ಸಾಗಿದೆ ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೇಕೆ ಯಾಕೆ ನಗುತ್ತಿದೆಒಬ್ಬರನ್ನೊಬ್ಬರು...
ಕವನ
ಗಜರಾಜನ ಆಕ್ರಂದನ...
ಓ ಸ್ವಾರ್ಥಿ ಮನುಜಾ...
ಕಾಡು ಕಡಿದೆ,ಬೆಟ್ಟಗುಡ್ಡಗಳ ದೋಚಿದೆ,
ಮನಬಂದಂತೆ ರಸ್ತೆಗಳ ನಿರ್ಮಿಸಿದೆ,
ಕಾನನದೊಳಗೆ ಮೋಜು-ಮಸ್ತಿಗಾಗಿ,
ವಸತಿ ಗೃಹಗಳ ,ಹೋಟೆಲ್ ಗಳ ಕಟ್ಟಿದೆ....
ನನ್ನ ನಾಡಿಗೆ ಕನ್ನ ಹಾಕಿದೆ,
ನಾನು ತಿನ್ನುವುದೆಲ್ಲವ ದೋಚಿದೆ,
ಹಿಂದೊಮ್ಮೆ ಇಂಪು-ತಂಪಾಗಿದ್ದ ನನ್ನ ಕಾಡು
ಮರುಭೂಮಿಯಾಯ್ತು;ಮಸಣ ಸದೃಶವಾಯ್ತು......
ಗಜರಾಜನಾದ ನಾನು ಭಿಕಾರಿಯಾದೆ,
ನಿರಾಶ್ರಿತ ನಾದೆ,ಆಹಾರ-ನೀರು ಅರಸಿ,
ಕಾಡು ಬಿಟ್ಟು ನಾಡಿಗೆ ಬಂದೆ,
ಮನುಜಾ,ತಿನ್ನುವ ಹಣ್ಣಿಗೆ
ಬಾಂಬಿಟ್ಟು ನನ್ನನ್ನೇ ಸಾಯಿಸಿಬಿಟ್ಟೆಯಲ್ಲೋ?
ಬರೀ ಬೆದರಿಸಿದರೆ ಸಾಕಿತ್ತಲ್ಲೋ..
ನಾವು ಓಡುತ್ತಿದ್ದೆವಲ್ಲೋ!!!
ನಿನ್ನ ಪತ್ನಿ, ಪುತ್ರಿ, ಸಹೋದರಿ
ಗರ್ಭಿಣಿ ಯಾದಾಗ...
ಕವನ
ಹರಿಸಿದರು ಬೇಂದ್ರೆ
ಹರಿಸಿದರು ಬೇಂದ್ರೆ
ಲೇಸನುಂಡು ಲೇಸುಸರಿ
ಲೇಸೇ ಮೈಯ ಪಡೆದು
ಚಿಮ್ಮಲಿ ಈ ಸುಖವೆಂದು
ಚೆನ್ನಸರಸತಿಯ
ನಿತ್ಯ ಸೇವೆ ಇರಲಿ ಒಲವಿರಲಿ
ಪ್ರಾಣಿ ಪಕ್ಷಿಗಳಲಿ
ನಮಿಸು ಗುರುಹಿರಿಯರ
ಪರಿಸರವ ಪ್ರೀತಿಸೆಂದು
ನಡೆನುಡಿಯಲ್ಲಿ ಚೆನ್ನುಡಿಯಲಿ
ಚಿಮ್ಮಿಸುತ ಮೃದುಭಾವ
ಅರಳಿಸುತೆಲ್ಲರ ಮನ
ದಿವ್ಯವಿರಲಿ ಜೀವನಾ
ಎಂದು ಹರಿಸಿದರು ಬೇಂದ್ರೆ
ವಿಶ್ವದ ಕುಲಕೋಟಿಯನು
ಹರಿಸಿದರು ಬೇಂದ್ರೆ
ವಿಶ್ವದ ಚೇತನರನು.
ರಾಧಾ ಶಾಮರಾವ
ಧಾರವಾಡ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



