ಕವನ
ವೈವಿಧ್ಯಮಯ ಪ್ರಕೃತಿ!ಬಗೆ ಬಗೆಯ ಬಣ್ಣದಲಿ ಸಿಂಗಾರಗೊಂಡಂತೆ ಹಕ್ಕಿಗಳ ಜೋಡಿ ಇಲ್ಲಿ
ಯಾವುದೋ ಸಂಭ್ರಮಕೆ ಸಿದ್ದವಾಗಿಹ ತೆರದಿ ಕಾತರತೆ ಕಣ್ಗಳಲ್ಲಿಬಣ್ಣದ ಕೊಡೆಯನ್ನು ಹಿಡಿದು ನಿಂತಿದೆ ಮರ ತಾನೂ ಪುಳಕದಲಿ ಭಾಗಿಯಾಗಿ
ವರ್ಣ ವೈಭವವನ್ನು ಮುಟ್ಟಿ ಮುದಗೊಳ್ಳುವಂತಿದೆ ತಂಗಾಳಿ ಮೆಲ್ಲ ಸಾಗಿಪ್ರಕೃತಿಯಲಿ ಎಷ್ಟೊಂದು ವೈವಿಧ್ಯತೆಯಿಹುದು ಒಳಗಣ್ಣು ತೆರೆದು ನೋಡೆ
ಸವಿದ ಹೃನ್ಮನಗಳಲಿ ಉಲ್ಲಾಸ ಉಕ್ಕುವುದು ಕುಸಿದು ಬಿಗುಮಾನದ ಗೋಡೆ*ವಿಶ್ವನಾಥ ಕುಲಾಲ್ ಮಿತ್ತೂರು*
ಕವನ
ಭೀಕರ ಭೂಕಂಪಏನು ದೈವವಿದು
ನಾವು ಬೆರೆತುಕೊಂಡು
ಹಲವು ದಶಕ
ಬದುಕು ಸಾಗಿಸುತ್ತಿರುವಾಗ
ಇಬ್ಬಾಗಿಸುವ ವಿಧಿಯೊಂದು
ಧಿಡೀರನೇ ಬಂದು ನಿಲ್ಲಬೇಕೆ ?
ಬಾಳ ಪಯಣದಲಿ
ಎಂದೂ ಕಂಡರಿಯದ
ಭೀಕರ ಭೂಕಂಪ !
ಭೂಮಿ ಬಿರಿಯಿತು
ಮೋಡ ನೆಲ ಕಚ್ಚಿತು
ಕೆಂಡದ ಮಳೆ
ಮೌನದಲಿ ಸೂರ್ಯ
ಕಣ್ಣು ಮುಚ್ಚಿದ
ದಿಕ್ಕೆಟ್ಟು ನಿಂತೆವು
ಗೂಡು ತೊರೆದು
ಸಿಹಿ ಸಂಸಾರದ
ಜೋಡು ಹಕ್ಕಿ
ಪುಟ್ಟ ಮರಿ ಅಗಲಿದವು
ಸಾವು ನೋವಿನಲ್ಲಿ
ಅಳಿದುಳಿದವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಶಿವಶಂಕರನಿಗೆ
ಭಾವ ನಮನ
ಬದುಕು ನೂಕುವುದು
ಅವನ ನೆನಪಿನಲಿ
ಅವನ ನೆನಹಿನಲಿ_________________________ಡಾ.ದಾಕ್ಷಾಯಿಣಿ ಮಂಡಿ
ಕವನ
ಅಜರಾಮರ ಮಹರ್ಷಿವರೇಣ್ಯರುಡಕಾಯಿತ ದರೋಡೆಕೋರ ರತ್ನಾಕರರು
ಅಗ್ನಿಶರ್ಮ ನಾಮಧಾರಿಯಿವರು//ಪ//ಕು(ಪ್ರ)ಖ್ಯಾತ ಕಟುಕರ ಸಹವಾಸಪ್ರಿಯರು
ನಾರದರ ಉಪದೇಶ ಪರಿಪಾಲಿಸಿಹರು
ದಿವ್ಯ ರಾಮಮಂತ್ರ ಸತತ ಪಠಿಸಿಹರು
ಉಗ್ರ ತಪವಗೈದು ಮಹಾಜ್ಞಾನಿಯೆನಿಸಿಹರು/1/ಸಂಸ್ಕೃತ ರಾಮಾಯಣ ಮಹಾಕಾವ್ಯ ಸ್ರಜಿಸಿಹರು
ವಿಶ್ವಕವಿ ಮಹಾಕವಿ ಪಟ್ಟಗಿಟ್ಟಿಸಿಹರು
ಪ್ರಪಂಚದ ಪ್ರಪ್ರಥಮ ಆದಿಕವಿಯಾಗಿಹರು
ಮಹರ್ಷಿ ವಾಲ್ಮೀಕಿ ನಾಮಾಂಕಿತರು/2/ಕೆಸರಿನ ಕಮಲದಂತೆ ಕಂಗೊಳಿಸಿಹರು
ನೈತಿಕ ಜೀವನ ಮೌಲ್ಯಗಳ ಧಾರೆಯೆರೆದವರು
ಆದಿ ಮಹಾಕಾವ್ಯದ ನೇತಾರ ಅಜರಾಮರರು
'ಪರಿವರ್ತನೆ ಜಗದ ನಿಯಮ' ತತ್ವಬಿತ್ತಿಬೆಳೆದಿಹರು/3/ಗರ್ಭಿಣಿ ಸೀತಾಮಾತೆಯ ಮಹಾ ಪೋಷಕರು
ಲವ-ಕುಶರ ಸರ್ವವಿದ್ಯಾಗುರುವರ್ಯರು
ರಾಮಾಯಣ ಗಾಯನ...
ಕವನ
ಇದ್ದು ಬಿಡುನೀನು ಸಾಕು
ನೀನೊಬ್ಬಳೇ ಸಾಕು
ಎತ್ತರದ ಯಶ
ವಿಂಧ್ಯ ಪರ್ವತ ಏರಲುನೀನಿದ್ದರೆ ಪಕ್ಕ
ಸ್ವರ್ಗ ಸುಖ
ನೀನಿರದ ವಿರಹ
ನರಕ ಯಾತನೆನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿನಿನ್ನ ಸ್ನೇಹ ಪ್ರೀತಿ
ಒಲವು ಬಾಳ ರೀತಿ
ನಿನ್ನ ನೆನಪಿನ ಕ್ಷಣ
ನನ್ನ ಜೀವದ ಸ್ಪೂರ್ತಿಇದ್ದು ಬಿಡು ಹೀಗೆ
ನನ್ನಲ್ಲಿ ನನ್ನೊಳಗೆ
ಸದ್ದಿಲ್ಲದೆ ಮೌನದಲಿ
ಕವನ ಕಾವ್ಯ ಭಾವವಾಗಿ______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಪ್ರೀತಿ ಮತ್ತು ನೆರಳು
ನನ್ನ ನಿನ್ನ ಸ್ನೇಹ ಭಾವ
ಅರಳಿ ನಗುವ ಸೂಸಲಿ
ಮುನಿಸು ಕರಗಿ ಕನಸು ಮೂಡಿ
ಮನಸು ಮನಸು ಬೆರೆಯಲಿ ನಿನ್ನ ಪ್ರೀತಿ ನೆರಳಲಿ...ಕವಿದ ಇರುಳ ಕೊರಳ ಬಗೆದು
ಬೆಳಕು ಇಣುಕಿ ಚುಕ್ಕಿ ತೆರಳಿ
ಹಕ್ಕಿಗೊರಳು ಹಾಡಲಿ
ಭುವನ ಬೆಳಗಿ ನಲಿಯಲಿ ನಿನ್ನ ಪ್ರೀತಿ ನೆರಳಲಿ.....ಶರಧಿ ಎದೆಗೆ ಒರಗಿ ನಗುವ
ನದಿಯ ಹೃದಯ ಮಿಡಿತ ಮಧುರ..
ತೀರದಲ್ಲಿ ಅಲೆಯ ನಾದ
ಅನವರತ ಮಿಡಿಯಲಿ ನಿನ್ನ ಪ್ರೀತಿ...
ಕವನ
ಮಕ್ಕಳಿಗಾಗಿ ಒಂದು ಕವಿತೆ
ಮಂಗಣ್ಣಗಳು
ಬೆಳಗಿನ ಹೊತ್ತಿಗೆ
ಬೇಗನೆ ಎದ್ದು
ಹಾದಿ ಬೀದಿಯಲಿ
ತಿರುಗುವವುಗಿಡಗಳ ಹತ್ತಿ
ಚಿಗುರೆಲೆ ಕಿತ್ತು
ಖುಷಿಯಲಿ ತಿನ್ನುತ
ಕುಣಿಯುವವು
ಟೊಂಗೆ ಟೊಂಗೆಗೆ
ಹಾರುತ ಜಿಗಿಯುತ
ಹಣ್ಣು ಕಾಯಿಗಳ
ಹರಿಯುವವು
ಕಿಸಿ ಕಿಸಿ ಎಂದು
ಹಲ್ಲನು ಕಿರಿಯುತ
ಮಕ್ಕಳ ಮನವನು
ಸೆಳೆಯುವವು
ಪ್ರತಿ ವಾರವೂ
ತಪ್ಪದೆ ಸಮಯಕೆ
ನಮ್ಮ ಮನೆಗೆ ಅವು
ಬರುತಿಹವು
ನಾನು ತಿನಿಸುವ
ಸೇಂಗಾ ಕಾಳನು
ಖುಷಿಯಲಿ ತಿಂದು
ನಲಿಯುವವು... ಆರ್. ಎಸ್. ಚಾಪಗಾವಿ
ಬೆಳಗಾವಿ 8317404648
ಕವನ
ವಿಜಯದಶಮಿ
ನವರಾತ್ರಿ ಇಂದು ಸಮಾಪ್ತಿಗೊಂಡು
ಬಂದಿತು ವಿಜಯದಶಮಿ
ನವಶಕ್ತಿ ರೂಪಿಣಿ ನವದುರ್ಗೆಯರ
ನಮಿಸುವ ಎಲ್ಲರು ಬನ್ನಿಬನ್ನಿ ಮಹಾಕಾಳಿಯ ಭಕ್ತಿಯಿಂದಲಿ
ಪೂಜಿಸಿ ಬನ್ನಿಯ ಮುಡಿವ
ಹೊನ್ನ ಸಮಾನವು ಈ ದಿನ ಬನ್ನಿಯು
ಹಂಚುತ ಹರುಷವ ಪಡೆವದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ
ಎನ್ನುವ ಮಾತು ಸತ್ಯ
ಮಿತ್ಯದ ಮೇಲೆ ಸತ್ಯದ ಗೆಲುವಿನ
ಸಂಕೇತವೇ ಈ ಹಬ್ಬನಾಡಿನ ಸಮಸ್ತ ಬಾಂಧವರಿಗೆಲ್ಲ
ವಿಜಯದಶಮಿ ಶುಭಾಶಯ
ಬೇಡುವ ಚಾಮುಂಡೇಶ್ವರಿ ತಾಯಿಗೆ
ಶಾಂತಿ ಸುಭೀಷ್ಟತೆ ಅಭಯ.ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು
ಕವನ
ಕಪ್ಪತ್ತ ಸಿರಿ
ಹಚ್ಚ ಹಸುರಿನ ಗಿರಿಗಳ ಸಾಲು ಮಧ್ಯೆ ಅಂಕು ಡೊಂಕಾಗಿ ಸಾಗುವ ಕವಲುದಾರಿಗಳ ಮಧ್ಯೆ ಹೋಗುವ
ಇದುವೇ ಕಪ್ಪತ ಗಿರಿಯ ಸಿರಿ....ಹಸಿರಿನ ಬೆಟ್ಟ ಸುತ್ತುವರಿದು ಹೋಗುವ ಬೆಳ್ಳಿ ಮೋಡಗಳು ಬೆಟ್ಟಗಳ ಸಾಲಿನ ಮೇಲೆ ಬೆಳ್ಳಿಯನ್ನೇ ನಾಚಿಸು ವಂತ ಮಂಜಿನ ಹನಿ
ಇದುವೇ ಕಪ್ಪತ್ತ ಗಿರಿಯ...
ಕವನ
ಮತ್ತೆ ಬರುವ ಭಗತ್ ಸಿಂಗ್ಭಗತ್ ಸಿಂಗ್ ಎಂದರೆ
ಅದು ಬರಿ ವ್ಯಕ್ತಿಯ ಹೆಸರಲ್ಲ
ಇತಿಹಾಸದ ಪುಟಗಳಲ್ಲಿನ
ಹಸಿ ಹಸಿ ರಕ್ತದಕ್ಷರಭಗತ್ ಸಿಂಗ್ ಎಂದರೆ
ಶೋಷಣೆಯ ವಿರುದ್ಧ
ಸಿಡಿದ ಬೆಂಕಿಯ ಚೆಂಡು
ಸಮತೆಯ ಕನಸುಸತ್ಯ ಪ್ರೇಮ ಶಾಂತಿ
ನಿತ್ಯ ಅವನ ಜಪತಪ
ಶಸ್ತ್ರ ನಿಶಸ್ತ್ರ ಹೋರಾಟ
ಕೊನೆ ಹೇಳಿದ ಗುಲಾಮಗಿರಿಗೆಭಗತ್ ಸಿಂಗ್ ಎಂದರೆ.
ಶತಮಾನಗಳ ಆಕ್ರೋಶ
ವಂಚನೆಯ ಚಕ್ರವ್ಯೂಹ ಮೆಟ್ಟಿ
ಭವಿಷ್ಯದ ಬದುಕು ಕಟ್ಟಿಕೊಟ್ಟವಭಗತ ಸಿಂಗ ಎಂದರೆ
ಕರಾಳ ರಾತ್ರಿಯ ಕಳೆದು
ಹುಣ್ಣಿಮೆಯ ಬೆಳಕು ತೋರುವ
ಸಮರಸದ...
ಕವನ
ನಗಬೇಕುನಗಬೇಕು ಅಳುವ ಮರೆತು
ಮುಂದೆ ಕಾದಿದೆ ಜೀವನ
ಕಷ್ಟ ನಷ್ಟ ಸಾವು ನೋವು
ದೈವ ವಿಧಿಸಿದ ಬಂಧನಅತ್ತು ಅತ್ತು ಬಿಕ್ಕಬೇಡ
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನನಕ್ಕುಬಿಡು ದುಃಖ ಮರೆತು
ಸೊಗಸು ಸಂತಸ ಸವಿ ಮನ
ದುಗುಡ ದೂರವಾಗಿ ತೊಲಗಲಿ
ಶಾಂತಿ ಪ್ರೀತಿ ಪಾವನಕಿಟಕಿಯಾಚೆ ರವಿಯ ಬೆಳಕು
ಸಂಜೆ ಚಂದ್ರನ ಸ್ಪಂದನ
ನಗೆಯು ಮುಖದಿ ಮಾಸದಿರಲಿ
ಬಾಳು ನಿತ್ಯ ನೂತನ_________________________
ಡಾ.ಶಶಿಕಾಂತ ಪಟ್ಟಣ, ರಾಮದುರ್ಗ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



