ಸುದ್ದಿಗಳು
ಉಡಿಕೇರಿಯಲ್ಲಿ ಮಡಿವಾಳ ಮಾಚಿ ದೇವರ ಜಯಂತಿ ಆಚರಣೆ
ಬೈಲಹೊಂಗಲ - ತಾಲೂಕಿನ ಉಡಿಕೇರಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಮಡಿವಾಳ ಶ್ರೀ ಮಾಚಿದೇವರ ಜಯಂತಿ ಆಚರಿಸಲಾಯಿತು. ಮಾಚಿ ದೇವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು.ಮಹಾದೇವಪ್ಪ ಮಡಿವಾಳರ ಅವರು ಮಾಚಿದೇವರ ಜೀವನ ಚರಿತ್ರೆಯ ವಿವಿಧ ಘಟನೆಗಳನ್ನು ಜನರಿಗೆ ತಿಳಿಸಿ, ಸಮಾಜದಲ್ಲಿ ಎಲ್ಲ ಜಾತಿ ಮತ ಪಂಥದವರು ಸಹಬಾಳ್ವೆಯಿಂದ ಬದುಕು ಸಾಗಿಸಲು ಮಾಚಿದೇವರ ನುಡಿ ವಚನಗಳು...
ಸುದ್ದಿಗಳು
ದನಗಳನ್ನು ಬೇಟೆಯಾಡಲು ಬೆನ್ನಟ್ಟಿದ ಹುಲಿ ಅಥವಾ ಚಿರತೆಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದ ತಕ್ಷಣ ಬೇಟೆಯಿಂದಲೇ ಹಿಂಜರಿಯಬಹುದು !ಈ ಚಿತ್ರ ನೋಡಿ. ಪಶುವಿನ ಹಿಂಬದಿಯಲ್ಲಿ ಎರಡು ಕಣ್ಣುಗಳು !
ಬೊಟ್ಸ್ ವಾನಾದ ದನ ಕಾಯುವವರು ತಮ್ಮ ದನಗಳನ್ನು ಹುಲಿ ಅಥವಾ ಚಿರತೆಯಿಂದ ಬೇಟೆಯಾಗುವುದನ್ನು ತಪ್ಪಿಸಲು ದನದ ಹಿಂದಿಯಲ್ಲಿ ಎರಡು ದೊಡ್ಡ ಕಣ್ಣುಗಳ ಚಿತ್ರಗಳನ್ನು ಬರೆಯುತ್ತಾರೆ. ನಾಲ್ಕು...
ಸುದ್ದಿಗಳು
ಬೆಳಗಾವಿಯಿಂದ ರೈಲ್ವೇ ಸೌಲಭ್ಯಕ್ಕಾಗಿ ಈರಣ್ಣ ಕಡಾಡಿಯವರಿಂದ ಮನವಿ
ಮೂಡಲಗಿ: ಕುಂದಾನಗರಿ ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರು ಈ ಮೂರು ನಗರಗಳಿಗೆ ರೈಲು ಓಡಾಟ ಶೀಘ್ರ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ ಗೊಯಲ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.ಮಂಗಳವಾರ (ಫೆ.2) ದಂದು ಕೇಂದ್ರ...
ಸುದ್ದಿಗಳು
ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಅದರ ಜೊತೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಗಿದೆ.ಸ್ಯಾಂಡಲ್‌ವುಡ್ ಬಾದ್‌ಶಾ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾದಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಮಾಡಲಾಗಿದೆ. ಸುದೀಪ್...
ಸುದ್ದಿಗಳು
ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ‘ವಿವೇಕಶ್ರೀ’ ಪ್ರಶಸ್ತಿ ಪ್ರದಾನ
ಬೆಂಗಳೂರಿನ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವೇಕ ಚೇತನ ಮಾಸಪತ್ರಿಕೆ ಸಹಯೋಗದಲ್ಲಿ ಗೋವಿಂದರಾಜನಗರದ ಯೋಗಾನಂದ ಪ್ರಾರ್ಥನಾ ಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ , ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಪ್ರತಿಭೋತ್ಸವ ಸಮಾರಂಭ ಆಯೋಜಿಸಿತ್ತು.ಸ್ಥಳೀಯ ಮುಖಂಡ , ಯುವಜನ ಸೇವಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಎನ್.ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತ್ರಿವಿಧ ದಾಸೋಹಿ ಸಿದ್ಧಗಂಗೆಯ...
ಸುದ್ದಿಗಳು
ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ – ಸತೀಶ ಜಾರಕಿಹೊಳಿ
ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ ಎಂದ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ನಗರದ ತಮ್ಮ ನಿವಾಸದಲ್ಲಿ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ಈ ಹಿಂದೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ...
ಸುದ್ದಿಗಳು
‘ಪ್ರಬುದ್ಧ ಭಾರತ’ ಮಾಸಿಕದ 125ನೇ ವಾರ್ಷಿಕೋತ್ಸವದಲ್ಲಿ ಮೋದಿ ಭಾಷಣ
ಇದೇ ಜ. 31 ರಂದು1896 ರಲ್ಲಿ ಸ್ವಾಮಿ ವಿವೇಕಾನಂದ ಅವರು ಪ್ರಾರಂಭಿಸಿದ ರಾಮಕೃಷ್ಣ ಮಿಷನ್ ನ ಮಾಸ ಪತ್ರಿಕೆ 'ಪ್ರಬುದ್ಧ ಭಾರತ' ದ 125 ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.ಈ ಕಾರ್ಯಕ್ರಮವನ್ನು ಮಾಯಾವತಿಯ ಅದ್ವೈತ ಆಶ್ರಮ ಆಯೋಜಿಸಿದೆ.
'ಪ್ರಬುದ್ಧ ಭಾರತ’ ಮಾಸ ಪತ್ರಿಕೆ
ಭಾರತದ ಪ್ರಾಚೀನ ಅಧ್ಯಾತ್ಮದ ಸಂದೇಶವನ್ನು ಪ್ರಚಾರ ಮಾಡಲು ‘ಪ್ರಬುದ್ಧ ಭಾರತ’ ಪತ್ರಿಕೆ ಒಂದು ಪ್ರಮುಖ ಮಾಧ್ಯಮವಾಗಿದೆ. ಇದರ ಪ್ರಕಟಣೆಯನ್ನು ಚೆನ್ನೈನಿಂದ (ಹಿಂದಿನ ಮದ್ರಾಸ್) ಪ್ರಾರಂಭಿಸಲಾಯಿತು. ಅಲ್ಲಿ ಎರಡು ವರ್ಷಗಳವರೆಗೆ ಪತ್ರಿಕೆ ಪ್ರಕಟವಾಯಿತು. ನಂತರ ಅದನ್ನು ಅಲ್ಮೋರಾದಿಂದ ಪ್ರಕಟಿಸಲಾಯಿತು. ನಂತರ, ಏಪ್ರಿಲ್ 1899 ರಲ್ಲಿ, ಪತ್ರಿಕೆಯ ಪ್ರಕಟಣಾ ಸ್ಥಳವನ್ನು ಅದ್ವೈತ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅಲ್ಲಿಂದಲೇ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿದೆ.ಹಲವಾರು ಶ್ರೇಷ್ಠ ವ್ಯಕ್ತಿಗಳು ಭಾರತೀಯ ಸಂಸ್ಕೃತಿ, ಆಧ್ಯಾತ್ಮ, ತತ್ವಶಾಸ್ತ್ರ, ಇತಿಹಾಸ, ಮನೋವಿಜ್ಞಾನ, ಕಲೆ ಮತ್ತು ಇತರ ಸಾಮಾಜಿಕ ವಿಷಯಗಳ ಕುರಿತು ‘ಪ್ರಬುದ್ಧ ಭಾರತ’ ದಲ್ಲಿ ಬರೆದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಸೋದರಿ ನಿವೇದಿತಾ, ಶ್ರೀ ಅರಬಿಂದೋ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಮುಂತಾದವರು ಪತ್ರಿಕೆಗೆ ಬರೆದಿದ್ದಾರೆ.ಅದ್ವೈತ ಆಶ್ರಮವು ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ‘ಪ್ರಬುದ್ಧ ಭಾರತ’ ದ ಹಳೆಯ ಸಂಚಿಕೆಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಆಧಾರ : ಪಿಐಬಿ
ಸುದ್ದಿಗಳು
ಬೀದರ - ಕೃಷಿ ಕಾಯ್ದೆ ವಿರೋಧಿಸಿ ಹಾಗೂ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಗಡಿ ಜಿಲ್ಲೆ ಬೀದರ್ ನಲ್ಲೂ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.ಭಾಲ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ, ಗಾಂಧಿ ಪ್ರತಿಮೆ ಸೇರಿದಂತೆ ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಆರಂಭಿಸಿ ಬೀದರ ಜಿಲ್ಲಾಧಿಕಾರಿ ಕಚೇರಿಯವರೆಗೆ ಟ್ರಾಕ್ಟರ್ ರ್ಯಾಲಿ ಹಾಗೂ ಪಾದಯಾತ್ರೆಯ ಮೂಲಕ...
ಸುದ್ದಿಗಳು
ಬೀದರ - ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾನ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಅರೆ ಸೇನಾಪಡೆಯವರಿಂದ ಆಕರ್ಷಕ ಪಥಸಂವಲನ ನಡೆಯಿತು.ಶಾಸಕರಾದ ಬಂಡೆಪ್ಪ ಕಾಶೆಂಪೂರ,ರಹೀಂಖಾನ್, ಅರವಿಂದ ಅರಳಿ, ಸಂಸದ ಭಗವಂತ ಖೂಬಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸುದ್ದಿಗಳು
ಹಳೆಯ ನೂರು ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕು ಸ್ಪಷ್ಟೀಕರಣ ನೀಡಿದ್ದು ಈ ಬಗ್ಗೆ ಚಾಲ್ತಿಯಲ್ಲಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ.೨೦೨೧ ರ ಮಾರ್ಚ್ ಒಳಗೆ ೫,೧೦ ಹಾಗೂ ೧೦೦ ರ ನೋಟುಗಳನ್ನು ಆರ್ ಬಿ ಐ ರದ್ದುಗೊಳಸುತ್ತದೆ ಎಂಬುದಾಗಿ ವದಂತಿಗಳು ಹಬ್ಬಿದ್ದವು. ಇದರಿಂದ ದೇಶಾದ್ಯಂತ ಸಂಚಲನ ಉಂಟಾಗಿತ್ತು. ಆದರೆ ಆರ್ ಬಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



