- Advertisement -
ಬೀದರ: ಮಹಾರಾಷ್ಟ್ರದ ದಳೇಗಾಂವ ನಿಂದ ಹುಲಸುರ ಮಾರ್ಗವಾಗಿ ಜಿಹೀರಾಬಾದ ಕಡೆಗೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ 18 ಜಾನುವಾರುಗಳನ್ನು ಬೀದರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಗಡಿಯ ಹುಲಸೂರ ಚೆಕ್ ಪೋಸ್ಟ್ ನಲ್ಲಿ ಕಳೆದ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಟ್ರಕ್ ವೊಂದನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು.
- Advertisement -
ಐಸರ್ ವಾಹನ MH 10 AW 7385 ಸಂಖ್ಯೆಯುಳ್ಳ ವಾಹನದಲ್ಲಿ ಈ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಲಸುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ