Homeಸುದ್ದಿಗಳುಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಿ : ಸಿ ಪಿ ಐ ಶ್ರೀಶೈಲ ಬ್ಯಾಕೂಡ

ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಿ : ಸಿ ಪಿ ಐ ಶ್ರೀಶೈಲ ಬ್ಯಾಕೂಡ

ಮೂಡಲಗಿ : ಪಟ್ಟಣದಲ್ಲಿ ಮಾ : ೧೩ ರಂದು ಕಾಮದಹನ, ಹೋಳಿ ಹಬ್ಬ ೧೪ ರಂದು ಆಚರಿಸಲಾಗುವುದು. ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕೆಂದು ಮೂಡಲಗಿ ಸಿ ಪಿ ಐ ಶ್ರೀಶೈಲ ಬ್ಯಾಕೂಡ ಕರೆ ನೀಡಿದರು.

ಅವರು ಮಂಗಳವಾರ ರಂದು ನಗರದ ಪೋಲಿಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಪೂರ್ವ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಳಿ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾವ೯ಜನಿಕರ ಸಹಕಾರ ಅಗತ್ಯವಾಗಿದೆ .ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬೇಡಿ ಈ ಸಮಯದಲ್ಲಿ ಶಾಲಾ ಮಕ್ಕಳ ಪರೀಕ್ಷೆ ಇರುವದರಿಂದ ಮಕ್ಕಳಿಗೆ, ಸಾವ೯ಜನಿಕರಿಗೆ, ಮಹಿಳೆಯರಿಗೆ , ವಾಹನ ಸವಾರರ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಚಮ೯ಕ್ಕೆ ಹಾನಿಕಾರಕವಲ್ಲದ ನೈಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು. ಯಾರಿಗೂ ತೊಂದರೆಯಾಗದಂತೆ ಬಣ್ಣವಾಡಬೇಕು ಎಂದು ಸಿಪಿಐ ಹೇಳಿದರು.

ಶಾಂತಿ ಪಾಲನಾ ಸಭೆಯಲ್ಲಿ ಪಿ ಎಸ್ ಐ ರಾಜು ಪೂಜಾರಿ, ದಲಿತ ಮುಖಂಡ ಶಾಬಪ್ಪ ಸಣ್ಣಕ್ಕಿ , ವಸಂತ ಕ್ಯಾತೆನ್ನವರ , ಬಿಟಿಟಿ ಕಮಿಟಿಯ ಮಲೀಕ ಕಳ್ಳಿಮನಿ, ಅಜೀಜ್ ಡಾಂಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಎಲ್ ಬಿ ಗೋಡೇರ, ಎಸ್ ಆರ್ ಚೌಗಲಾ, ಪಿ ವಾಯ್ ಲೋಕುರೆ, ಎ ಜಿ ಚಿಕ್ಕೋಡಿ, ಎಮ್ ವಾಯ್ ನದಾಫ ಮತ್ತಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group