ಮೂಡಲಗಿ – ದಿ. ೨೧ ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನ ಆಚರಣೆ ಯಾರ ವೈಯಕ್ತಿಕ ಜವಾಬ್ದಾರಿಯಾಗದೇ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಲ್ಲರೂ ಯೋಗದಿನವನ್ನು ತಮ್ಮದೆಂಬಂತೆ ಅಭಿಮಾನದಿಂದ ಆಚರಿಸಬೇಕು ಎಂದು ಕಡಾಡಿ ಹೇಳಿದರು
ದಿ. ೨೧ ರಂದು ನಡೆಯಲಿರುವ ೧೧ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೂಡಲಗಿ ತಾಲೂಕಾ ಮಟ್ಟದ ಯೋಗ ದಿನವನ್ನು ಆಯುಷ್ ಇಲಾಖೆಯ ಸಹಕಾರದಲ್ಲಿ ಆಚರಿಸುವ ಸಲುವಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಹಶಿಲ್ದಾರರ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.
ಸಭೆಯಲ್ಲಿ ಮೂಡಲಗಿ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಗಳ ಅಧಿಕಾರಿಗಳು, ಭಾಗವಹಿಸಿದ್ದರು
ಸ್ಥಳೀಯ ಸಂಘ ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಕಾರ್ಯಕರ್ತರು ಸೇರಿ ೨೦ ನೇ ತಾರೀಖಿನ ದಿನ ಯೋಗ ಜಾತ್ರಾ ನಡೆಸಿ ಜನರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಬೇಕು. ಇದಕ್ಕೆ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಬೇಕು. ದಿ. ೨೧ ರಂದು ಬೆಳಿಗ್ಗೆ ೬.೩೦ ಕ್ಕೆ ಆರಂಭವಾಗಿ ೮.೦೦ ಗಂಟೆಗೆ ಮುಕ್ತಾಯವಾಗುವ ಯೋಗಾಸನ ದಿನದಂದು ಯೋಗ ಮಾಡಲು ಆಗಮಿಸುವವರಿಗೆ ಅಕ್ಷರ ದಾಸೋಹ ಹಾಗೂ ಆಹಾರ ಇಲಾಖೆಯವರು ಲಘು ಉಪಾಹಾರ ವ್ಯವಸ್ಥೆ ಮಾಡಬೇಕು , ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯವರು ಕುಡಿಯುವ ನೀರಿನ ವ್ಯವಸ್ಥೆ, ಸಂಚಾರಿ ಶೌಚಾಲಯ ವ್ಯವಸ್ಥೆ ಕೈಗೊಳ್ಳಬೇಕು, ಪ್ರಥಮ ಚಿಕಿತ್ಸಾ ಸೌಲಭ್ಯದೊಂದಿಗೆ ಅಂಬುಲೆನ್ಸ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ, ವಿದ್ಯುತ್ ವ್ಯವಸ್ಥೆಯನ್ನು ಕೆಇಬಿ ಯವರು ವಹಿಸಿಕೊಳ್ಳಬೇಕು ಎಂದು ವಿವಿಧ ಹೊಣೆಗಾರಿಕೆಗಳನ್ನು ನೀಡಿದ ಕಡಾಡಿಯವರು ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು. ಯೋಗಾಸನಕ್ಕೆ ಬರುವವರು ಸರಳ ಉಡುಪು ಧರಿಸಿ ಅವರವರ ಚಾಪೆಗಳನ್ನು ಅವರವರೇ ತೆಗೆದುಕೊಂಡು ಬರಬೇಕು ಎಂದರು
ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ಜನಿಕರು ಸಂಘ ಸಂಸ್ಥೆಗಳಿಂದ ಯೋಗ ದಿನ ಯಶಸ್ಸಿಗೆ ಸಲಹೆಗಳನ್ನು ಆಲಿಸಿದರು.
ವೇದಿಕೆಯ ಮೇಲೆ ತಹಶೀಲ್ದಾರ ಶಿವಾನಂದ ಬಬಲಿ, ಸಿಡಿಪಿಒ ಎಫ್ ಜಿ ಚಿನ್ನನ್ನವರ, ಬಿಇಓ ಅಜಿತ ಮನ್ನಿಕೇರಿ, ಆಯುಷ್ ಇಲಾಖೆಯ ಡಾ. ಶ್ರೀಕಾಂತ ಸುಣಧೋಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಸಾರುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು
ತಾಲೂಕನ ಎಲ್ಲ ಇಲಾಖೆಗಳ ಮುಖ್ಯಸ್ಥರು, ಪಂಚಾಯಿತಿಗಳ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ವಂದಿಸಿದರು.