ಸಿಂದಗಿ: ಭೂಮಿ ತಾಯಿಯ ಮಕ್ಕಳು ರೈತರ ಹಬ್ಬವಾದ ಕಾರಹುಣ್ಣಿಮೆಯನ್ನು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಕಳೆದ 4-5 ದಿನಗಳಿಂದ ಕಾರಹುಣ್ಣಿವೆಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ರೈತಾಪಿ ಜನ ಇಂದು ಬೆಳಿಗ್ಗೆ ಎತ್ತುಗಳಿಗೆ ನಶೆ ಎರಿಸುವ ಗುಟುಕು ಹಾಕಿ ಎತ್ತುಗಳನ್ನು, ಹಸು ಕರುಗಳನ್ನು ಭೀಮಾನದಿಗೆ ಕರೆದೊಯ್ದು ಸ್ನಾನ ಮಾಡಿಸಿ ಸಂಭ್ರಮಿಸುತ್ತಾ ಓಡಿಸಿಕೊಂಡು ಬರುತ್ತಿರುವದು ಸಾಮಾನ್ಯವಾಗಿತ್ತು ನಂತರ ಅವುಗಳಿಗೆ ಹೊಸ ಹಗ್ಗದಿಂದ ತಯಾರಿಸಿದ ಮಗಡ, ಕಾಂಡ, ಹಣೆಕಟ್ಟು, ಕೊಂಬಿಗೆ ಶೃಂಗಾರದ ವಸ್ತುಗಳನ್ನು ತೊಡಿಸಿ ಶೃಂಗಾರಗೊಳಿಸುತ್ತಾ ಅವುಗಳ ಮೈಗೆಲ್ಲ ಬಣ್ಣ ಹಚ್ಚಿ ಸಂಜೆ ಮೆರವಣಿಗೆಗೆ ಅಣಿಗೊಳಿಸಿದ್ದರು ಸಾಯಂಕಾಲ ಎಲ್ಲ ಎತ್ತುಗಳನ್ನು ಬಾಜಿಬಾರಿಸಿ, ಪಟಾಕಿ ಸಿಡಿಸಿ ಗ್ರಾಮದೆಲ್ಲೆಡೆ ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಎತ್ತಿನ ಬಂಡಿಗಳ ಓಡಾಟ ಕಾರಹುಣ್ಣಿಮೆ ಹಬ್ಬಕ್ಕೆ ಮೆರಗು ತಂದಿತು. ಕೊನೆಗೆ ಸಂಜೆ ವೇಳೆ ಎತ್ತು ಕರಿ ಹರಿಯುವ ಮೂಲಕ ಕಾರಹುಣಿಮೆ ಸಂಭ್ರಮಕ್ಕೆ ತೆರೆಬಿತ್ತು.