ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಆಚರಣೆ

Must Read

‘ವಕೀಲರಾಗಿ ಮಹಾತ್ಮ ಗಾಂಧೀಜಿ ’ ವಿಶೇಷ ಉಪನ್ಯಾಸ ಮತ್ತು ಡಾ.ಹೆಚ್.ಎಸ್.ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ ಸಾಂದರ್ಭಿಕ ಕೃತಿ ಬಿಡುಗಡೆ

ಗಾಂಧೀಜಿಯ ಜೀವನ ಗಂಗೆಯಲ್ಲಿ ಮಿಂದು ಮೆರುಗು ಪಡೆದ  ಪರಿವರ್ತಿತರಾಗಿ ಸಮಾಜದೊಂದಿಗೆ ಗುರುತಿಸಿಕೊಂಡು ಶಿಷ್ಟರಾಗಿ ರಚನಾತ್ಮಕವಾಗಿ ಬಾಳುತ್ತಿರುವವರನ್ನು  ಕುರಿತಾದ ಸಾಹಿತ್ಯ ರಚನೆಯಾಗಿ ಗಾಂಧಿಯೋತ್ತರ ಸಾಹಿತ್ಯ ಎಂಬಂತೆ ಹೊರಬರಬೇಕಾಗಿದೆ ಎಂದು ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೆ. ಎಸ್. ಸಮೀರಸಿಂಹ ಹೇಳಿದರು.

ಅವರು ಡಾ.ಹೆಚ್.ಎಸ್.ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ)  ಸಾಂದರ್ಭಿಕ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಆರ್.ವಿ. ರಸ್ತೆಯ ವಿಜಯ ಕಾಲೇಜು  ಮತ್ತು ಕರ್ನಾಟಕ ಸರ್ವೋದಯ ಮಂಡಲದ  ಸಂಯುಕ್ತಾಶ್ರಯದಲ್ಲಿ  ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಅಂಗವಾಗಿ ವಿಶೇಷ ಉಪನ್ಯಾಸವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಲಾಗಿತ್ತು.

ತುಮಕೂರಿನ ಹಿರಿಯ ಗಾಂಧಿ ಚಿಂತಕ  ಲ. ನರಸಿಂಹಯ್ಯ ತೊಂಡೋಟಿ ‘ವಕೀಲರಾಗಿ ಮಹಾತ್ಮ ಗಾಂಧೀಜಿ’ ಕುರಿತು ಉಪನ್ಯಾಸ ನೀಡಿ,  ಗಾಂಧೀ ಅದೆಷ್ಟು ಪ್ರಸ್ತುತ ಮತ್ತು ಶಕ್ತಿಶಾಲಿ ಎಂದರೆ ನಮ್ಮ ಅನೇಕ ವೈಯುಕ್ತಿಕ, ಸಾಮಾಜಿಕ ವ್ಯಸನಗಳಿಗೆ ಗಾಂಧೀ ಉತ್ತರ ನೀಡಬಲ್ಲ ದೊಡ್ಡ ಶಕ್ತಿ ಎಂದು ತಿಳಿಸಿದರು.

ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಉತ್ತಮ ಪುಸ್ತಕವನ್ನು ಓದಿ ಅದರ ಪ್ರಭಾವಲಯಕ್ಕೆ ಒಳಗಾಗಿ, ಇನ್ನಷ್ಟು ಓದಿ ಹೆಚ್ಚು ಪ್ರಭಾವಿತರಾದವರ ಉದಾಹರಣೆಗಳಿವೆ.

ಆದರೆ ವ್ಯಕ್ತಿಯ ಜೀವನ ಚರಿತ್ರೆ ಅಂದರೆ, ಆತ್ಮಕಥೆಯನ್ನು ಓದಿದ ಮಾತ್ರದಿಂದ  ಪ್ರಭಾವಿತವಾದದ್ದು ಮಾತ್ರವಲ್ಲ ಪರಿವರ್ತಿತವಾದದ್ದು ಬಹಳ ಅಪರೂಪ. ಅದರಲ್ಲೂ ವಿಚಾರಣಾಧೀನ ಖೈದಿಯಾಗಿ ಶಿಕ್ಷೆಗೂ ಪಾತ್ರನಾದ 25-30ರ ತರುಣ ಅಪರಾಧಿ ಪರಿವರ್ತಿತನಾಗಿ ಸಭ್ಯ ಜೀವನ ಮಾರ್ಗವನ್ನು ಕಂಡುಕೊಂಡು ಬಾಳುತ್ತಿದ್ದಾನೆ ಎಂಬುದು ನಂಬಲೇಬೇಕಾದ ಸತ್ಯ- ಪರಮ ಸತ್ಯ. ಸ್ಥಿತ್ಯಂತರ ಗತಿಯ ಸಮಾಜದಲ್ಲಿ ಒಂದು ಜೀವಂತ ಸಾಕ್ಷಿ ! ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.  , ಪ್ರಾಂಶುಪಾಲೆ  ಪ್ರೊ. ಕೆ.ಎಸ್. ಶೈಲಜಾ ಅಧ್ಯಕ್ಷತೆ ವಹಿಸಿದ್ದರು,  ರಾ.ಸೇ.ಯೋ ಅಧಿಕಾರಿ ಪ್ರೊ.ಎಸ್.ಎ. ಶ್ರೀಕಂಠ , ಉಪ ಪ್ರಾಂಶುಪಾಲ ಡಾ.ಡಿ.ರಾಧಾಕೃಷ್ಣ , ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಡಾ. ಯ.ಚಿ. ದೊಡ್ಡಯ್ಯ,  ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group