ಡಿ.೨೬ಮತ್ತು ೨೭ ರಂದು ಮುಸಗುಪ್ಪಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ

Must Read

ಮೂಡಲಗಿ: ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಡಿ.೨೬ ಮತ್ತು ೨೭ರಂದು ಎರಡು ದಿನಗಳ ಕಾಲ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮುಸಗುಪ್ಪಿ ಗ್ರಾಮದ ಗುರು-ಹಿರಿಯರು, ಎಸ್.ಡಿ.ಎಂ.ಸಿ ಪಧಾಧಿಕಾರಿಗಳು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಾಳಗೌಡ ಪಾಟೀಲ ಹೇಳಿದರು.

ಅವರು ಸೋಮವಾರದಂದು ಮುಸಗುಪ್ಪಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಬುಜನ್ನವರ ಮಾತನಾಡಿ, ಡಿ.೨೬ರಂದು ಮುಂ.೧೦-೩೦ಕ್ಕೆ ನಡೆಯುವ ಶತಮಾನೋತ್ಸವ ಮತ್ತು ನವೀಕೃತ ಶಾಲಾ ಕಟ್ಟಡ, ವಿಜ್ಞಾನ ಪ್ರಯೋಗಾಲಯ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಮಾಹಾಸ್ವಾಮಿಗಳು, ಸುಣಧೋಳಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಬೈಲಹೊಂಗಲದ ಶ್ರೀ ನೀಲಕಂಠ ಮಹಾಸ್ವಾಮಿಗಳು ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನವೀಕೃತ ಶಾಲಾ ಕಟ್ಟಡ ಉದ್ಘಾಟಿಸುವರು, ವಿಜ್ಞಾನ ಪ್ರಯೋಗಾಲಯವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು, ಗ್ರಾ.ಪಂ ಅಧ್ಯಕ್ಷ ಬಸವರಾಜ ಬುಜನ್ನವರ ವಹಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಯುವಧುರಿಣ ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭಿಮಾಶಂಕರ ಗುಳೇದ, ಉಪವಿಭಾಗಾಧಿಕಾರಿ ಪ್ರವೀಣ ಜೈನ, ಶಿಕ್ಷಣ ಇಲಾಖೆಯ ಉಪ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಸತ್ಕಾರ ಮೂರ್ತಿ ಕಲ್ಲಪ್ಪ ಮಳಲಿ, ಮತ್ತು ವಿಶೇಷ ಅತಿಥಿಗಳಾಗಿ ಡಾ.ವಿಎಸ್.ಮಾಳಿ, ಅತಿಥಿಗಳಾಗಿ ಚಂದ್ರವ್ವಾ ಗಂಗನ್ನವರ, ಸೀತಾರಾಮು ಆರ್.ಎಸ್., ಶ್ರೀಶೈಲ್ ಗುಡಮೆ, ಎಫ್.ಜಿ.ಚಿನ್ನವರ, ಪ್ರಕಾಶ ಹಿರೇಮಠ, ರೇವತಿ ಮಠದ, ಸಂಜೀವ ಹುಲ್ಲೋಳಿ, ಆರ್.ಎನ್.ಗುಜನಟ್ಟಿ ಮತ್ತಿತರು ಭಾಗವಹಿಸುವರು ಎಂದರು.

ಡಿ.೨೭ ರಂದು ಮುಂ. ೧೦=೩೦ಕ್ಕೆ ಜರುಗುವ ರಂಗಮಂದಿರ ಮತ್ತು ಕ್ರೀಡಾಕೊಠಡಿ ಉದ್ಘಾಟನೆ ಮತ್ತು ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನ್ನಿಧವನ್ನು ಗೋಕಾಕದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಂದಿಗುಂದದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು, ಸಂಸದ ಜಗದೀಶ ಶೆಟ್ಟರ ಕಾರ್ಯಕ್ರಮ ಉದ್ಘಾಟಿಸುವರು, ಸಂಸದ ಈರಣ್ಣ ಕಡಾಡಿ ರಂಗಮಂದಿರ ಉದ್ಘಾಟಿಸುವರು, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಕ್ರೀಡಾ ಕೊಠಡಿ ಉದ್ಘಾಟಿಸುವರು, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಳಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು, ವಿಶೇಷ ಅತಿಥಿಗಳಾಗಿ ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರಾ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಜಿ.ಪಂ ಸಿ.ಇಒ ರಾಹುಲ್ ಶಿಂಧೆ, ಶಿಕ್ಷಣ ಇಲಾಖೆಯ ಜಂಟಿ ನರ್ದೇಶಕ ಜಗದೀಶಬಿ.ಎಸ್., ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಗಜಾನನ ಮನ್ನಿಕೇರಿ, ಅಜೀತ ಮನ್ನಿಕೇರಿ, ಗೋಪಾಲ ಆಚಾರ್ಯ ಹಂಜಕ್ಕಿ, ವಿಠ್ಠಲ ಭುಜನ್ನವರ, ಅಶೋಕ ಮಲಬನ್ನವರ, ರೇಣುಕಾ ಆನಿ,ಜಯಶ್ರೀ ಕಂಠಿ, ಎಸ್.ವಾಯ್.ದ್ಯಾಗಾನಟ್ಟಿ, ಶಂಕರ ಗಾಡವಿ ಮತ್ತಿತರರು ಭಾಗವಹಿಸುವರು ಎಂದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಯದಲ್ಲಿ ಪ್ರಕಾಶ ಗೊಂಧಿ, ನಿಂಗಪ್ಪ ಯಕ್ಕುಂಡಿ, ಸಂಜು ಹೊಸಕೋಟಿ, ಬಸವರಾಜ ಗಾಡವಿ, ಬಾಳಪ್ಪ ಗಂಗನ್ನವರಮ ಮುರಗೇಪ್ಪ ಗಾಡವಿ, ಶಿವಾನಂದ ಕಂಬಾರ, ಶಂಕರ ಗಾಡವಿ, ಬಾಳೇಶ ಬುಜನವರ, ಮಲ್ಲಕಾರ್ಜುನ ಬುಜನ್ನವರ, ನಿಂಗಪ್ಪ ಬಡ್ನಿಂಗೋಳ, ನಬಿಸಾಬ ನಧಾಪ, ನಾಗಯ್ಯ ಮಠಪತಿ, ಸಂಜು ಬಾರ್ಕಿ ಮತ್ತು ಶಿಕ್ಷಕರು ಮತ್ತಿತರರು ಉಪಸ್ಥಿತರಿದರು

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group