ಸಮ್ಮೇಳನದ ಸರ್ವಾಧ್ಯಕ್ಷರಿಗೆ ವಿಧ್ಯುಕ್ತ ಆಹ್ವಾನ

Must Read

ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ೯ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳು ೨೪-೨-೨೦೨೪ ರಂದು ಮಹಾಂತೇಶ ನಗರದ ಮಹಾಂತಭವನದಲ್ಲಿ ಜರುಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬೆಳಗಾವಿಯ ಹಿರಿಯ ಮಹಿಳಾ ಸಾಹಿತಿ ಶ್ರೀಮತಿ ಜ್ಯೋತಿ ಬದಾಮಿ ಇವರಿಗೆ ವಿಧ್ಯುಕ್ತ ಆಹ್ವಾನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಇವರು ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಶ್ರೀಮತಿ ಜ್ಯೋತಿ ಬದಾಮಿಯವರ ಕೊಡುಗೆ ಅಪಾರವಾಗಿದೆ. ಕವನ ಸಂಕಲನಗಳು, ಐತಿಹಾಸಿಕ ಕತೆಗಳು, ಜೀವನಾಧಾರಿತ ಕಾದಂಬರಿಗಳು ಮುಂತಾದ ಅನೇಕ ಕೃತಿಗಳನ್ನು ಇವರು ರಚಿಸಿದ್ದಾರೆ ಅಲ್ಲದೇ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿಯೂ ಕೂಡ ಅಪಾರವಾದ ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.ಇವರು ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಸಂದ ಗೌರವವಾಗಿದೆ.ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಹಂಜಿ ಮತ್ತು ಕಾರ್ಯದರ್ಶಿಗಳಾದ ಎನ್. ಬಿ. ಕರವಿನಕೊಪ್ಪ,  ರಮೇಶ,ಬಾಗೇವಾಡಿ, ಕೋಶಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಬಂಗಾರಿ, ರಮೇಶ ಮಗದುಮ್ ಮತ್ತು ಎಲ್ಲ ಮಹಿಳಾ ಪ್ರತಿನಿಧಿಗಳು ಸೇರಿ ಸರ್ವಾಧ್ಯಕ್ಷರನ್ನು ಸನ್ಮಾನಿಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಮ್ ವಾಯ್ ಮೆಣಸಿನಕಾಯಿ, ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ, ಮಹಿಳಾ ಪ್ರತಿನಿಧಿಗಳಾದ ಡಾ. ಹೇಮಾ ಸೊನೋಳಿ, ಭುವನೇಶ್ವರಿ, ಡಾ. ಭಾರತಿ ಮಠದ, ಇಂದಿರಾ ಮೋಟೆಬೆನ್ನೂರ, ಸುನಂದಾ ಎಮ್ಮಿ, ಸುಧಾ ಪಾಟೀಲ, ಶಾಲಿನಿ ಚಿನಿವಾಲಾರ, ಲಲಿತಾ ಪರ್ವತರಾವ್, ಅನ್ನಪೂರ್ಣ ಖನೋಜ, ಭೂಮಿಕಾ,ಆಶಾ ಯಮಕನಮರಡಿ, ಹಿರಿಯರಾದ ಸ. ರಾ.ಸುಳುಕುಡೆ, ಡಾ. ಎಸ್. ಡಿ. ಪಾಟೀಲ, ಅಶೋಕ ಬದಾಮಿ, ಮುರಗೇಶ ಶಿವಪೂಜಿ, ನಿತಿನ್ ಮೆಣಸಿನಕಾಯಿ, ಪ್ರವೀಣ ಕಡಬಿ, ಸುಭಾಸ ಎಣಗಿ, ಬನಶಂಕರಿ, ನರಸಿಂಗ ಕಮತೆ,ಲ ಮುಂತಾದ ಗಣ್ಯರು ಕನ್ನಡಭಿಮಾನಿಗಳು ಉಪಸ್ಥಿತರಿದ್ದರು. 

ಗೌರವ ಸನ್ಮಾನ ಸ್ವೀಕರಿಸಿದ ಶ್ರೀಮತಿ ಜ್ಯೋತಿ ಬದಾಮಿಯವರು ಮಾತನಾಡಿ, ಹಿರಿಯರಾದ ನಿಮ್ಮೆಲ್ಲರ ಪ್ರೋತ್ಸಾಹಪೂರ್ವಕ ಆಶೀರ್ವಾದ ಹೀಗೆಯೇ ಇರಲಿ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group