ಮೈಸೂರು- ಮೈಸೂರಿನ ಹಿರಿಯ ಸಾಹಿತಿ, ಪತ್ರ ಕರ್ತ, ಪರಿಸರ ಪ್ರೇಮಿ ಭೇರ್ಯ ರಾಮಕುಮಾರ್ ಅವರು ಬೆಂಗಳೂರಿನ ಚೇತನ ಇಂಟರ್ ನ್ಯಾಶನಲ್ ಅಕ್ಯಾಡೆಮಿ ಸಂಸ್ಥೆಯ ಪ್ರತಿಷ್ಠಿತ ಚಾಣಕ್ಯ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
1985 ರಿಂದ ಇಲ್ಲಿಯವರೆಗೆ 356 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ, ಹತ್ತು ಸಾವಿರ ಸಸಿಗಳ ವಿತರಣೆ, ಸಾಮೂಹಿಕ ನೇತ್ರ ದಾನ ಕಾರ್ಯಕ್ಕೆ ಐದು ಸಾವಿರಕ್ಕೂ ಹೆಚ್ಹು ಜನರ ಮನವೊಲಿಕೆ, ಸ್ವತಃ ದೇಹದಾನ, ಕನ್ನಡ ಪರ ಹೋರಾಟ ಸಾಧನೆಗಳನ್ನು ಪರಿಗಣಿಸಿ ಚಾಣಕ್ಯ ಅಂತಾರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ವಸುಧಾ ಶ್ರೀನಿವಾಸ ತಿಳಿಸಿದ್ದಾರೆ.
ಮುಂದಿನ ಭಾನುವಾರ ಬೆಂಗಳೂರಿನ ಬಸವನಗುಡಿಯ ಉದಯ ಭಾನು ಕಲಾಸಂಘದಲ್ಲಿ
ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಾಧಕ ಭೇರ್ಯ ರಾಮಕುಮಾರ್ ಅವರಿಗೆ ಹಿರಿಯ ಸಾಧಕರ ಸಮ್ಮುಖ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.