ಮೈಸೂರು: (ಲಿಂಗದೇವರಕೊಪ್ಪಲು) ಬದಲಾವಣೆಯನ್ನು ಹೆಚ್ಚುಜನ ಇಷ್ಟಪಡುವುದಿಲ್ಲ. ಕೆಲವರು ಬಲವಂತವಾಗಿ ಬದಲಾವಣೆ ಮಾಡಿಕೊಳ್ಳುತ್ತಾರೆ.ಇನ್ನು ಕೆಲವರು ಸಂತೋಷದಿಂದ ಬದಲಾವಣೆ ಮಾಡಿಕೊಳ್ಳುತ್ತಾರೆ, ಆದರೂ ಬದಲಾವಣೆ ಜಗದ ನಿಯಮ ಎಂದು ಆಡಳಿತಾಧಿಕಾರಿಗಳ ಸೇವಾ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾಜೀ ಅಭಿಪ್ರಾಯಪಟ್ಟರು.
ಅವರು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಲಿಂಗ ದೇವರಕೊಪ್ಪಲಿನಲ್ಲಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಸಮಯದ ಕರೆ – ಸಕಾರಾತ್ಮಕ ಬದಲಾವಣೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಡಳಿತಾಧಿಕಾರಿಯ ವೃತ್ತಿ ಜೀವನವು ಹಗ್ಗದ ಮೇಲಿನ ನಡಿಗೆಯಂತೆ, ಗುರಿಯೆಡೆಗೆ ಸಾಗುತ್ತಿದ್ದರೂ ಸವಾಲುಗಳನ್ನು ಎದುರಿಸಲು ತನ್ನಲ್ಲಿರುವ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಸಮೋತಲನೆಯಿಂದ ವಿನಿಯೋಗಿಸಬೇಕಾಗುತ್ತದೆ. ಯಾವ ಕಡೆಗೆ ವಾಲಿದರೂ ಅಸಮತೋಲನೆ ಉಂಟಾಗಿ ಕೆಲಸದಲ್ಲಿ ಅಸಂತುಷ್ಟಿ ಮತ್ತು ಒತ್ತಡ ಕಾಣಬರುತ್ತವೆ. ಹಾಗಾಗಿ ಗುರಿಯೆಡೆಗೆ ದೃಷ್ಟಿಯಿದ್ದರೂ ಉತ್ತಮ ಫಲಿತಾಂಶಕ್ಕಾಗಿ ಸಮತೋಲನೆಯ ಬಗ್ಗೆ ಗಮನ ಇಡಬೇಕಾಗುತ್ತದೆ ಎಂದರು.
ಬಿಕೆ ಹರೀಶ್ ಅಭಿಯಾನದ ಕಾರ್ಯಕ್ರಮದ ಬಗ್ಗೆ ವಿಚಾರ ಮಾಡಿಸಿದರು. ತಂಡದ ಚರ್ಚೆಯಲ್ಲಿ ಬಿಕೆ ಸೀತಾರಾಂ ಮೀನ,ಡಾ.ಆರ್.ಎಚ್.ಪವಿತ್ರ, ಬಿಕೆ. ಗಿರೀಶ್ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಬಿಕೆ ಲಕ್ಷ್ಮೀಜೀ,ಬಿಕೆ ಅವಧೇಶ್ ಜಿ, ಬಿಕೆ ರಂಗನಾಥ್ ಬಿಕೆ ವೀಣಾ ವಿವಿಧ ಇಲಾಖೆಯ ಅಧಿಕಾರಿಗಳು, ನಾಲ್ಕು ಜಿಲ್ಲೆಯ ರಾಜಯೋಗ ಶಿಕ್ಷಕಿಯರು, ವಿದ್ಯಾರ್ಥಿಗಳು ಓಂ ಶಾಂತಿ ನ್ಯೂಸ್ ಸರ್ವಿಸಸ್ ನ ಬಿಕೆ ಆರಾಧ್ಯ ಹಾಜರಿದ್ದರು.