spot_img
spot_img

ಬೀದರ ಜಿಲ್ಲಾಡಳಿತಕ್ಕೆ ವಿದೇಶಿ ಶ್ವಾನದ ಮೇಲೆ ಪ್ರೀತಿ

Must Read

- Advertisement -

ಸ್ಥಳೀಯ ಶ್ವಾನಕ್ಕೆ ಚಿತ್ರಹಿಂಸೆ ಕೊಟ್ಟು ಕಗ್ಗೊಲೆ ಮಾಡಿದ ಜಿಲ್ಲಾಡಳಿತ

ಬೀದರ – ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಮಂಗಳವಾರ ಗಡಿ ಜಿಲ್ಲೆ ಬೀದರ ನಲ್ಲಿ ಆಕರ್ಷಕ ವಿದೇಶಿ ಶ್ವಾನಗಳ ಪ್ರದರ್ಶನ ನಡೆಯಿತು. ಜರ್ಮನ್ ಶೆಫರ್ಡ್, ಡಾಬರ್ಮೇನ್, ಸುರ್ಜಿ, ಮುಧೋಳ ನಾಯಿ, ಪಫ್ಷಿ ಸೇರಿದಂತೆ ಸುಮಾರು ೧೨ ತಳಿಯ ಶ್ವಾನಗಳನ್ನು ನೋಡಿ ಜನ್ರು ಖುಷಿ ಪಟ್ಟರು. ಜಿಲ್ಲಾ ಪಂಚಾಯತ ನೇತೃತ್ವದಲ್ಲಿ ನೆಹರು ಕ್ರೀಡಾಂಗಣ ದಲ್ಲಿ ಶ್ವಾನ ಪ್ರದರ್ಶನ ನಡೆಯಿತು.

- Advertisement -

ಆದರೆ ಇನ್ನೊಂದು ಕಡೆ ಸ್ಥಳೀಯ ಶ್ವಾನಗಳ ಮೇಲೆ ಯಾಕೆ ಜಿಲ್ಲಾಡಳಿತಕ್ಕೆ ಇಷ್ಟೊಂದು ದ್ವೇಷ ಎಂಬುದು ಜನತೆಯ ಪ್ರಶ್ನೆ. ಶ್ವಾನಗಳ ವಿಷಯದಲ್ಲಿ  ಜಿಲ್ಲಾಡಳಿತ ಕ್ರೂರತೆಯಿಂದ ನಡೆದುಕೊಂಡಿದ್ದು ನಗರದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯ ಶ್ವಾನವನ್ನು ಹಿಡಿದು ನೆಲಕ್ಕೆ ಅಪ್ಪಳಿಸಿ ಬಡೆದು ಕೊಂದು ಹಾಕಿರುವ ದಾರುಣ ಘಟನೆಗೆ ಬೀದರ ಸಾಕ್ಷಿಯಾಗಿದೆ. ಸ್ಥಳದಲ್ಲಿಯೇ ಕೆಲವು ಶ್ವಾನಗಳ ಸಾವು ನೋವು ಆಗಿದ್ದು ದ್ಯಶ್ಯ ನೋಡಿದರೆ ಎಂಥವರ ಎದೆಯೂ ಕರಗಿ ನೀರಾಗುತ್ತದೆ.

- Advertisement -

ಒಂದು ಕಡೆ ತಾವು ಸಾಕಿದ ಪ್ರೀತಿಯ ಶ್ವಾನಗಳನ್ನು ಹಿಡಿದುಕೊಂಡು ಪ್ರಶಸ್ತಿಗಾಗಿ ಓಡುತ್ತಿರುವ ಶ್ವಾನಗಳ ಮಾಲೀಕರು, ಶ್ವಾನ ಪ್ರದರ್ಶನದಲ್ಲಿ ಗೆದ್ದು ಅಧಿಕಾರಿಗಳಿಂದ ಖುಷಿ ಖುಷಿಯಲ್ಲಿ ಪ್ರಶಸ್ತಿ ಪಡೆಯುತ್ತಿರುವ ಮಾಲೀಕರ ದೃಶ್ಯಗಳು ನಗರಕ್ಕೆ ಮೆರುಗು ಕೊಟ್ಟಿವೆ. ಗ್ರಾಮೀಣ ಭಾಗದ ಜನರಿಗೆ ಬೀದಿ ನಾಯಿಗಳು ಬಿಟ್ಟರೆ ಅದೆಷ್ಟೋ ವಿವಿಧ ತಳಿಯ ಶ್ವಾನಗಳು ಇವೆ ಎಂದು ಇನ್ನೂ ತಿಳಿದಿಲ್ಲ. ಇಂದು ದೇಶಿ ಹಾಗೂ ವಿದೇಶಿಯ ವಿಭಿನ್ನ ರೀತಿಯ ೧೬ ಶ್ವಾನ ತಳಿಗಳನ್ನು ನೋಡಿ ಜನರು ಖುಷಿ ಪಟ್ಟರು… ಹೌದು ಗಡಿ ಜಿಲ್ಲೆ ಬೀದರ್‌ನಲ್ಲಿ ಶ್ವಾನ ಪ್ರಿಯರಿಗೆ ವಿಭಿನ್ನ ತಳಿಯ ಶ್ವಾನಗಳನ್ನು ಪರಿಚಯಿಸಲು ಇಂದು ದೇಶಿ ಹಾಗೂ ವಿದೇಶಿ ಶ್ವಾನಗಳ ಪ್ರದರ್ಶನ ಮಾಡಲಾಯಿತು… ಪಶು ಪಾಲನಾ ಇಲಾಖೆಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನ ಆಯೋಜನೆ ಮಾಡಲಾಗಿತ್ತು… ಈ ಶ್ವಾನ ಪ್ರದರ್ಶನದಲ್ಲಿ ದೇಶಿ ಹಾಗೂ ವಿದೇಶಿಯ ವಿವಿಧ ೧೬ ತಳಿಗಳ ಶ್ವಾನಗಳೊಂದಿಗೆ ಮಾಲೀಕರು ಸ್ಪರ್ಧೆಯಲ್ಲಿ ಭಾಗಿಯಾದ್ದರು. 

ವಿಪರ್ಯಾಸವೆಂದರೆ ಇನ್ನೊಂದು ಕಡೆ ಇದೇ ಜಿಲ್ಲಾಡಳಿತ ಬೀದಿ ನಾಯಿಗಳಿಗೆ ಚಿತ್ರಹಿಂಸೆ ನೀಡಿದೆ. ಈ ಕುರಿತು ಬೀದರ ವಿಷ್ಣು ಪ್ರಿಯಾ ಗೌಶಾಲೆ ಸಂಘದ ಸದಸ್ಯರು ಪೊಲೀಸ್ ಉಪ ಆಯುಕ್ತರಾದ ಶಿವಕುಮಾರ್ ಶೀಲವಂತ ಅವರನ್ನು ಭೇಟಿ ಮಾಡಿದ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group