spot_img
spot_img

ಆರ್ ಎಸ್ಎಸ್ ಇಷ್ಟೊಂದು ಬೆಳೆಯಲು ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿಯೇ ಕಾರಣ

Must Read

- Advertisement -

ಗೋಕಾಕ – ಯಾರು ಜೀವನ ಪರ್ಯಂತ ಭಾರತ ಮಾತೆಯ ಆರಾಧನೆ ಬಿಟ್ಟು ಇನ್ನೇನೂ ಮಾಡಿಲ್ಲವೋ ಅಂಥ ಗುರೂಜಿಯವರಿಗೆ ಕೊಲೆಗಡುಕ ಎಂಬ ಬಿರುದು ಕೊಟ್ಟರು, ಸಂಘದ ಸ್ವಯಂ ಸೇವಕರನ್ನು ಸುಡುವುದು, ಅವರ ಮನೆ ಸುಡುವುದು ಇಂಥ ಅನೇಕ ಪ್ರಯತ್ನಗಳ ನಂತರವೂ ಪ್ರಾಮಾಣಿಕತೆಯ ಆಧಾರದ ಮೇಲೆ ಸಂಘ ಬೆಳೆದು ಬಂದಿದೆ. ಸಂಘವನ್ನು ಮುರಿದು ಹಾಕಲು ೧೯೨೯ ರಿಂದಲೂ ಅನೇಕ ರೀತಿಯ ಪ್ರಯತ್ನಗಳು ನಡೆದಿವೆ. ಆದರೂ ಇನ್ನೂವರೆಗೂ ಸಂಘ ದಿಟ್ಟವಾಗಿ ನಿಂತಿದೆ. ಇದಕ್ಕೆ ಕಾರಣ ಸಂಘದ ಕಾರ್ಯಕರ್ತರ ಪ್ರಾಮಾಣಿಕತೆ, ದೇಶಭಕ್ತಿಯೇ ಕಾರಣ ಹಾಗೂ ಇದು ಯಾರದೇ ಮರ್ಜಿಗೆ ಒಳಗಾಗದೇ ಇರುವುದೇ ಕಾರಣ ಎಂದು ಆರ್ ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಕೇಶವ ಸ್ಮೃತಿ ಟ್ರಸ್ಟ್ ವತಿಯಿಂದ ಗೋಕಾಕದಲ್ಲಿ ನಿರ್ಮಾಣಗೊಂಡ  ಸಂಘದ ನೂತನ ಕಟ್ಟಡ ‘ಪ್ರೇರಣಾ’ ವಾಸ್ತು ಶಾಂತಿ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ಕಾರ್ಯಾಲಯವೆಂದರೆ ಏನು ? ಇದು ಕಚೇರಿಯಲ್ಲ, ಮನೆಯಲ್ಲ, ದೇವಸ್ಥಾನವಲ್ಲ ಆದರೆ ಇದೊಂದು ಪ್ರೇರಣಾ ಕೇಂದ್ರ ಇಲ್ಲಿ ಬರುವವರೆಲ್ಲರೂ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಪ್ರೇರಣೆ ತೆಗೆದುಕೊಂಡು ಹೋಗಬೇಕು ಎಂದು ನುಡಿದ ಅವರು, ಸಂಘವು ಹಲವು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ನಡೆದು ಬಂದ ದಾರಿಯನ್ನು ವಿವರಿಸಿದರು.

- Advertisement -

ಕೇಶವ ಸ್ಮೃತಿ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಕಾಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆದು ಬಂದ ದಾರಿ ಅತ್ಯಂತ ಉತ್ಸಾಹಪೂರ್ಣವಾತ್ತು. ಸುಮಾರು ೫೦ ವರ್ಷಗಳಿಂದಲೂ ಆರ್ ಎಸ್ ಎಸ್ ನಲ್ಲಿ ದುಡಿದಿರುವ ನನಗೆ ಹೆಮ್ಮೆಯೆನಿಸುತ್ತದೆ ಎಂದರು.

ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಗೋಕಾಕದ ಕೇಳ್ಕರ ವಕೀಲರ ಮನೆ ಸುಟ್ಟಿದ್ದು, ಯುವ ಕಾರ್ಯಕರ್ತರನ್ನು ಜೈಲಿನಲ್ಲಿ ಇಟ್ಟಿದ್ದನ್ನು ನೆನಪಿಸಿಕೊಂಡ ಅವರಯ,  ೧೯೫೩ ರಲ್ಲಿ ದೊಡ್ಡ ಪಥ ಸಂಚಲನ ನಡೆಯಿತು. ಧಾರಾಕಾರ ಮಳೆಯಲ್ಲಿಯೇ ನಿಂತು ಐತಿಹಾಸಿಕ ವಿದ್ವತ್ತು ನಡೆಯಿತು ಆ ಸಂದರ್ಭದಲ್ಲಿ ಧ್ವಜ ಪ್ರಮುಖ, ಕಾರ್ಯ ಚಾಲಕ, ಜಿಲ್ಲಾ ಕಾರ್ಯಚಾಲಕ ಅಂತ ಕೆಲಸ ಮಾಡಿದ್ದೇನೆ. ಹಿರಿಯರಾದ ಬಸವರಾಜ ಕಲಬುರ್ಗಿ, ಕೇಳ್ಕರ ವಕೀಲರು, ಮಾರುತಿ ಬೋಂಗಾಳೆ, ಸದರಜೋಶಿ ಗೋವಾ , ನಾಗಪ್ಪಣ್ಣ ಚಿಪ್ಪಲಕಟ್ಟಿ, ದತ್ತಾ ಗೋಠೆ,  ಚೂಡಾಮಣಿ ವಾಗಲೆ, ರಾಠೋಡ, ಬಾಬುರಾವ ಗೋಂಧಳಿ, ಹಟ್ಟಿ ಗುರುಗಳು….ಸೇರಿದಂತೆ ಗೋಕಾಕದ ಹಿರಿಯರು ಮಹತ್ವದ ಕೊಡುಗೆಯನ್ನು ಆರ್ ಎಸ್ ಎಸ್ ಗೆ ನೀಡಿದ್ದಾರೆ ಎಂಬುದಾಗಿ ಸ್ಮರಣೆ ಮಾಡಿಕೊಂಡರು. ಹಾಗೆಯೇ ಗೋಕಾಕದ ಪ್ರಚಾರಕರನ್ನು, ಸಂಚಾಲಕರನ್ನು ನೆನಪಿಸಿಕೊಂಡರು.

- Advertisement -

ಗೋಕಾಕಕ್ಕೆ ಒಂದು ಕಾರ್ಯಾಲಯದ ಅಗತ್ಯ ಇತ್ತು ನಗರದ ಒಬ್ಬ ಗಣ್ಯರು ಜಾಗವನ್ನು ದಾನ ಮಾಡಿದ್ದರಿಂದ ಇಂದು ಕಾರ್ಯಾಲಯ ಕಟ್ಟಡ ಎಂದು ನಿಂತಿದೆ ಎಂದು ಪ್ರೇರಣಾ ನೂತನ ಕಟ್ಟಡದ ಬಗ್ಗೆ ಹೇಳಿದರು.

ಉತ್ತರ ಪ್ರಾಂತದ ಪ್ರಾಂತ ಸಂಚಾಲಕ ಬಸವರಾಜ ಡಂಬಳ ಮಾತನಾಡಿ, ಸ್ವಯಂ ಸೇವರಕರ ಮನೆಯೇ ಸಂಘಕ್ಕೆ ಕಾರ್ಯಾಲಯ ಇದ್ದಂತೆ ಆದರೆ ಎಲ್ಲ ಸಂಚಾಲಕರು ಪರಸ್ಪರ ಅರ್ಥ ಮಾಡಿಕೊಳ್ಳಲು ಸಂಘದ ಮನೆಯೊಂದು ಬೇಕು ಎಂಬ ಅರ್ಥದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಲು ಈ ಪ್ರೇರಣಾ ಕಟ್ಟಡ ಪ್ರೇರಣೆ ನೀಡುತ್ತದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಆಶೀರ್ವಚನ ನೀಡುತ್ತ, ಸೈನ್ಯವನ್ನು ಬಿಟ್ಟರೆ ಶಿಸ್ತು, ಸಂಯಮ, ದೇಶಭಕ್ತಿಯನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡು ಬಂದಿದ್ದು ಆರ್ ಎಸ್ ಎಸ್ ಮಾತ್ರ. ಆದ್ದರಿಂದ ದೇಶದ ಪ್ರತಿ ಮನೆ ಮನೆಯಿಂದಲೂ ಆರ್ಎಸ್ ಎಸ್ ಕಾರ್ಯಕರ್ತರು ಹುಟ್ಟಬೇಕು ಎಂದರು.

ಷ ಬ್ರ ರಾಚೋಟೇಶ್ವರ ಶ್ರೀಗಳು, ಶಿವಬೋಧರಂಗ ಮಠ ಮೂಡಲಗಿಯ ಶ್ರೀ ದತ್ತಾತ್ರಯ ಬೋಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ವಿಭಾಗ ಸಂಚಾಲಕ ಹಾರೂಗೇರಿ ವಕೀಲರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡಕ್ಕಾಗಿ ಶ್ರಮಿಸಿದ ಶ್ರಮಿಕರೆಲ್ಲರನ್ನೂ ಸನ್ಮಾನಿಸಲಾಯಿತು

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group